India's Biggest Car Thief: 27 ವರ್ಷದಲ್ಲಿ 5000 ಕಾರು ಕದ್ದಿದ್ದ, 3 ಪತ್ನಿ ಹೊಂದಿದ್ದ ಕಳ್ಳ ಅರೆಸ್ಟ್‌

By Manjunath NayakFirst Published Sep 6, 2022, 3:18 PM IST
Highlights

India's Biggest Car Thief Anil Chauhan: ಕಳೆದ 27 ವರ್ಷದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 5000ಕ್ಕೂ ಹೆಚ್ಚು ಕಾರುಗಳನ್ನು ಕದ್ದಿದ್ದ ದೇಶದ ಅತಿದೊಡ್ಡ ಕಳ್ಳನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ

ನವದೆಹಲಿ (ಸೆ. 06): ಕಳೆದ 27 ವರ್ಷದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 5000ಕ್ಕೂ ಹೆಚ್ಚು ಕಾರುಗಳನ್ನು (Car) ಕದ್ದಿದ್ದ ದೇಶದ ಅತಿದೊಡ್ಡ ಕಳ್ಳ ಅನಿಲ್‌ ಚವಾಣ್‌ (52) ಎಂಬಾತನನ್ನು ದೆಹಲಿ ಪೊಲೀಸರು (Delhi Police) ಸೋಮವಾರ ಬಂಧಿಸಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಈತ ಕಳೆದ 3 ದಶಕಗಳಿಂದ ಕಾರು ಕಳ್ಳತನ ಹವ್ಯಾಸ ಮಾಡಿಕೊಂಡಿದ್ದ. ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಈಶಾನ್ಯದ ರಾಜ್ಯಗಳಲ್ಲಿ ಆಯುಧಗಳ ಕಳ್ಳ ಸಾಗಾಣಿಕೆಯಲ್ಲೂ ತೊಡಗಿಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಪ್ರಾಥಮಿಕ ವಿಚಾರಣೆ ವೇಳೆ ಕಾರು ಕಳ್ಳತನದ ವೇಳೆ ಹಲವು ಟ್ಯಾಕ್ಸಿ ಡ್ರೈವರ್‌ಗಳನ್ನು ಹತ್ಯೆಮಾಡಿದ್ದ ಮತ್ತು ಕಳ್ಳತನದಿಂದ ಸಂಪಾದಿಸಿದ್ದ ಹಣದಿಂದ ಐಷಾರಾಮಿ ಬದುಕು ನಡೆಸುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಅನಿಲ್‌ ಚವಾಣ್‌ 3 ಜನ ಪತ್ನಿ ಹಾಗೂ 7 ಜನ ಮಕ್ಕಳನ್ನು ಹೊಂದಿದ್ದಾನೆ.

ದೇಶದ ಅತಿ ದೊಡ್ಡ ಕಾರು ಕಳ್ಳ: ಈತ ದೇಶದ ಅತಿ ದೊಡ್ಡ ಕಾರು ಕಳ್ಳನಾಗಿದ್ದು, ಕಳೆದ 27 ವರ್ಷಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಕಾರುಗಳನ್ನು ಕದ್ದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕೇಂದ್ರ ದೆಹಲಿ ಪೊಲೀಸರ ವಿಶೇಷ ಸಿಬ್ಬಂದಿ ಸುಳಿವಿನ ನಂತರ ದೇಶ್ ಬಂಧು ಗುಪ್ತಾ ರಸ್ತೆ ಪ್ರದೇಶದಿಂದ ಈತನನ್ನು ಬಂಧಿಸಲಾಗಿದೆ.

ಅನಿಲ್ ಸದ್ಯ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದ. ಆರೋಪಿ ಉತ್ತರ ಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದು, ಈಶಾನ್ಯ ರಾಜ್ಯಗಳ ನಿಷೇಧಿತ ಸಂಘಟನೆಗಳಿಗೆ ಅವುಗಳನ್ನು ಪೂರೈಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

4 ಕೋಟಿ ಚಿನ್ನಾಭರಣ ಕದ್ದ ಕಳ್ಳರು, 40 ರೂಪಾಯಿ ಪೇಟಿಎಂ ಮಾಡಿ ಸಿಕ್ಕಿಬಿದ್ರು!

ಅತಿ ಹೆಚ್ಚು ಮಾರುತಿ 800 ಕಾರು ಕದ್ದ ಕುಖ್ಯಾತಿ: ಅನಿಲ್ ದೆಹಲಿಯ ಖಾನ್ಪುರ್ ಪ್ರದೇಶದಲ್ಲಿ ತಂಗಿದ್ದಾಗ ಆಟೋರಿಕ್ಷಾಗಳನ್ನು ಓಡಿಸುತ್ತಿದ್ದ ಮತ್ತು 1995 ರ ನಂತರ ಕಾರುಗಳನ್ನು ಕದಿಯಲು ಪ್ರಾರಂಭಿಸಿದ್ದ. ಈ ಅವಧಿಯಲ್ಲಿ ಅನಿಲ್ ಚೌಹಾಣ್ ಅತಿ ಹೆಚ್ಚು ಮಾರುತಿ 800 ಕಾರುಗಳನ್ನು ಕದ್ದ ಕುಖ್ಯಾತಿ ಪಡೆದಿದ್ದಾನೆ. ದೇಶದ ವಿವಿಧ ಭಾಗಗಳಲ್ಲಿ ಕಾರುಗಳನ್ನು ಕದಿಯುತ್ತಿದ್ದ ಈತ  ಅವುಗಳನ್ನು ನೇಪಾಳ, ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ಕಳುಹಿಸುತ್ತಿದ್ದ.

ಆರೋಪಿ ಕಳ್ಳತನದ ಸಂದರ್ಭದಲ್ಲಿ ಕೆಲವು ಟ್ಯಾಕ್ಸಿ ಚಾಲಕರನ್ನು ಸಹ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ಅಂತಿಮವಾಗಿ ಅಸ್ಸಾಂಗೆ ತೆರಳಿದ ಈತ  ಅಲ್ಲಿ ವಾಸಿಸಲು ಪ್ರಾರಂಭಿಸಿದ್ದ. ಅಕ್ರಮವಾಗಿ ಸಂಪಾದಿಸಿದ ಸಂಪತ್ತಿನಿಂದ ದೆಹಲಿ, ಮುಂಬೈ ಮತ್ತು ಈಶಾನ್ಯ ರಾಜ್ಯಗಳಲ್ಲಿ ಆಸ್ತಿಗಳನ್ನು ಸಂಪಾದಿಸಿದ್ದ. ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಆರೋಪಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನೂ ದಾಖಲಿಸಿತ್ತು. 

click me!