ರಾಘವೇಂದ್ರ ಬ್ಲಾಕ್ ನಿವಾಸಿ ವೆಂಕಟೇಶ್ ಮೃತ ದುರ್ದೈವಿ. ಈ ಕೃತ್ಯ ಸಂಬಂಧ ಮುನೇಶ್ವರ ಬ್ಲಾಕ್‌ನ ಮೃತನ ಪರಿಚಿತ ಸಿದ್ದರಾಜುನನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ತನ್ನ ಅಂಗಡಿ ಪಕ್ಕದಲ್ಲೇ ನೆಲೆಸಿರುವ ಸಿದ್ದರಾಜು ಪತ್ನಿ ಜತೆ ವೆಂಕಟೇಶ್ ಮಾತನಾಡುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು(ಡಿ.05): ತನ್ನ ಪತ್ನಿ ಜತೆ ರಾತ್ರಿ ಮಾತನಾಡುತ್ತಿದ್ದನ್ನು ಅಪಾರ್ಥವಾಗಿ ತಿಳಿದು ಲೇಡಿಸ್ ಟೈಲರ್‌ಗೆ ಚಪ್ಪಲಿಯಿಂದ ಹೊಡೆದು ಕೆಳಗೆ ತಳ್ಳಿ ಕೊಂದಿರುವ ದಾರುಣ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಘವೇಂದ್ರ ಬ್ಲಾಕ್ ನಿವಾಸಿ ವೆಂಕಟೇಶ್ (41) ಮೃತ ದುರ್ದೈವಿ. ಈ ಕೃತ್ಯ ಸಂಬಂಧ ಮುನೇಶ್ವರ ಬ್ಲಾಕ್‌ನ ಮೃತನ ಪರಿಚಿತ ಸಿದ್ದರಾಜುನನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ತನ್ನ ಅಂಗಡಿ ಪಕ್ಕದಲ್ಲೇ ನೆಲೆಸಿರುವ ಸಿದ್ದರಾಜು ಪತ್ನಿ ಜತೆ ವೆಂಕಟೇಶ್ ಮಾತನಾಡುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ವೆಂಕಟೇಶ್ ಮೂಲತಃ ಆಂಧ್ರಪ್ರದೇಶ ರಾಜ್ಯದವರಾಗಿದ್ದು, ಹಲವು ವರ್ಷಗಳಿಂದ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ರಾಘವೇಂದ್ರ ಬ್ಲಾಕ್‌ನಲ್ಲಿ ನೆಲೆಸಿದ್ದರು. ಮುನೇಶ್ವರ ಬ್ಲಾಕ್‌ನಲ್ಲಿ ಲೇಡಿಸ್ ಟೈಲರ್ ಅಂಗಡಿ ಇಟ್ಟಿದ್ದರು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸಿದ್ದರಾಜು, ಸಿಟಿ ಇನ್‌ಸ್ಟಿಟ್ಯೂಟ್ ಕ್ಲಬ್‌ನಲ್ಲಿ ನೌಕರಿಯಲ್ಲಿದ್ದಾನೆ. ವೆಂಕಟೇಶ್ ಅಂಗಡಿ ಪಕ್ಕದಲ್ಲೇ ತನ್ನ ಇಬ್ಬರು ಮಕ್ಕಳ ಹಾಗೂ ಪತ್ನಿ ಜತೆ ಆತ ವಾಸವಾಗಿದ್ದ. ಇನ್ನು ತನ್ನ ಅಂಗಡಿ ಪಕ್ಕದಲ್ಲೇ ನೆಲೆಸಿದ್ದ ರಿಂದ ಸಿದ್ದರಾಜು ಕುಟುಂಬಕ್ಕೆ ವೆಂಕಟೇಶ್‌ರವರ ಪರಿಚಯವಿತ್ತು.
undefined
ಬೆಂಗಳೂರು ಗಿರಿನಗರ ಬಾಬು ಕೊಲೆ: ಆಂಟಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಬೀದಿ ಹೆಣವಾದ
ಹೀಗಿರುವಾಗ ನ.2 ರಂದು ರಾತ್ರಿ ಮನೆಯಿಂದ ಸಿದ್ದರಾಜು ಪತ್ನಿ ಹೊರ ಹೋಗಿದ್ದಳು. ಎಷ್ಟು ಹೊತ್ತಾದರೂ ತಾಯಿ ಮನೆಗೆ ಬಾರದ ಕಾರಣ ಆತಂಕಗೊಂಡ ಆತನ ಇಬ್ಬರು ಮಕ್ಕಳು, ಅಂದು ರಾತ್ರಿ 9.30ರಲ್ಲಿ ಟೈಲರ್ ಅಂಗಡಿಗೆ ಬಂದು ತಮ್ಮ ತಾಯಿ ಮೊಬೈಲ್‌ಗೆ ವೆಂಕಟೇಶ್ ಮೊಬೈಲ್‌ನಿಂದ ಸಿದ್ದರಾಜು ಮಕ್ಕಳು ಕರೆ ಮಾಡಿಸಿದ್ದರು. ಇದಾದ ಕೆಲ ಹೊತ್ತಿನ ಬಳಿಕ ಮನೆಗೆ ಮರಳಿದ ಸಿದ್ದರಾಜು ಪತ್ನಿಯನ್ನು ಕಂಡು ‘ಎಲ್ಲಿಗೆ ಹೋಗಿದ್ದೀರಿ ? ನಿಮ್ಮ ಮಕ್ಕಳು ಆತಂಕಗೊಂಡಿದ್ದರು’ ಎಂದು ವೆಂಕಟೇಶ್ ಕೇಳಿದ್ದಾನೆ. ಆಗ ಇಬ್ಬರು ಮಾತುಕತೆಯಲ್ಲಿ ತೊಡಗಿದ್ದರು. ಅದೇ ಹೊತ್ತಿಗೆ ಕೆಲಸ ಮುಗಿಸಿ ಮನೆಗೆ ಪಾನಮತ್ತನಾಗಿ ಬಂದ ಸಿದ್ದರಾಜು, ಮನೆ ಹೊರಗೆ ಟೈಲರ್ ಜತೆ ಪತ್ನಿ ಮಾತನಾಡುತ್ತ ನಿಂತಿರುವುದು ಕಂಡು ಕೆರಳಿದ್ದಾನೆ. ಆಗ ‘ಏನ್ ಇಷ್ಟು ಹೊತ್ತಿನಲ್ಲಿ ನನ್ನ ಪತ್ನಿ ಜತೆ ಮಾತನಾಡೋದು’ ಎಂದು ತಪ್ಪಾಗಿ ಭಾವಿಸಿ ಗಲಾಟೆ ಶುರು ಮಾಡಿದ್ದಾನೆ.
ಈ ಹಂತದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ರೊಚ್ಚಿಗೆದ್ದ ಸಿದ್ದರಾಜು, ವೆಂಕಟೇಶ್‌ಗೆ ಚಪ್ಪಲಿಯಿಂದ ಹೊಡೆದು ಜೋರಾಗಿ ಆತ ತಳ್ಳಿದ್ದಾನೆ. ಆಗ ಆಯತಪ್ಪಿ ನಾಲ್ಕು ಅಡಿ ಕಟ್ಟೆಯಿಂದ ಕೆಳಗೆ ಬಿದ್ದು ವೆಂಕಟೇಶ್‌ನಿಗೆ ಗಂಭೀರ ಪೆಟ್ಟಾಗಿದೆ. ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಭಾನುವಾರ ಮುಂಜಾನೆ ವೆಂಕಟೇಶ್ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿ ದ್ದಾರೆ. ಈ ಘಟನೆ ಸಂಬಂಧ ಮೃತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಸಿದ್ದರಾಜುನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.