ಮಂಗಳೂರು: ಬ್ಯಾಂಕ್‌ ಅಧಿಕಾರಿ ಸೋಗಿನಲ್ಲಿ 4.89 ಲಕ್ಷ ರು. ವಂಚನೆ!

By Kannadaprabha News  |  First Published Jun 14, 2023, 12:17 AM IST

ಕೆವೈಸಿ ಅಪ್ಡೇಟ್‌, ಪಾರ್ಚ್‌ ಟೈಮ್‌ ಜಾಬ್‌ ನೆಪ ಸೇರಿದಂತೆ ಮೂರು ಪ್ರಕರಣದಲ್ಲಿ 4,89,999 ರು. ಬ್ಯಾಂಕ್‌ ಖಾತೆಯಿಂದ ವಂಚಿಸಿದ ಘಟನೆ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಡೆದಿದೆ.


ಮಂಗಳೂರು (ಜೂ.14) ಕೆವೈಸಿ ಅಪ್ಡೇಟ್‌, ಪಾರ್ಚ್‌ ಟೈಮ್‌ ಜಾಬ್‌ ನೆಪ ಸೇರಿದಂತೆ ಮೂರು ಪ್ರಕರಣದಲ್ಲಿ 4,89,999 ರು. ಬ್ಯಾಂಕ್‌ ಖಾತೆಯಿಂದ ವಂಚಿಸಿದ ಘಟನೆ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಡೆದಿದೆ.

ಮಾ.11ರಂದು ದೂರುದಾರರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ನಿಮ್ಮ ಕೆನರಾ ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದ್ದು, ಕೆವೈಸಿ ಅಪ್‌ ಡೇಟ್‌ ಮಾಡಬೇಕೆಂದು ಸಂದೇಶ ಬಂದಿತ್ತು. ನಂತರ ದೂರುದಾರರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಕೆವೈಸಿ ಅಪ್ಡೇಟ್‌ಗಾಗಿ ಬ್ಯಾಂಕ್‌ ಕಸ್ಟಮರ್‌ ಐಡಿ, ಎಟಿಎಂ ಕಾರ್ಡ್‌ ವಿವರ ಮತ್ತು ಅಕೌಂಟ್‌ ವಿವರ ನೀಡುವಂತೆ ತಿಳಿಸಿದ್ದು, ಅದರಂತೆ ಎಲ್ಲ ವಿವರ ಆ ವ್ಯಕ್ತಿಗೆ ತಿಳಿಸಿದ್ದಾರೆ. ನಂತರ ಆ ವ್ಯಕ್ತಿಯು ಮೊಬೈಲ್‌ಗೆ ಸ್ವೀಕತವಾದ ಒಟಿಪಿ ಶೇರ್‌ ಮಾಡುವಂತೆ ತಿಳಿಸಿದ್ದು ಒಟಿಪಿಯನ್ನು ಆ ವ್ಯಕ್ತಿಗೆ ನೀಡಿದ್ದರು. ಇದಾದ ಬಳಿಕ ಬ್ಯಾಂಕ್‌ ಖಾತೆಯಿಂದ 99,999 ರು. ಹಣ ವರ್ಗಾವಣೆಯಾಗಿದೆ. ಅಪರಿಚಿತ ವ್ಯಕ್ತಿಯ ತಾನು ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿದ್ದ.

Tap to resize

Latest Videos

BENGALURU: ಡಬಲ್‌ ಚಾರ್ಜ್‌ ಕೊಡದ ಅಸ್ಸಾಂ ಸಹೋದರರಿಗೆ ಚಾಕು ಚುಚ್ಚಿದ ಆಟೋ ಚಾಲಕ: ದಾರುಣ ಸಾವು

ಜೂ.12 ರಂದು ಸಂಜೆ ವೇಳೆ ದೂರುದಾರರ ಮೊಬೈಲ್‌ ನಂಬರ್‌ಗೆ ಅಪರಿಚಿತ ವ್ಯಕ್ತಿಯ ಮೊಬೈಲ್‌ನಿಂದ ಕೆವೈಸಿ ಅಪ್ಡೇಟ್‌ಗೆ ಸಂದೇಶ ಬಂದಿದೆ. ಅದರಲ್ಲಿ ಕಸ್ಟಮರ್‌ ಕೇರ್‌ ಎಂದು ನೀಡಿದ್ದು, ದೂರುದಾರರು ಆ ಕಸ್ಟಮರ್‌ ಕೇರ್‌ ಮೊಬೈಲ್‌ ನಂಬರ್‌ಗೆ ಕರೆ ವಿಚಾರಿಸಿದಾಗ ಆ ವ್ಯಕ್ತಿಯು ನಾನು ಕೆನರಾ ಬ್ಯಾಂಕ್‌ ಕೆವೈಸಿ ಅಪ್‌ ಡೇಟ್‌ ಮಾಡುವ ಅಧಿಕಾರಿ ಎಂದು ಹೇಳಿ ಬ್ಯಾಂಕ್‌ ವಿವರಗಳನ್ನು ತಿಳಿಸಿದ್ದಾನೆ. ನಂತರ ಆ ವ್ಯಕ್ತಿಯು ಮೊಬೈಲ್‌ಗೆ ಸ್ವೀಕೃತವಾದ ಒಟಿಪಿ ಶೇರ್‌ ಮಾಡುವಂತೆ ತಿಳಿಸಿದ್ದು, ಅದರಂಥೆ ಒಟಿಪಿಯನ್ನು ಆ ವ್ಯಕ್ತಿಗೆ ತಿಳಿಸಿದ್ದರು. ಇದಾದ ಬಳಿಕ ಬ್ಯಾಂಕ್‌ ಖಾತೆಯಿಂದ 1,75,000 ರು. ವರ್ಗಾವಣೆಯಾಗಿದೆ.

ಮೇ 25ರಂದು ಅಪರಿಚಿತ ವ್ಯಕ್ತಿ ಆನ್‌ æೖನ್ನಲ್ಲಿ ಪಾರ್ಚ್‌ ಟೈಮ್‌ ಉದ್ಯೋಗದ ಬಗ್ಗೆ ದೂರುದಾರರ ವಾಟ್ಸಪ್‌ ನಂಬರ್‌ಗೆ ಟೆಲಿಗ್ರಾಮ್‌ ಲಿಂಕ್‌ ಕಳುಹಿಸಿದ್ದು, ದೂರುದಾರರು ಅಪರಿಚಿತ ವ್ಯಕ್ತಿಯ ಮಾತು ನಂಬಿ ಸದರಿ ವ್ಯಕ್ತಿಯು ನೀಡಿದ ಟಾಸ್ಕ… ನಂತೆ ಮೇ 28ರಿಂದ ಜೂ.1ರ ವರೆಗೆ ಹಂತ ಹಂತವಾಗಿ ಒಟ್ಟು 2,15,000 ರು.ಗಳನ್ನು ಕಳುಹಿಸಿದ್ದಾರೆ. ದೂರುದಾರರಿಗೆ ಬಳಿಕ ಮೋಸ ಹೋಗಿರುವುದು ಗೊತ್ತಾಗಿದೆ. ನಗರದ ಸೈರ್ಬ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದೆ.

Bengaluru: ಮದ್ವೆಗೆ ಮುಂಚೆ ಒಟ್ಟಿಗೆ ಸ್ನಾನಕ್ಕೆ ಹೋಗಿದ್ದ ಜೋಡಿ ದಾರುಣ ಸಾವು

click me!