ಕಂಪನಿ ಮುಖ್ಯಸ್ಥನ ಆಸೆ ತೋರಿಸಿ 35 ಲಕ್ಷ ಎಗರಿಸಿದ್ರು!

By Web DeskFirst Published Nov 22, 2019, 11:07 AM IST
Highlights

ಕಂಪನಿ ಮುಖ್ಯಸ್ಥನ ಆಸೆ ತೋರಿಸಿ 35 ಲಕ್ಷ ವಂಚಿಸಿದರು!| ಜಪಾನ್‌ ಕಂಪನಿಯೊಂದಕ್ಕೆ ಮುಖ್ಯಸ್ಥನಾಗಿಸುವ ಆಫರ್

ಬೆಂಗಳೂರು[ನ.22]: ಜಪಾನ್‌ ಕಂಪನಿಯೊಂದಕ್ಕೆ ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುತ್ತೇವೆ ಎಂದು ಪರಿಚಯಿಸಿಕೊಂಡು ಔಷಧ ಉದ್ಯಮಿಯೊಬ್ಬರಿಂದ ಆನ್‌ಲೈನ್‌ ವಂಚಕರ .35.50 ಲಕ್ಷ ಹಣ ಲಪಾಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ರಾಮಗೊಂಡನಹಳ್ಳಿ ನಿವಾಸಿ ಶಿವಕುಮಾರ್‌ (50) ಎಂಬುವರು ವಂಚನೆಗೊಳಗಾಗಿದ್ದು, ವೈಟ್‌ಫೀಲ್ಡ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

MLA ಮಗ ಎಂದು ಹೇಳಿ ರೇಪ್ ಮಾಡ್ತಿದ್ದ MBA ಪದವೀಧರ..!

ಶಿವಕುಮಾರ್‌ ಅವರು ನಗರದಲ್ಲಿ ಫ್ರೀ ಲ್ಯಾನ್ಸ್‌ ಔಷಧ ಉದ್ಯಮ ನಡೆಸುತ್ತಿದ್ದು, ಔಷಧಿಗಳ ಬಗ್ಗೆ ಸಾಮಾಜಿಕ ಆನ್‌ಲೈನ್‌ ಜಾಹೀರಾತು ನೀಡಿದ್ದರು. ಕಿಯೋಶಿ ಮಿಜ್‌ಗುಚಿ ಎಂಬಾತ ಕರೆ ಮಾಡಿ, ನಾನು ಜಪಾನ್‌ನ ಮೊಸಿಡಾ ಫಾರ್ಮಾಸ್ಯುಟಿಕಲ್‌ ಕಂಪನಿ ಕಾರ್ಯ ನಿರ್ವಾಹಕ ನಿರ್ದೇಶಕನಾಗಿದ್ದೇನೆ. ಆನ್‌ಲೈನ್‌ನಲ್ಲಿ ನಿಮ್ಮ ಔಷಧಿಗೆ ಸಂಬಂಧಿಸಿದ ಜಾಹೀರಾತು ನೋಡಿದ್ದೇವೆ. ಬೆಂಗಳೂರಿನಲ್ಲಿ ಹೊಸ ಕಂಪನಿಯೊಂದನ್ನು ಆರಂಭಿಸುವ ಉದ್ದೇಶ ಇದ್ದು, ಅದಕ್ಕೆ ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುತ್ತೇವೆ ಎಂದು ಹೇಳಿ ಅ.17ರಂದು ಶಿವಕುಮಾರ್‌ ಅವರಿಗೆ ಇ-ಮೇಲ್‌ ಕಳುಹಿಸಿದ್ದ. ಕಂಪನಿ ಆರಂಭಿಸಲು ಬೇಕಾದ ಟಮೋಟಿವ್‌ ಹೆಸರಿನ ಕಚ್ಚಾ ಖನಿಜ ಖರೀದಿಸಿದರೆ ಶೇ.7ರಷ್ಟು(.16.5 ಕೋಟಿ) ಕಮಿಷನ್‌ ನೀಡುವುದಾಗಿ ಆಮಿಷವೊಡ್ಡಿದ್ದ. ಇದಕ್ಕಗಿ .8.67 ಲಕ್ಷ ಜಮೆ ಮಾಡಿದ್ದರು.

ನಂತರ ಕರೆ ಮಾಡಿದ್ದ ಆರೋಪಿಗಳು ಶಿವಕುಮಾರ್‌ ಅವರನ್ನು ದುಬೈಗೆ ಕರೆಸಿಕೊಂಡು .35.50 ಲಕ್ಷ ಕೊಡಿ ಎಂದಿದ್ದ. ಆದರೆ ಶಿವಕುಮಾರ್‌ ಹಣ ನೀಡದೆ ವಾಪಸ್‌ ಬಂದಿದ್ದರು. ನ.7ರಂದು (americaembassy0041@usa.com) ಹೆಸರಿನಲ್ಲಿ ಇ-ಮೇಲ್‌ ಬಂದಿದ್ದು ‘ನಿಮಗೆ ಅಮೆರಿಕದಿಂದ ಕಳುಹಿಸಿಕೊಡುವ ಕೋಟ್ಯಂತರ ಮೊತ್ತದ ಡಾಲರ್‌ ಸ್ವೀಕರಿಸಲು .35.50 ಲಕ್ಷ ಪ್ರೊಸೆಸಿಂಗ್‌ ಶುಲ್ಕ ಪಾವತಿಸಿ. ಇಲ್ಲದಿದ್ದರೆ ಡಾಲರ್‌ಗಳ ಸೂಟ್‌ಕೇಸ್‌ ವಾಪಸ್‌ ಕಳುಹಿಸುತ್ತೇವೆ’ ಎಂಬ ಸಂದೇಶ ಕಳುಹಿಸಲಾಗಿತ್ತು.

ಅಮೆರಿಕ ರಾಯಭಾರಿಯಿಂದಲೇ ಸಂದೇಶ ಬಂದಿದೆ ಎಂದು ಭಾವಿಸಿದ ಶಿವಕುಮಾರ್‌ ಅವರು ಆರೋಪಿಗಳು ನೀಡಿದ್ದ ವಿವಿಧ ಖಾತೆಗೆ .35.50 ಲಕ್ಷ ಜಮೆ ಮಾಡಿದ್ದಾರೆ. ಹಣ ವರ್ಗಾವಣೆ ಆಗುತ್ತಿದ್ದಂತೆ ಆರೋಪಿಗಳ ಮೊಬೈಲ್‌ ಸ್ವಿಚ್‌ಆಫ್‌ ಆಗಿದ್ದು, ವಂಚನೆಗೊಳಗಾಗಿರುವ ವಿಚಾರ ತಿಳಿದು ದೂರು ನೀಡಿದ್ದಾರೆ.

ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯೆಯ ಮೃತದೇಹ: ಅಪ್ಪ ಬಿಚ್ಚಿಟ್ರು ಚಿತ್ರಹಿಂಸೆಯ ಗುಟ್ಟು!

click me!