ದಲಿತ ಯುವಕನ ಜೊತೆ ವಿವಾಹ ತಪ್ಪಿಸಲು ಮಗಳ ಸಜೀವ ದಹಿಸಿದ ತಾಯಿ!

By Web Desk  |  First Published Nov 22, 2019, 10:23 AM IST

ದಲಿತ ಯುವಕನ ಜೊತೆ ವಿವಾಹ ತಪ್ಪಿಸಲು ಮಗಳ ಸಜೀವ ದಹಿಸಿದ ತಾಯಿ| ಘಟನೆಯಲ್ಲಿ ಯುವತಿ ಸಾವು, ತಾಯಿ ಮಹೇಶ್ವರಿಗೆ ಶೇ.80 ರಷ್ಟುಗಾಯ


ತಿರುಚಿ[ನ.22]: ದಲಿತ ಯುವಕನ ಜೊತೆ ಮದುವೆ ಆಗಲು ಬಯಸಿದ್ದ ತನ್ನ 17 ವರ್ಷದ ಮಗಳನ್ನು ಆಕೆಯ ತಾಯಿಯೇ ಸಜೀವವಾಗಿ ದಹಿಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಠನೆಯಲ್ಲಿ ಯುವತಿ ಸಾವನ್ನಪ್ಪಿದ್ದರೆ, ತಾಯಿ ಮಹೇಶ್ವರಿಗೆ ಶೇ.80ರಷ್ಟುಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ತಂದೆಯಿಂದಲೇ ಮಗಳ ಮರ್ಯಾದಾ ಹತ್ಯೆಯ ಯತ್ನ

Tap to resize

Latest Videos

undefined

ಪಿಯುಸಿ ಓದುತ್ತಿರುವ ಯುವತಿ, 22 ವರ್ಷದ ದಲಿತ ಯುವಕ ರಾಜಕುಮಾರ್‌ ಎಂಬಾತನ ಜೊತೆ ವಿವಾಹ ಬಯಸಿದ್ದಳು. ಭಾನುವಾರದಂದು ಯುವತಿಗೆ 18 ವರ್ಷ ತುಂಬಿದ್ದು, ಸೋಮವಾರದಂದು ಇವರಿಬ್ಬರೂ ವಿವಾಹಕ್ಕೆ ನಿರ್ಧರಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬಾಲಕಿಯ ಪೋಷಕರು ಆಕೆಯನ್ನು ಇನ್ನೊಬ್ಬ ಯುವಕನ ಜೊತೆ ಮದುವೆ ಮಾಡಲು ಮುಂದಾಗಿದ್ದರು.

ಈ ವಿಷಯವಾಗಿ ತಾಯಿ ಉಮಾ ಮಹೇಶ್ವರಿ ಮಗಳೊಂದಿಗೆ ವಾಗ್ವಾದ ನಡೆಸಿದ್ದು, ರಾಜಕುಮಾರ್‌ ಜೊತೆ ಸಂಬಂಧ ಮುರಿದುಕೊಳ್ಳುವಂತೆ ಹೇಳಿದ್ದಳು. ಆದರೆ, ಅದಕ್ಕೆ ಮಗಳು ಒಪ್ಪದೇ ಇದ್ದಾಗ ಆಕೆಯ ಮೇಲೆ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ನರಳಾಟ ಕೇಳಿ ಅಕ್ಕ ಪಕ್ಕದ ಮನೆಯವರು ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸುಟ್ಟಗಾಯದಿಂದ ಯುವತಿ ಸಾವಿಗೀಡಾಗಿದ್ದಾಳೆ.

ಓಡ್ಹೋಗಿ ಮದ್ವೆಯಾಗೋದು ಸಂಪ್ರದಾಯವಿಲ್ಲಿ!

click me!