ಬೆಂಗಳೂರು: ಖಾಸಗಿ ವಿಡಿಯೋ ತೋರಿಸಿ ಮಾಜಿ ಸೈನಿಕನ ಪತ್ನಿಯ ಸುಲಿಗೆ!

Published : Dec 29, 2024, 09:41 AM IST
ಬೆಂಗಳೂರು: ಖಾಸಗಿ ವಿಡಿಯೋ ತೋರಿಸಿ ಮಾಜಿ ಸೈನಿಕನ ಪತ್ನಿಯ ಸುಲಿಗೆ!

ಸಾರಾಂಶ

37 ವರ್ಷದ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಸುರೇಶ್ ಅಲಿಯಾಸ್ ಕುಣಿಗಲ್ ಸೂರಿ ವಿರುದ ಮಾಹಿತಿ ತಂತ್ರಜ್ಞಾನ ಕಾಯ್ದೆ, ಸುಲಿಗೆ, ಬೆದರಿಕೆ ಆರೋಪದಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. 

ಬೆಂಗಳೂರು(ಡಿ.29):  ಮಾಜಿ ಯೋಧನ ಪತ್ನಿಯ ಖಾಸಗಿ ವಿಡಿಯೋ ಹಾಗೂ ಪೋಟೋ ಇರಿಸಿಕೊಂಡು ಬ್ಲಾಕ್‌ಮೇಲ್ ಮಾಡಿ ಹಣ, ಚಿನ್ನಾಭರಣ ಹಾಗೂ ಕಾರು ಸುಲಿಗೆ ಮಾಡಿದ ಆರೋಪದಡಿ ರೌಡಿ ಶೀಟರ್ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.  37 ವರ್ಷದ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಸುರೇಶ್ ಅಲಿಯಾಸ್ ಕುಣಿಗಲ್ ಸೂರಿ ವಿರುದ ಮಾಹಿತಿ ತಂತ್ರಜ್ಞಾನ ಕಾಯ್ದೆ, ಸುಲಿಗೆ, ಬೆದರಿಕೆ ಆರೋಪದಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. 

ಏನಿದು ದೂರು?: 

ಸಂತ್ರಸ್ತೆಯು ಕುಟುಂಬದ ಜತೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಅಂತಸ್ತಿನ ಸ್ವಂತ ಮನೆಯಲ್ಲಿ ನೆಲೆಸಿದ್ದಾರೆ. 3 ವರ್ಷದ ಹಿಂದೆ ಆರೋಪಿ ಸುರೇಶ್ ತಾನು ಕ್ಯಾಬ್ ಚಾಲಕ ಎಂದು ಪರಿಚಯಿಸಿಕೊಂಡು ಸಂತ್ರಸ್ತೆಯ ಮನೆಯನ್ನು ಭೋಗ್ಯಕ್ಕೆ ಪಡೆದು ನೆಲೆಸಿದ್ದ. ಮನೆ ಖಾಲಿ ಮಾಡಿಕೊಂಡು ತೆರಳಿದ ನಂತರವೂ ಆಗಾಗ ಸಂತ್ರಸ್ತೆಗೆ ಕರೆ ಮಾಡಿ ಮನೆಯಲ್ಲಿ ಪತಿ ಮತ್ತು ಮಕ್ಕಳು ಇಲ್ಲದಿರುವಾಗ ಬಂದು ಹೋಗುತ್ತಿದ್ದ. ಇದರಿಂದ ಇಬ್ಬರ ನಡುವೆ ಸಲುಗೆ ಬೆಳೆದು ದೈಹಿಕ ಸಂಬಂಧ ಇರಿಸಿಕೊಂಡಿದ್ದರು. ಆಗ ಖಾಸಗಿ ಕ್ಷಣದ ವಿಡಿಯೋ ಹಾಗೂ ಫೋಟೋಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಆಗಾಗ ಬೆದರಿಸಿ ಹಣ ಪಡೆಯುತ್ತಿದ್ದ. 

ಡಿ.ಕೆ.ಸುರೇಶ್ ಸಹೋದರಿ ಎಂದು ನಂಬಿಸಿ ಕೋಟ್ಯಂತರ ರೂ. ವಂಚನೆ: ಬಂಗಾರಿ ದಂಪತಿ ಬಂಧನ

ಹಣ ಕೊಡುವಂತೆ ಬ್ಲಾಕ್‌ಮೇಲ್: 

ಈ ನಡುವೆ ಆರೋಪಿ ಸುರೇಶ್‌ಗೆ ಅಪರಾಧದ ಹಿನ್ನೆಲೆ ಇರುವ ವಿಚಾರ ಸಂತ್ರಸ್ತೆಗೆ ಗೊತ್ತಾಗಿದೆ. ಹೀಗಾಗಿ ಸಂತ್ರಸ್ತೆ ಆತನಿಗೆ ಮನೆ ಬಳಿ ಬರಬೇಡ ಎಂದಿದ್ದಾರೆ. ಇದಕ್ಕೆ ಆತ, ನಾನು ಕರೆದಾಗ ಬರಬೇಕು. ಕೇಳಿದಷ್ಟು ಹಣ ಕೊಡಬೇಕು. ಇಲ್ಲವಾದರೆ, ಖಾಸಗಿ ವಿಡಿಯೋಗಳನ್ನು ಎಲ್ಲರಿಗೂ ಕಳುಹಿಸಿ ಮರ್ಯಾದೆ ತೆಗೆಯವುದಾಗಿ ಬೆದರಿಸಿದ್ದಾನೆ. ನ.30 ರಾತ್ರಿ ವಾಲ್ಮೀಕಿ ನಗರದ ಸರ್ಕಲ್ ಬಳಿ ಎದುರಾಗಿರುವ ಆರೋಪಿ ಸುರೇಶ್, ನಾನು ಫೋನ್ ಮಾಡಿದಾಗ ಏಕೆ ಕರೆ ಸ್ವೀಕರಿಸುವುದಿಲ್ಲ ಪ್ರಶ್ನಿಸಿದ್ದಾನೆ. ಇದಕ್ಕೆ ಸಂತ್ರಸ್ತೆ, ನಿನ್ನ ಜತೆಗೆ ಮಾತ ನಾಡಲು ನನಗೆ ಇಷ್ಟವಿಲ್ಲ ಎಂದಿದ್ದಾರೆ. ಅಷ್ಟಕ್ಕೆ ಆರೋಪಿ ಸುರೇಶ್, ಚಾಕು ತೋರಿಸಿ ಬೆದರಿಸಿ ಸಂತ್ರಸ್ತೆ ಕೈಯಲ್ಲಿದ್ದ ಮೊಬೈಲ್, ಕಾರಿನ ಕೀ, ಮನೆಯ ಕೀ, 18ಗ್ರಾಂ ತೂಕದ ಚಿನ್ನದ ಓಲೆಗಳನ್ನು ಕಿತ್ತುಕೊಂಡಿದ್ದಾನೆ. 

ಇಬ್ಬಿಬ್ಬರು ಮಹಿಳೆಯೊಟ್ಟಿಗೆ ಗಂಡನ ಸಹವಾಸ. ಬೆಟ್ಟಿಂಗ್ ಚಟ ಬೇರೆ, ಬೇಸತ್ತ ಪತ್ನಿ ಸಾವಿಗೆ ಶರಣು

ಅಪರಿಚಿತರ ನಂಬರ್‌ಗಳಿಗೆ ಫೋಟೋ: 

ಬಳಿಕ ಸಂತ್ರಸ್ತೆ ಮನೆಯ ಬಳಿ ಇದ್ದ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಸಂತ್ರಸ್ತ ಕರೆ ಮಾಡಿ ಪ್ರಶ್ನಿಸಿ ದಾಗ, ನನಗೆ ಹಣ ಕೊಡುವುದಿಲ್ಲ ಎನ್ನುವೆಯಾ, ಮುಂದೆ ನಿನಗೆ ಗತಿ ಕಾಣಿಸುತ್ತೇನೆ ಎಂದು ಕರೆ ಸ್ಥಗಿತ ಗೊಳಿಸಿದ್ದಾನೆ. ಇದಾದ ಕೆಲ ದಿನಗಳ ಬಳಿಕ ಸಂತ್ರಸ್ತೆ ಜತೆಗಿನ ಖಾಸಗಿ ಫೋಟೋಗಳನ್ನು ಸಂತ್ರಸ್ತೆಯ ಪತಿ , ಮಗಳ ಮೊಬೈಲ್‌ನಲ್ಲಿದ್ದ ಅಪರಿಚಿತರ ಮೊಬೈಲ್ ಸಂಖ್ಯೆಗೆ ಬೈಗೆ ಕಳುಹಿಸಿದ್ದಾನೆ. ಈತನ ವಿರುದ್ದ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಮನವಿ ಮಾಡಿದ್ದಾರೆ.

ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆಯಲು ಸಿದ್ಧತೆ 

ಆರೋಪಿ ಸುರೇಶ್ ಇತ್ತೀಚೆಗೆ ತುಮಕೂರು ನ್ಯಾಯಾಲಯದ ಬಳಿ ವ್ಯಕ್ತಿಯೊಬ್ಬನಿಗೆ ಚಾಕು ಇಂದ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದಾನೆ. ಹೀಗಾಗಿ ಬಾಡಿ ವಾರಂಟ್ ಪಡೆದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲು ಬ್ಯಾಡರಹಳ್ಳಿ ಠಾಣೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Tantan Dating App; ₹1.66 ಕೋಟಿ ಹೂಡಿಕೆ… ಲಾಭ ಕೇವಲ ₹4,250! ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕ ಸುಂದರಿ ಮಾತು ಕೇಳಿ ಬೆತ್ತಲಾದ ಟೆಕ್ಕಿ!
Bengaluru murder case: ಮದುವೆ ಆಗಿದ್ದ ಗೆಳತಿಯನ್ನ ನೋಡಲು ಹೋಗಿದ್ದ ಗುಜರಿ ವ್ಯಾಪಾರಿ ಕೊಲೆ! ಗಂಡ ಮನೆಗೆ ಬಂದಾಗ ನಡಿದ್ದೇನು?