ಬೆತ್ತಲೆ ಹುಡುಗಿಯ ರಾತ್ರಿ ಕರೆ, ವಿಡಿಯೋ ಎಡಿಟ್ ಮಾಡಿ ಬೆದರಿಸಿ 3 ಲಕ್ಷ ರೂ ಪೀಕಿದ ರಹಸ್ಯ ಜಾಲ!

Published : Feb 27, 2023, 11:42 PM ISTUpdated : Feb 27, 2023, 11:46 PM IST
 ಬೆತ್ತಲೆ ಹುಡುಗಿಯ ರಾತ್ರಿ ಕರೆ, ವಿಡಿಯೋ ಎಡಿಟ್ ಮಾಡಿ ಬೆದರಿಸಿ 3 ಲಕ್ಷ ರೂ ಪೀಕಿದ ರಹಸ್ಯ ಜಾಲ!

ಸಾರಾಂಶ

ಯುವಕರನ್ನು ಟಾರ್ಗೆಟ್ ಮಾಡಿ ಗಂಟೆ ಹತ್ತಾದ ಮೇಲೆ ಒಂದು ವಿಡಿಯೋ ಕಾಲ್. ಅನಾಮಿಕ ನಂಬರ್ ರಿಸೀವ್ ಮಾಡಿದ ಬೆನ್ನಲ್ಲೇ ಆಕೆಡೆಯಿಂದ ಬೆತ್ತಲೆ ಹುಡುಗಿ. ಅಲ್ಲಿಗೆ ಕಾಲ್ ಕಟ್. ಇಷ್ಟೆ ನೋಡಿ. ಮರುಕ್ಷಣದಲ್ಲೇ ವಿಡಿಯೋ  ಎಡಿಟ್ ಮಾಡಿ ಇದೇ ವಿಡಿಯೋ ಇಟ್ಟು ಬೆದರಿಸಿ ಹಣ ಪೀಕುವ ಜಾಲವೊಂದು ಪತ್ತೆಯಾಗಿದೆ. ಈ ಜಾಲಕ್ಕೆ ಸಿಲುಕಿದ ಯುವಕ 3 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ.

ಮುಂಬೈ(ಫೆ.27) ಅನಾಮಿಕ ನಂಬರ್‌ನಿಂದ ಮುಂಬೈನ ಅಂಧೇರಿ ಯುವಕನಿಗೆ ವಿಡಿಯೋ ಕರೆಯೊಂದು ಬಂದಿದೆ. ಗಂಟೆ ಹತ್ತು ಕಳೆದ ಮೇಲೆ ಈ ಕರೆಗಳು ಆರಂಭಗೊಳ್ಳುತ್ತದೆ. ಹೀಗೆ ವಿಡಿಯೋ ಕಾಲ್ ಸ್ವೀಕರಿಸಿದ 31ರ ಹರೆಯದ ಯವಕ ಒಂದು ಕ್ಷಣ ದಂಗಾಗಿದ್ದಾನೆ. ಕಾರಣ ವಿಡಿಯೋ ಕರೆ ಮಾಡಿದ ವ್ಯಕ್ತಿ ಬೆತ್ತಲೆ ಹುಡುಗಿ. ಒಂದೆರೆಡು ಸೆಕೆಂಡ್ ಮೈಮಾಟ ತೋರಿಸಿ ಕರೆ ಕಟ್ ಮಾಡಿದ್ದಾಳೆ. ಕೆಲ ಹೊತ್ತಿನ ಬಳಿಕ ಮತ್ತದೇ ಕರೆ, ಮತ್ತದೆ ಪ್ರದರ್ಶನ. ಇಲ್ಲಿಗೆ ಬೆತ್ತಲೆ ವಿಡಿಯೋ ಕರೆಯ ನಾಟಕ ಅಂತ್ಯ. ಮರುದಿನ ಬೆಳಗ್ಗೆ ಹೊಸ ನಂಬರ್‌ನಿಂದ ಕರೆಯೊಂದು ಬಂದಿದೆ. ಹುಡುಗಿ ಜೊತೆಗಿರುವ ಬೆತ್ತಲೆ ವಿಡಿಯೋ ಇದೆ. ಯೂಟ್ಯೂಬ್‌ಗೆ ಅಪ್ಲೋಡ್ ಮಾಡಲಾಗಿದೆ. ತೆಗೆಯಲು 31,500 ರೂಪಾಯಿ ನೀಡಿ ಅನ್ನೋ ಬೆದರಿಕೆ. ಮಾನ, ಪ್ರಾಣಕ್ಕೆ ಅಂಜಿದ ಯುವಕ ಹಣ ಕೊಟ್ಟ ಕೊಟ್ಟಿ 3 ಲಕ್ಷ ರೂಪಾಯಿ ಕೊಟ್ಟಿದ್ದಾನೆ. ಆದರೂ ಬೆದರಿಕೆ ನಿಂತಿಲ್ಲ. ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.

ಅಂಧೇರಿ ನಿವಾಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋಗಳನ್ನು ಹಾಕಿ ಸಕ್ರಿಯವಾಗಿದ್ದಾನೆ. ಹಾಗಂತ ಯಾವ ಹುಡುಗಿಯ ಹಿಂದೆ ಹೋದವನಲ್ಲ. ಯಾವ ತಂಟೆಯೂ ಮಾಡಿದವನಲ್ಲ. ತಾನಾಯ್ತ ತನ್ನ ಪಾಡಾಯ್ತು ಅಂತಾ ಕೆಲಸದಲ್ಲಿ ನಿರತನಾಗಿದ್ದ. ಫೆಬ್ರವರಿ 22ರ ರಾತ್ರಿ ವ್ಯಾಟ್ಸ್ಆ್ಯಪ್ ನಂಬರ್‌ಗೆ ಅನಾಮಕಿ ಕರೆ ಬಂದಿದೆ. ಅದು ವಿಡಿಯೋ ಕಾಲ್. ಈ ರಾತ್ರಿ ವಿಡಿಯೋ ಕಾಲ್ ಯಾವುದರೂ ಸ್ನೇಹಿತರು ಇರಬಹುದು. ಯಾವುದೇ ತುರ್ತು ಕರೆ ಇರಬಹುಹುದು ಎದು ಸ್ವೀಕರಿಸಿದ್ದಾನೆ. 

Bengaluru: ಟಾಯ್ಲೆಟ್‌ನಲ್ಲಿ ನಗ್ನಚಿತ್ರ ಕ್ಲಿಕ್ಕಿಸಿದವನ ಬೆನ್ನಟ್ಟಿಹಿಡಿದ ವಿದ್ಯಾರ್ಥಿನಿಯರು!

ವಿಡಿಯೋ ಕಾಲ್ ಮಾಡಿದ ವ್ಯಕ್ತಿ ಬೆತ್ತಲೆ ಹುಡುಗಿ. ಮುಖ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಆದರೆ ಮೈಮಾಟ ತೋರಿಸಿ ಯುವಕರನ್ನು ಬಲೆಗೆ ಬೀಳಿಸುವ ಪ್ರಯತ್ನ. ಆದರೆ ಅಂಧೇರಿಯ ಯುವಕ ಈ ಕರೆಗೆ ಬೆಚ್ಚಿ ಬಿದ್ದಿದ್ದಾನೆ. ತಾನು ಕರೆ ಕಟ್ ಮಾಡುವ ಮೊದಲೇ ಆ ಕರೆ ಕಟ್ ಆಗಿದೆ. ಕೆಲ ಹೊತ್ತಿನ ಬಳಿಕ ಮತ್ತೆ ಅದೇ ಕರೆ ಬಂದಿದೆ. ಮತ್ತೆ ಅದೇ ಹುಡುಗಿಯ ಕೆಲ ಸೆಕೆಂಡ್‌ಗಳ ಕಾಲ ಮೈಮಾಟ ಪ್ರದರ್ಶನ ನೀಡಿ ಮರೆಯಾಗಿದ್ದಾಳೆ. 

ತನಗೆ ಈ ಕರೆ ಯಾಕೆ ಬಂತು ಅಂತಾ ತುಂಬಾ ತಲೆಕೆಡಿಸಿಕೊಂಡು ಅಂದಿನ ರಾತ್ರಿ ಕಳೆದಿದೆ. ಮರುದಿನ ಬೆಳಗ್ಗೆ ಮತ್ತೊಂದು ನಂಬರ್‌ನಿಂದ ಅನಾಮಿಕ ಕರೆ. ಈ ಕರೆ ಸ್ವೀಕರಿಸಿದ ಯುವಕನಿಗೆ ಶಾಕ್ ಆಗಿದೆ. ರಾತ್ರಿ ಮೈಮಾಟ ಪ್ರದರ್ಶಿಸಿದ ಬೆತ್ತಲೆ ಹುಡುಗಿ ಜೊತೆ ನಿಮ್ಮ ಬೆತ್ತಲೆ ವಿಡಿಯೋ ಇದೆ. ಇದು ಯ್ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದನ್ನು ತೆಗೆಯಲು ತಕ್ಷಣವೇ 31,500 ರೂಪಾಯಿ ನೀಡಲು ಬೆದರಿಸಿದ್ದಾರೆ. ಬೇರೆ ವಿಧಿ ಇಲ್ಲದೆ ಹಣ ಕಳುಹಿಸಿದ್ದಾನೆ. ಬಳಿಕ 62,500 ರೂಪಾಯಿ, ಮರುದಿನ 1.51 ಲಕ್ಷ ರೂಪಾಯಿ ಹೀಗೆ ಪ್ರತಿ ದಿನ ಲಕ್ಷ ಲಕ್ಷ ಹಣ ಪೀಕಿದ್ದಾರೆ. 

Mysuru Crime: ವಾಟ್ಸಾಪ್‌ಗೆ ಬೆತ್ತಲೆ ಫೋಟೋ ಕಳಿಸಿ ಹಣ ಪೀಕುತ್ತಿದ್ದ ಲೇಡಿ: ಪೊಲೀಸರಿಗೆ ಸಿಕ್ಕಿಬಿದ್ದಿದ್ದೇ ರೋಚಕ

ಮಾನಕ್ಕೆ ಅಂಜಿ 3 ಲಕ್ಷ ರೂಪಾಯಿ ನೀಡಿದ್ದಾನೆ.ಇದರಲ್ಲಿ 1.5 ಲಕ್ಷ ರೂಪಾಯಿ ಹಣವನ್ನು ಆತನ ಗೆಳೆಯನಿಂದ ಸಾಲ ಪಡೆದು ನೀಡಿದ್ದಾನೆ. ಆದರೂ ಬೆದರಿಕೆ ನಿಲ್ಲಲಿಲ್ಲ. ಇದರಿಂದ ಮುಕ್ತಿ ಸಿಗುತ್ತಿಲ್ಲ. ತನ್ನ ಬಳಿ ಹಣವೂ ಇಲ್ಲ. ಹೀಗಾಗಿ ಗಟ್ಟಿ ನಿರ್ಧಾರ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇಷ್ಟೇ ಅಲ್ಲ ಪೊಲೀಸರು ಮಹತ್ವದ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಈ ರೀತಿಯ ಯಾವುದೇ ಅನಾಮಕಿ ಕರೆಗಳು ಬಂದಲ್ಲಿ ಸ್ವೀಕರಿಸಬೇಡಿ. ತುರ್ತು ಕರೆಗಳು ವಿಡಿಯೋ ಕಾಲ್ ಆಗಿರುವುದಿಲ್ಲ. ಇಷ್ಟೇ ಅಲ್ಲ ಈ ಮೋಸದ ಕಾಲ್ ಸ್ವೀಕರಿಸಿದ ಬಳಿಕ ಟ್ರಾಪ್ ಆಗಬೇಡಿ, ಪೊಲೀಸರಿಗೆ ದೂರು ನೀಡಿ ಎಂದು ಕಿವಿ ಮಾತು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ