ಮೃತ ಹೆಂಡತಿಯ ತಿಂಗಳ ಕಾರ್ಯಕ್ಕೆಂದು ಹೋಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಮೆಲ್ನೋಟಕ್ಕೆ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಆನೇಕಲ್(ಸೆ.05): ವ್ಯಕ್ತಿಯೊರ್ವ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸಮಂದೂರು ಬಳಿ ನಡೆದಿದೆ.
ಸುರಗಜಕ್ಕನಹಳ್ಳಿ ವಾಸಿ ಮುನಿರಾಜು(30) ಮೃತ ವ್ಯಕ್ತಿ. ಈತ ಖಾಸಗಿ ಕಂಪನಿಯೊದರಲ್ಲಿ ಕೆಲಸ ಮಾಡಿತ್ತಿದ್ದ. ಆದರೆ, ತಿಂಗಳ ಹಿಂದೆ ಮೃತ ಮುನಿರಾಜು ಪತ್ನಿ ಆನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದಳು,
'ಮಾಯಾಂಗನೆ ಹೆಂಡತಿ' ಕಂದಮ್ಮನ ನೇಣಿಗೆ ಹಾಕಿ ತಂದೆ ಸುಸೈಡ್
ನಿನ್ನೆ ಮಡದಿಯ ತಿಂಗಳ ಕಾರ್ಯ ಮುಗಿಸಿ ಮನೆಗೆ ವಾಪಸ್ ಆಗಿದ್ದ ಮುನಿರಾಜು ಸಂಜೆ ಮನೆಯಿಂದ ಹೊರಹೋದವನು ನಾಪತ್ತೆಯಾಗಿದ್ದ. ಪೋನ್ ಸಹ ಸ್ವಿಚ್ ಆಫ್ ಆಗಿತ್ತು. ಎಷ್ಟೆ ಹುಡುಕಿದರು ಪತ್ತೆಯಾಗಿರಲಿಲ್ಲ. ಆದ್ರೆ, ಇಂದು (ಶನಿವಾರ) ಸಮಂದೂರು ಸಮೀಪದ ರೈಲ್ವೆ ಹಳಿ ಬಳಿ ಮುನಿರಾಜು ಮೃತ ದೇಹ ಪತ್ತೆಯಾಗಿದೆ.
ಹೆಂಡತಿ ಸಾವಿನಿಂದ ಮುನಿರಾಜು ಖಿನ್ನತೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿರುವ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.