ಪ್ರತ್ಯೇಕ ಘಟನೆ: ಹೋಳಿ ಸಂಭ್ರಮದಲ್ಲಿ ಮೂವರ ಜೀವಕ್ಕೆ ಕುತ್ತು

By Suvarna News  |  First Published Mar 10, 2020, 8:49 PM IST

ರಾಜ್ಯದಲ್ಲಿ ಹೋಳಿ ಹಬ್ಬದ ಸಂಭ್ರಮ ಮಂಗಳವಾರ ಮೂವರ ಜೀವಕ್ಕೆ ಕುತ್ತು ತಂದಿದೆ. ಸ್ನೇಹಿತರೊಂದಿಗೆ ಭರ್ಜರಿ ಹೋಳಿ ಆಡಿ ಸ್ನಾನಕ್ಕೆಂದು ಹೋದವರು ಮಸಣ ಸೇರಿದ್ದಾರೆ.


ರಾಯಚೂರು/ಬೆಳಗಾವಿ, [ಮಾ.10]: ಗೆಳೆಯರ ಜೊತೆ ಈಜಲು ಹೋದ ಯುವಕನೊಬ್ಬ ಕೃಷ್ಣಾನದಿ ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆ 
ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ‌ ನಡೆದಿದೆ.

ಬಾವನಸೌಂದತ್ತಿ ನಿವಾಸಿ ಸಾಗರ ಪಾಂಡು ಯಮಾಜೆ(24) ನೀರು ಪಾಲಾದ ಯುವಕ. ಮಂಗಳವಾರ ಬೆಳಗ್ಗೆ ಗೆಳೆಯರ ಜೊತೆಗೆ ಈತ ಈಜಲು ಹೋಗಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

Latest Videos

undefined

ಕರ್ನಾಟಕದಲ್ಲಿ 4 ಕರೋನಾ ಪಾಸಿಟಿವ್, ಎಂಪಿಯಲ್ಲಿ ಕಾಂಗ್ರೆಸ್‌ಗೆ ಎಲ್ಲವೂ ನೆಗೆಟಿವ್..ಮಾ. 10ರ ಟಾಪ್ 10 ಸುದ್ದಿ

ನಂತರ ರಾಯಬಾಗ ತಹಸೀಲ್ದಾರ್ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ  ಭೇಟಿ‌ ನೀಡಿ ಪರಿಶೀಲಿಸಿದರು. ಬಳಿಕ ಗ್ರಾಮಸ್ಥರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರಗೆ ತರಲಾಯಿತು.  

ರಾಯಚೂರಿನಲ್ಲಿ ಕೆರೆ ಪಾಲಾದ ಬಾಲಕ
ಹೋಳಿ ಹಬ್ಬದ ನಿಮಿತ್ತ ಬಣ್ಣದೊಕಳಿ ಆಟವಾಡಿ ಕೆರೆಗೆ ಈಜಲು ಹೋಗಿದ್ದ ಬಾಲಕ ನೀರು ಪಾಲಾಗಿದ್ದಾನೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹರವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪ್ರಭಾಕರಗೌಡ ಸಣ್ಣಗೌಡ ಎಂಬುವವರ ಮಗ ಮಲ್ಲಿಕಾರ್ಜುನ(14) ಸಾವು. ಬಣ್ಣದಾಟ ಆಡಿ ನಂತರ ಸ್ನಾನ ಮಾಡಲು ಕೆರೆಗೆ ಹೋದಾಗ ಘಟನೆ

ಹೋಳಿ ಮುಗಿಸಿ ಸ್ನಾನ ಮಾಡಲು ಹೋಗಿದ್ದ ಯುವಕ ನೀರುಪಾಲು
ಹೌದು...ಕಂಪ್ಲಿ ಮೂಲದ ಯುವಕ ಕೃಷ್ಣ (24) ಹೋಳಿ ಹುಣ್ಣಿಮೆಯ ಪ್ರಯುಕ್ತ ಬಣ್ಣದೋಕುಳಿ ಆಡಿ ಬಳಿಕ ಬಣ್ಣ ತೊಳೆದುಕೊಳ್ಳಲು ಹೋಗಿದ್ದ ಯುವಕ ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಚಿಕ್ಕ ಜಂತಕಲ್ ಗ್ರಾಮದ ತುಂಗಭದ್ರಾ ಬಳಿ ಇರೋ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ. ಆದ್ರೆ, ಈಜು ಬಾರದೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

click me!