Chikkamagaluru: ಅಸಲಿ ಚಿನ್ನದ ನಾಣ್ಯಗಳನ್ನು ತೋರಿಸಿ ಹಣ ಪಡೆದು ವಂಚನೆ, 3 ಮಂದಿ ಬಂಧನ

By Suvarna NewsFirst Published Oct 17, 2022, 6:14 PM IST
Highlights

ಅಸಲಿ ಚಿನ್ನದ ನಾಣ್ಯಗಳನ್ನು ತೋರಿಸಿ, ಹಣ  ಪಡೆದು ನಕಲಿ ಚಿನ್ನದ ನಾಣ್ಯಗಳನ್ನು ನೀಡಿದ ಪ್ರಕರಣವನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು  ಭೇದಿಸಿದ್ದಾರೆ.  

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಅ.17): ಅಸಲಿ ಚಿನ್ನದ ನಾಣ್ಯಗಳನ್ನು ತೋರಿಸಿ, ಹಣ  ಪಡೆದು ನಕಲಿ ಚಿನ್ನದ ನಾಣ್ಯಗಳನ್ನು ನೀಡಿದ ಪ್ರಕರಣವನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸರು  ಭೇದಿಸಿದ್ದಾರೆ.  ಚಿಕ್ಕಮಗಳೂರು  ಜಿಲ್ಲಾ ಪೋಲಿಸರು ಕಾರ್ಯಚಾರಣೆಯಲ್ಲಿ  ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಚಿಕ್ಕಮಗಳೂರು ಮೂಲದ ವ್ಯಕ್ತಿಗೆ ಈ ಹಿಂದೆ ಪರಿಚಯವಿದ್ದ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕು ವಾಸಿ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಪುಸಲಾಯಿಸಿ, 2 ಕೆ.ಜಿ. ಯಷ್ಟು ಚಿನ್ನದ ನಾಣ್ಯಗಳನ್ನು ರೂ. 5 ಲಕ್ಷ ಕಡಿಮೆ ಬೆಲೆಗೆ ಕೊಡುವುದಾಗಿ  ಆಮಿಷವೊಡ್ಡಿದ  ಮೂರು ಜನರ ತಂಡ 2ಅಸಲಿ ಚಿನ್ನದ ನಾಣ್ಯಗಳನ್ನು ಪರಿಶೀಲಿಸಲು ನೀಡಿದ್ದರು. ಅವುಗಳು ಪರಿಶೀಲಿಸಿ ಅಸಲಿ ಎಂದು ತಿಳಿಸಿದ ನಂತರ  5 ಲಕ್ಷ ಹಣವನ್ನು ಫೋನ್ ಫೇ ಮೂಲಕ ಹಾಕಿಸಿಕೊಂಡು 20 ನಕಲಿ ನಾಣ್ಯಗಳನ್ನು ನೀಡಿ  ಮೋಸ ವಂಚನೆ ಮಾಡಿದರು. 

ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ; ಒಂದೇ ವರ್ಷದಲ್ಲಿ 37 ಪೋಕ್ಸೋ ಕೇಸ್..!

ಪೊಲೀಸರ ಕಾರ್ಯಚಾರಣೆಯಲ್ಲಿ ಆರೋಪಿಗಳ ಬಂಧನ: ವಂಚನೆಗೆ ಒಳಗಾದ ವ್ಯಕ್ತಿ ನೀಡಿದ ದೂರನ್ವಯ ಜಿಲ್ಲಾ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ವಿವಿಧ ಪೋಲಿಸ್ ಅಧಿಕಾರಿಗಳನ್ನೊಳಗೊಂಡ ತಂಡ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ವಾಸಿಗಳಾದ  ಶ್ರೀನಿವಾಸ ನಾಯ್ಕ (21 ),  ಕೋಟಿ ನಾಯ್ಕ (26),  ವೆಂಕಟೇಶ ನಾಯ್ಕ,( 20) ಎಂಬವರನ್ನು ವಶಕ್ಕೆ ಪಡೆದು  ಆರೋಪಿಗಳಿಂದ ರೂ. 5 ಲಕ್ಷ ನಗದು, ಸಾರ್ವಜನಿಕರಿಗೆ ಮೋಸದಿಂದ ಮಾರಾಟ ಮಾಡಲು ಇಟ್ಟುಕೊಂಡಿದ್ದ 1.90 ಕೆ.ಜಿ. ತೂಕದ ತ್ರಾಮದ ನಾಣ್ಯಗಳು, 3 ಮೊಬೈಲ್ ಫೋನ್ ಗಳು, ಒಂದು ಕಾರು ಮತ್ತು 2 ಅಸಲಿ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಬ್ಬಾ ಗಂಡಸರೂ ಇಲ್ಲಿ ಸೇಫ್ ಅಲ್ಲ: ಗೂಗಲ್ ಮ್ಯಾನೇಜರ್‌ನ ಎತ್ಹಾಕ್ಕೊಂಡ್ ಹೋಗಿ ಮದ್ವೆ

ಪೋಲಿಸರು ಆರೋಪಿಗಳನ್ನು  ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಹಿಂದೆ ಇದೇ ರೀತಿ ಆಂದ್ರ ಪ್ರದೇಶ ರಾಜ್ಯದ ತಿರುಪತಿಯಲ್ಲಿ ರೂ. 5 ಲಕ್ಷ ಬೆಲೆಗೆ, ಮಹಾರಾಷ್ಟ್ರ ರಾಜ್ಯದ ಪಂಡರಪುರದಲ್ಲಿ 2 ಲಕ್ಷ ಬೆಲೆಗೆ ಮತ್ತು ಹುಬ್ಬಳ್ಳಿಯಲ್ಲಿ 1.70 ಲಕ್ಷ ಬೆಲೆಗೆ ನಕಲಿ ನಾಣ್ಯಗಳನ್ನು ಸಾರ್ವಜನಿಕರಿಗೆ ವಂಚಿಸಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಪಿ.ಐ. ಮುತ್ತರಾಜ್, ಪಿ.ಎಸ್.ಐ., ನಾಸೀರ್ ಹುಸೇನ್ , ರಘುನಾಥ್ ಎಸ್. ವಿ., ಎ.ಎಸ್.ಐ.,ಎಂ. ಸಿ. ಪ್ರಕಾಶ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ವಿನಾಯಕ, ರಾಜು, ಇಮ್ರಾನ್ ಖಾನ್,  ಅನ್ವರ್ ಪಾಷಾ, ರಮೇಶ, ಹರೀಶ್,  ಮಹೇಂದ್ರ ಮತ್ತು  ಧರ್ಮರಾಜ್ ಭಾಗವಹಿಸಿದ್ದರು.

click me!