28 ಎಕೆ -47 ಗನ್, 7,800 ಜೀವಂತ ಗುಂಡು... ಜೀಪಿನಡಿ ಹುದುಗಿಸಿಟ್ಟದ್ದರು!

By Suvarna NewsFirst Published Sep 29, 2020, 4:50 PM IST
Highlights

ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದವರ ಮೇಲೆ ದಾಳಿ/ ಅಪಾರ ಪ್ರಮಾಣದ ಮದ್ದುಗುಂಡು ವಶ/ ಮಿಜೋರಾಂನಲ್ಲಿ ಬಿಎಸ್‌ಎಫ್ ಕಾರ್ಯಾಚರಣೆ/ ಮೂವರು ಉಗ್ರರ ಬಂಧನ

ಮಿಜೋರಾಂ(ಸೆ. 29)  ಸೋಮವಾರ ಮಿಜೋರಾಂನ ಮಾಮಿತ್ ಜಿಲ್ಲೆಯಲ್ಲಿ  ನಡೆದ ಕಾರ್ಯಾಚರಣೆ ನಡೆಸಿದ  ಬಿಎಸ್ಎಫ್ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು ಮತ್ತು ಮೂವರು ಉಗ್ರರನ್ನು ಬಂಧಿಸಿದೆ.

28 ಎಕೆ -47 ಗನ್ , ಒಂದು ಎಕೆ -74, ಒಂದು  ಯುಎಸ್ ನಿರ್ಮಿತ ಗನ್, 28 ಮ್ಯಾಗಜೀನ್ ಮತ್ತು 7,800 ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾಮಿತ್ ಜಿಲ್ಲೆಯ ಫುಲ್ದುಂಗ್ಸೆ ಪ್ರದೇಶದಲ್ಲಿ ಬಿಎಸ್ಎಫ್ ಶೋಧ ಕಾರ್ಯಾಚರಣೆ ನಡೆಸಿ, ಉಗ್ರರ ಮೇಲೆ ದಾಳಿ ಮಾಡಿದೆ. ಜೀಪಿನ ಸೀಟ್ ಕೆಳಗೆ ಉಗ್ರರು ಮದ್ದು ಗುಂಡುಗಳ ಸಂಗ್ರಹ ಮಾಡಿಟ್ಟಿದ್ದರು.

ಚೀನಾಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ, ಇದಪ್ಪ ಸೇನಾ ಶಕ್ತಿ!

ಮಿಜೋರಾಂ ಮತ್ತು ಈಶಾನ್ಯದ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮಯನ್ಮಾರ್ ಗಡಿಯಿಂದ ಅಪಾರ ಶಸ್ತ್ರಾಸ್ತ್ರ ಒಳಪ್ರವೇಶ ಮಾಡಿದೆ ಎಂಬ ಮಾಹಿತಿ ಗುಪ್ತಚರ ದಳಕ್ಕೆ ಲಭ್ಯವಾದ ನಂತರ ಕಾರ್ಯಾಚರಣೆ ಮಾಡಲಾಗಿದೆ.

ಶಸ್ತ್ರಾಸ್ತ್ರಗಳಲ್ಲದೆ,  ಅಪಾರ  ಪ್ರಮಾಣದ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದ್ದು ತನಿಖೆ ಮುಂದುವರಿದಿದೆ.
ಬಂಧಿತ ಉಗ್ರರು ತ್ರಿಪುರದ ನ್ಯಾಶನಲ್ ಲಿಬರೇಶನ್ ಫ್ರಂಟ್ ಸಂಘಟನೆಗೆ ಸೇರಿದ್ದವರಾಗಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿರುವ ಬಿಎಸ್‌ಎಫ್‌ನ  ಡಿಜಿಪಿ ರಾಕೇಶ್ ಅಸ್ತಾನಾ ಈ ಪ್ರದೇಶದಲ್ಲಿ ಉಗ್ರ ಚಟುವಟಿಕೆ ನಿಧಾನಕ್ಕೆ ಹೆಚ್ಚಾಗುತ್ತಿದೆ. ಬಿಎಸ್‌ಎಫ್ ಸಹ ಗುಪ್ತಚರದಳದ ನೆರವಿನಿಂದ ವಿಧ್ವಂಸಕ ಕೃತ್ಯ ಮಾಡುವವರ ಮೇಲೆ ಕಣ್ಣಿಟ್ಟಿದೆ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್  ನಿಂದ ಈಶಾನ್ಯದ ಕಡೆ ಬಂದಿದ್ದ ಮದ್ದು ಗುಂಡು ವಶಕ್ಕೆ ಪಡೆದ ದಾಖಲೆಗಳಿವೆ. 

click me!