ದೊಡ್ಡಬಳ್ಳಾಪುರ: ಯುವಕನ ಭೀಕರ ಕೊಲೆ, ಹಣಕಾಸು ವಿಚಾರಕ್ಕೆ ಕೃತ್ಯ ಶಂಕೆ

Published : May 12, 2024, 10:43 AM IST
ದೊಡ್ಡಬಳ್ಳಾಪುರ: ಯುವಕನ ಭೀಕರ ಕೊಲೆ, ಹಣಕಾಸು ವಿಚಾರಕ್ಕೆ ಕೃತ್ಯ ಶಂಕೆ

ಸಾರಾಂಶ

ಶುಕ್ರವಾರ ರಾತ್ರಿ ಸ್ಥಳೀಯ ರೆಸ್ಟೋರೆಂಟ್ ಒಂದರಲ್ಲಿ ಸೇರಿದ್ದ ಯುವಕರ ಗುಂಪು, ಹೇಮಂತ್‌ಗೌಡನನ್ನು ಮಾತನಾಡುವ ನೆಪದಲ್ಲಿ ಸ್ಥಳಕ್ಕೆ ಕರೆಸಿಕೊಂಡು ತಡರಾತ್ರಿ ವೇಳೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಹಣಕಾಸು ವಿಚಾರಕ್ಕೆ ನಡೆದ ವಾಗ್ವಾದ ಈ ದುಷ್ಕೃತ್ಯದಲ್ಲಿ ಅಂತ್ಯಗೊಂಡಿದೆ ಎನ್ನಲಾಗಿದೆ. 

ದೊಡ್ಡಬಳ್ಳಾಪುರ(ಮೇ.12): ನಗರದ ಹೊರವಲಯದಲ್ಲಿರುವ ಬೆಂಗಳೂರು-ದೊಡ್ಡಬಳ್ಳಾಪುರ ಹೆದ್ದಾರಿಯ ಜವಾಹರ್‌ ನವೋದಯ ವಿದ್ಯಾಲಯದ ಸಮೀಪ ಶನಿವಾರ ನಸುಕಿನ ಜಾವ ಯುವಕನ ಶವ ಪತ್ತೆಯಾಗಿದ್ದು, ಮೃತನನ್ನು ತಾಲೂಕಿನ ಹುಸ್ಕೂರು ಗ್ರಾಮದ ಹೇಮಂತ್‌ಗೌಡ(29) ಎಂದು ಗುರುತಿಸಲಾಗಿದೆ.

ಶುಕ್ರವಾರ ರಾತ್ರಿ ಸ್ಥಳೀಯ ರೆಸ್ಟೋರೆಂಟ್ ಒಂದರಲ್ಲಿ ಸೇರಿದ್ದ ಯುವಕರ ಗುಂಪು, ಹೇಮಂತ್‌ಗೌಡನನ್ನು ಮಾತನಾಡುವ ನೆಪದಲ್ಲಿ ಸ್ಥಳಕ್ಕೆ ಕರೆಸಿಕೊಂಡು ತಡರಾತ್ರಿ ವೇಳೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಹಣಕಾಸು ವಿಚಾರಕ್ಕೆ ನಡೆದ ವಾಗ್ವಾದ ಈ ದುಷ್ಕೃತ್ಯದಲ್ಲಿ ಅಂತ್ಯಗೊಂಡಿದೆ ಎನ್ನಲಾಗಿದೆ.

Breaking: ಶಿವಮೊಗ್ಗದಲ್ಲಿ ಜೋಡಿ ಕೊಲೆ: ಅನ್ಯಕೋಮಿನ ಇಬ್ಬರು ಯುವಕರ ಬರ್ಬರ ಹತ್ಯೆ

ಸುಮಾರು 15 ಜನರ ಗುಂಪು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರಮುಖ ಆರೋಪಿಗಳ ಕುರಿತು ಸುಳಿವು ದೊರೆತಿದೆ. ಸ್ಥಳೀಯ ರೆಸ್ಟೋರೆಂಟ್ ಮತ್ತು ಇತರ ಕಟ್ಟಡಗಳ ಸಿಸಿ ಕ್ಯಾಮೆರಾ ದಾಖಲೆಗಳನ್ನು ಪರಿಶೀಲಿಸಿದ್ದು, ಕೃತ್ಯದ ಪ್ರಮುಖ ಸಾಕ್ಷ್ಯಗಳು ಲಭಿಸಿವೆ ಎನ್ನಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

TCS Love Jihad ಬೇಧಿಸಲು ಟಾಯ್ಲೆಟ್​ ತೊಳೆದ ಪೊಲೀಸರು! ಹಿಂದೂಗಳ ಬುರ್ಖಾ ಸೆಲ್ಫಿ- ಸಿನಿಮಾ ಮೀರಿಸೋ ಸ್ಟೋರಿ
TCS ಕಂಪೆನಿ Love Jihad ರಾಣಿ ನಿದಾ ಖಾನ್​ಗೆ ದೆಹಲಿ ಬಾಂಬ್​ಬ್ಲಾಸ್ಟ್​ ಲಿಂಕ್​? ಏನಿದು ಸ್ಫೋಟಕ ಮಾಹಿತಿ