* ಸಾಲಬಾಧೆ ತಾಳಲಾರದೆ ಯುವಕ ಸುಸೈಡ್
* ಜಮೀನು ಮಾರಿ ಸಾಲ ತೀರಿಸಿ ಎಂದು ಪಟ್ಟಿ ಮಾಡಿಟ್ಟು ಯುವಕ ಆತ್ಮಹತ್ಯೆ
* ಸಾಲದ ಪಟ್ಟಿಯನ್ನು ವಾಟ್ಸಪ್ ಸ್ಟೇಟಸ್‌ಗೆ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ
ಚಾಮರಾಜನಗರ, (ಏ.25): ಸಾಲಬಾಧೆ ತಾಳಲಾರದೆ ಯುವಕನೋರ್ವ ಕೆರೆಗೆ ಬಿದ್ದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ(ಘundlupete) ತಾಲ್ಲೂಕಿನ ಶಿವಪುರದ ಕಲ್ಲುಕಟ್ಟೆ ಕೆರೆಯಲ್ಲಿ ಇಂದು (ಸೋಮವಾರ) ನಡೆದಿದೆ.
ಬೆಟ್ಟಹಳ್ಳಿ ಗ್ರಾಮದ ವಿಜಯ್ (27) ಮೃತ ವ್ಯಕ್ತಿ. ವಾಟ್ಸ್ ಆಪ್ ಸ್ಟೇಟಸ್ ನಲ್ಲಿ (Whatsapp Status) ತಾನು ಕೊಡಬೇಕಿರುವ ಸಾಲದ ಮಾಹಿತಿ ಹಾಗೂ ನನ್ನ ಸಾವಿಗೆ ನಾನೇ ಕಾರಣ, ನಮ್ಮ ಜಮೀನು ಮಾರಿ ಸಾಲಗಾರರಿಗೆ ನೀಡಿ ಎಂದು ಬರೆದುಕೊಂಡಿದ್ದಾನೆ.
undefined
ನನ್ನ ಸಾವೇ ನಿನ್ನ ಮದುವೆಯ ಗಿಫ್ಟ್, ಐ ಲವ್‌ಯೂ ಎಂದು ಬರೆದು ಆತ್ಮಹತ್ಯೆಗೆ ಶರಣಾದ ಪ್ರೇಮಿ!
ನಮ್ಮ ಜಮೀನು ಮಾರಿಬಿಟ್ಟು ನಿಶುಗೆ 10 ಲಕ್ಷ ರೂಪಾಯಿ ಕೊಡಿ, ದೀಪುಗೆ 10 ಲಕ್ಷ, ಮಾದೇಶ್, ಸಿದ್ದೇಶ್, ಶಶಿಗೆ 3 ಲಕ್ಷ ರೂಪಾಯಿ ಕೊಡಿ ಪ್ಲೀಸ್. ಕಾಳಪ್ಪ, ಮಂಜಣ್ಣ ಅವರಿಗೆ 1 ಲಕ್ಷ ರೂ. ಚೀಟಿ ದುಡ್ಡು ಕೊಟ್ಟು ಬಿಡಿ ಎಂದು ವಿಜಯ್ ಸ್ಟೇಟಸ್ ನಲ್ಲಿ ಬರೆದಿದ್ದಾನೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಶವವನ್ನು ಮೇಲೆತ್ತುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜೊತೆಗೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ..