ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ

Published : Dec 08, 2025, 11:56 AM IST
Suicide

ಸಾರಾಂಶ

ನಿನ್ನ ನಂಬಿಕೆಗೆ ನಾನು ಮಾಡಿದ್ದೇನೆ ಅಂತ ನನಗೆ ಗೊತ್ತು ಅಮ್ಮ. ಸಾಧ್ಯವಾದ್ರೆ ನನ್ನನ್ನು ಕ್ಷಮಿಸು ಅಮ್ಮ. ಸಾಯೋದಕ್ಕೆ ಭಯ ಆಗ್ತಿದೆ ಅಮ್ಮಾ. Sorry ಯವಿಟ್ಟು ಯಾರೂ ನನ್ನ ಹಾಗೆ ಮಾಡಿಕೊಳ್ಳಬೇಡಿ. ಈ ರೀತಿ ಇರೋ ನಾಯಿಗಳನ್ನು ನಂಬಿ ಮೋಸ ಹೋಗಬೇಡಿ.

ಬೆಂಗಳೂರು ದಕ್ಷಿಣ: ಪ್ರೀತಿಯಲ್ಲಿ ಮೋಸಕ್ಕೊಳಗಾದ 22 ವರ್ಷದ ಯುವತಿ ಆತ್ಮ*ಹತ್ಯೆಗೆ ಶರಣಾಗಿದ್ದು, ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮನಗರ ತಾಲ್ಲೂಕಿನ ವಿಭೂತಿಕೆರೆ ಗ್ರಾಮದ ನಿವಾಸಿ ವರ್ಷಿಣಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಸಾಯುವ ಮುನ್ನ ಡೆತ್‌ನೋಟ್ ಬರೆದಿಟ್ಟಿರುವ ವರ್ಷಿಣಿ, ತನಗಾದ ಮೋಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಸಾಯುತ್ತಿರೋದಕ್ಕೆ ತಾಯಿ ಬಳಿ ಕ್ಷಮೆ ಕೇಳಿದ್ದಾರೆ. ಇದೇ ಪತ್ರದಲ್ಲಿ ತನ್ನ ಸಾವಿಗೆ ಕಾರಣವಾಗಿರುವ ಪ್ರೇಮಿ ದೇವರದೊಡ್ಡಿ ಗ್ರಾಮದ ಅಭಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ.

ವರ್ಷಿಣಿ ಬರೆದ ಡೆತ್‌ನೋಟ್ ಹೀಗಿದೆ

ಅಮ್ಮಾ, ಸಾಧ್ಯವಾದ್ರೆ ನನ್ನನ್ನು ಕ್ಷಮಿಸು. ಅಭಿ (ಚಿತ್ರಲಿಂಗ) ಎಂಬಾತ ನನ್ನನ್ನು ನಂಬಿಸಿಬಿಟ್ಟ. ನಿನ್ನ ಅವರ ವಿಷಯ ಹೇಳಿ ಬ್ಲಾಕ್‌ಮೇಲ್ ಮಾಡಿ ರಿಂಗ್ ಮತ್ತು ಎಲ್ಲಾ ಹಣ ತೊಗೊಂಡ. ನಾನು ಪ್ರೆಗ್ನಂಟ್ ಆದೆ. ನಂತರ ಅವನು ಗರ್ಭಪಾತ ಮಾಡಿಸಿದ. ಇವನನ್ನು ಮಾತ್ರ ಸುಮ್ಮನೇ ಬಿಡಬೇಡಿ. ನಿನ್ನ ನಂಬಿಕೆಗೆ ನಾನು ಮಾಡಿದ್ದೇನೆ ಅಂತ ನನಗೆ ಗೊತ್ತು ಅಮ್ಮ. ಸಾಧ್ಯವಾದ್ರೆ ನನ್ನನ್ನು ಕ್ಷಮಿಸು ಅಮ್ಮ. ಸಾಯೋದಕ್ಕೆ ಭಯ ಆಗ್ತಿದೆ ಅಮ್ಮಾ. Sorry

ಸಾಯೋದನ್ನು ಬಿಟ್ಟು ಬೇರೆ ಯಾವ ದಾರಿಯೂ ಗೊತ್ತಾಗುತ್ತಿಲ್ಲ. ನಾನು ಅಭಿಯನ್ನು ನಂಬಬಾರದಿತ್ತು. ನೀವು ನನ್ನನ್ನು ತುಂಬಾ ನಂಬಿದ್ರಿ. ಆದ್ರೆ ಇದೊಂದು ತಪ್ಪಿಂದ ಅದನ್ನೆಲ್ಲಾ ಹಾಳು ಮಾಡಿಬಿಟ್ಟ. ಅವನನ್ನು ಮಾತ್ರ ಸುಮ್ಮನೇ ಬಿಡಬೇಡಿ. ದಯವಿಟ್ಟು ಯಾರೂ ನನ್ನ ಹಾಗೆ ಮಾಡಿಕೊಳ್ಳಬೇಡಿ. ಈ ರೀತಿ ಇರೋ ನಾಯಿಗಳನ್ನು ನಂಬಿ ಮೋಸ ಹೋಗಬೇಡಿ. Sorry ಅಮ್ಮಾ ಎಂದು ವರ್ಷಿಣಿ ಬರೆದಿದ್ದಾಳೆ.

ಇದನ್ನೂ ಓದಿ: ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?

ಅಭಿ ಬಂಧನಕ್ಕೆ ವರ್ಷಿಣಿ ಕುಟುಂಬಸ್ಥರ ಆಗ್ರಹ

ಸದ್ಯ ವರ್ಷಿಣಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಪೊಲೀಸರು ಕುಟುಂಬಸ್ಥರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆ ಆವರಣದಲ್ಲಿ ವರ್ಷಿಣಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಭಿಯನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ : Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇ*ಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!
Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!