* ಒಂದಾಗಿದ್ದ ಜೋಡಿ ನಡುವೆ ಸಣ್ಣ ಕಾರಣಕ್ಕೆ ಭಿನ್ನಾಭಿಪ್ರಾಯ
* ಮದುವೆಗೂ ಮುನ್ನವೇ ಸಂಧಿಸಿದ್ದರು
* ಎರಡು ತಿಂಗಳ ಗರ್ಭಿಣಿ ಸಾನಿಟೈಸರ್ ಸೇವಿಸಿ ಆತ್ಮಹತ್ಯೆ
* ಆತ್ಮಹತ್ಯೆಗೆ ಪ್ರೇರೇಪಣೆ ಆಧಾರದಲ್ಲಿ ಬಾಯ್ ಫ್ರೆಂಡ್ ಬಂಧನ
ಹೈದರಾಬಾದ್ (ಜ. 04) ಮಹಿಳೆಯೊಬ್ಬರು ಸಾನಿಟೈಸರ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಟ್ರಾವೆಲ್ಸ್ ಕಂಪನಿಯ ಉದ್ಯೋಗಿ ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಇದೆಲ್ಲದರ ಪರಿಣಾಮ ಮಹಿಳೆ ಗರ್ಭಿಣಿಯಾಗಿದ್ದಳು.
22 ವರ್ಷದ ನಲ್ಗೊಂಡ ಜಿಲ್ಲೆಯ ಮಹಿಳೆ ಲಿಬರ್ಟಿ ಜಂಕ್ಷನ್ ಬಳಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಹೈದರಾಬಾದಿನಲ್ಲಿ ಎರಡು ವರ್ಷ ಕೆಲಸ ಮಾಡಿದ್ದು ಆತ್ಮಹತ್ಯೆಗೆ ಪ್ರೇರಣೆ ನೀಡದ ಆರೋಪಿಗೆ ಹತ್ತಿರವಾಗಿದ್ದರು.
ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದ ಕಾರಣ ಇಬ್ಬರು ಒಂದಾಗಿದ್ದಾರೆ. ಆದರೆ ಇದಾದ ನಂತರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಡಿಸೆಂಬರ್ 30 ರಂದು ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಸ್ವಸ್ಥಗೊಂಡವಳನ್ನು ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಲಾಯಿತು. ಡಿಸೆಂಬರ್ 31 ರಂದು ಮಧ್ಯಾಹ್ನ ಅಸುನೀಗಿದ್ದಾಳೆ.
ತಡರಾತ್ರಿ ಮೇಲ್ಸೇತುವೆಯಿಂದ ಜಿಗಿದು ಯುವಕ ಆತ್ಮಹತ್ಯೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮದುವೆಯಾಗಿ ನಂಬಿಸಿದ್ದ ಎನ್ನುವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇದ್ದಿದ್ದು ನಿಜ ಆದರೆ ಇಂಥ ನಿರ್ಧಾರವನ್ನು ಆಕೆ ಮಾಡುತ್ತಾಳೆ ಎಂದು ಭಾವಿಸಿರಲಿಲ್ಲ ಎಂದು ಯುವಕ ಹೇಳಿದ್ದಾನೆ. ಅಲ್ಲದೇ ಆಕೆ ಗರ್ಭಿಣಿ ಎನ್ನುವ ವಿಚಾರವನ್ನು ನಾನೇ ಕುಟುಂಬದವರಿಗೆ ತಿಳಿಸಿದ್ದೆ ಎನ್ನುವುದನ್ನು ಹೇಳಿದ್ದಾನೆ.
ಸಂತ್ರಸ್ತೆಯ ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306, 420 ಮತ್ತು ಎಸ್‌ಸಿ-ಎಸ್‌ಟಿ (ಪಿಒಎ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ .
ಯಾವ ಕಾರಣಕ್ಕೂ ಸೇವಿಸಬೇಡಿ: ಸಾನಿಟೈಸರ್ ಸಹಜವಾಗಿಯೇ ಬ್ಯಾಕ್ಟೀರಿಯಾ ಮತ್ತು ವೈರಸ್ ಕೊಲ್ಲುವುದಕ್ಕೆಂದೇ ಸಿದ್ಧ ಮಾಡಲಾಗಿದೆ. ಮಾಮೂಲಿ ಸಾನಿಟೈಸರ್ 60–62 ಪರ್ಸೆಂಟ್ ಆಲ್ಕೋಹಾಲ್ ಅಂಶ ಹೊಂದಿರುತ್ತದೆ. ಇದನ್ನು ಸೇವಿಸಿದರೆ ವಿಷವಾಗಿ ಪರಿವರ್ತನೆಯಾಗುವುದು.
ನಕಲಿ ಅಧಿಕಾರಿಗಳ ದಾಳಿಗೆ ಜೀವ ಕಳೆದುಕೊಂಡಳು: ಮುಂಬೈನಲ್ಲಿ 28 ವರ್ಷದ ನಟಿಯೊಬ್ಬರು(Actress) ತಮ್ಮ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ(suicide) ಮಾಡಿಕೊಂಡಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳಂತೆ ನಟಿಸಿದ ಕೆಲವರು ನಟಿಯಿಂದ ಹಣ ದೋಚಲು ಮುಂದಾಗಿದ್ದರು. ಇದೇ ಕಾರಣಕ್ಕೆ ನಟಿ ಸುಸೈಡ್ ಮಾಡಿಕೊಂಡಿದ್ದಳು.
ಮೃತ ನಟಿ ಭೋಜ್‌ಪುರಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಡಿಸೆಂಬರ್ 23 ರಂದು ಜೋಗೇಶ್ವರಿ (ಪಶ್ಚಿಮ) ಪ್ರದೇಶದ ತನ್ನ ನಿವಾಸದಲ್ಲಿ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿನ ನಂತರ, ಆಕೆಯ ಸ್ನೇಹಿತರೊಬ್ಬರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.