
ಚೆನ್ನೈ (ಡಿ. 01) ಹಣಕ್ಕಾಗಿ ಮಂಗಳಮುಖಿಯರಿಬ್ಬರು ಅಪರಿಚಿತ ವ್ಯಕ್ತಿಯೊಂದಿಗೆ ಓರಲ್ ಸೆಕ್ಸ್ ಮಾಡುವಂತೆ 14 ವರ್ಷದ ಬಾಲಕನಿಗೆ ಕಿರುಕುಳ ನೀಡಿರುವ ಪ್ರಕರಣ ಚೆನ್ನೈ ನಿಂದ ವರದಿಯಾಗಿದೆ.
ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಅಪರ್ಣಾ(32) ಹಾಗೂ ಸತ್ಯಾ(30) ಎಂದು ಗುರುತಿಸಲಾಗಿದೆ. ಬಾಲಕ ನೀಡಿದ ದೂರಿನ ಆಧಾರದ ಕೂತೂರು ಮೂಲದ ಮಂಗಳಮುಖಿಯರನ್ನು ವಶಕ್ಕೆ ಪಡೆಯಲಾಗಿದೆ.
ಲೈಂಗಿಕ ಅಲ್ಪಸಂಖ್ಯಾತನಾಗಿರುವ ಬಾಲಕ ವಾರದ ಹಿಂದೆ ದಿಂಡಿಗಲ್‍ನ ಬಸ್ ನಿಲ್ದಾಣದಲ್ಲಿ ಅಪರ್ಣ ಹಾಗೂ ಸತ್ಯ ಅವರನ್ನು ಭೇಟಿಯಾಗಿದ್ದ. ಈ ವೇಳೆ ಬಾಲಕ ಇಬ್ಬರ ಜೊತೆ ಸ್ವಲ್ಪ ಹೊತ್ತು ಮಾತನಾಡಿದ್ದಾನೆ. ಪರಸ್ಪರ ದೂರವಾಣಿ ಸಂಖ್ಯೆ ಪಡೆದುಕೊಂಡಿದ್ದಾರೆ.
ಓರಲ್ ಸೆಕ್ಸ್ ಗೆ ಗಂಡ ಒತ್ತಾಯ ಮಾಡಿದರೆ ಹೀಗೆ ಮಾಡಬಹುದು
ಇದಾದ ಮೇಲೆ ಬಾಲಕನಿಗೆ ಕರೆ ಮಾಡಿದ ಮಂಗಳಮುಖಿಯರು ತಿರುಚ್ಚಿಗೆ ಬರುಲು ಹೇಳಿದ್ದಾರೆ. ಅಲ್ಲದೆ ಶಸ್ತ್ರಚಿಕಿತ್ಸೆ ಮಾಡಿಸಲು ಸಹಾಯ ಮಾಡುತ್ತೇವೆ ಎಂದು ನಂಬಿಸಿದ್ದಾರೆ.
ಬಳಿಕ ಬಾಲಕ ನವೆಂಬರ್ 25ರಂದು ತಿರುಚ್ಚಿಗೆ ತೆರಳಿದ್ದು, ಈ ವೇಳೆ ಅಪರ್ಣ ಹಾಗೂ ಸತ್ಯ ಬಾಲಕನಿಗೆ ಮದ್ಯ ಕುಡಿಸಿದ್ದಾರೆ. ಬಳಿಕ ಹಣಕ್ಕಾಗಿ ಅಪರಿಚಿತನೊಂದಿಗೆ ಓರಲ್ ಸೆಕ್ಸ್ ಮಾಡಲು ಒತ್ತಾಯ ಮಾಡಿದ್ದಾರೆ.
ಬಾಲಕ ನೀಡಿದ ದೂರಿನನ್ವಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಕ್ಸೊ ಕಾಯ್ದೆ ಸೆಕ್ಷನ್ 12 ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣಾ ಕಾಯ್ದೆ ಅಡಿ ಪ್ರಕಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ