ಕೇರಳ ಆಯ್ತು ಮಹಾರಾಷ್ಟ್ರದಲ್ಲಿ ಪ್ರಾಣಿ ಹಿಂಸೆ/ ಶ್ವಾನವನ್ನು ಚಲಿಸುವ ಬೈಕ್ ಗೆ ಕಟ್ಟಿ ಎಳೆದ ದುರುಳರು/ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್/ ದೂರು ದಾಖಲಿಸಿಕೊಂಡ ಪೊಲೀಸರು
ಔರಂಗಾಬಾದ್(ಜೂ. 07) ಆಹಾರಕ್ಕಾಗಿ ಬಂದ ಗರ್ಭಿಣಿ ಆನೆಗೆ ಆಹಾರದಲ್ಲಿ ಪಟಾಕಿ ಇಟ್ಟ ದುರುಳರ ಸುದ್ದಿಯನ್ನು ಓದಿ ಅರಗಿಸಿಕೊಂಡಿದ್ದೇವೆ. ಮಹಾರಾಷ್ಟ್ರದ ಔರಂಗಾಬಾದ್ ಪೊಲೀಸರು ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದಾರೆ. ಪ್ರಾಣಿ ಹಿಂಸೆ ಕೇಸ್ ಅಡಿ ಪ್ರಕರಣ ದಾಖಲಾಗಿದೆ.
ಶ್ವಾನವೊಂದನ್ನು ಚಲಿಸುವ ಬೈಕ್ ಹಿಂಬದಿಗೆ ಕಟ್ಟಿ ಎಳೆದುಕೊಂಡು ಹೋದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಪರಿಚಿತ ಇಬ್ಬರು ವ್ಯಕ್ತಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಪೋಟಕವಿಟ್ಟು ಗರ್ಭಿಣಿ ಆನೆ ಕೊಂದರು.. ನೊಂದು ಜೀವ ಬಿಟ್ಟ ಮೂಕ ಪ್ರಾಣಿ
ಔರಂಗಾಬಾದ್ ನೋಂದಣಿ ಸಂಖ್ಯೆ ಹೊಂದಿರವ ಬೈಕ್ ಗೆ ನಾಯಿಯನ್ನು ಕಟ್ಟಲಾಗಿದೆ. ನಾಯಿಯ ಕುತ್ತಿಗೆಗೆ ಹಗ್ಗ ಬಿಗಿಯಲಾಗಿದ್ದು ಚಲಿಸುವ ಬೈಕ್ ನಲ್ಲಿ ಎಳೆದುಕೊಂಡು ಹೋಗಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಹಾರಾಷ್ಟ್ರ ಪರಿಸರ ಸಚಿವ ಆದಿತ್ಯ ಠಾಕ್ರೆ, ಔರಂಗಾಬಾದ್ ಜಿಲ್ಲಾ ಉಸ್ತುವಾರಿ ಸಚಿವ ಸುಭಾಷ್ ದೇಸಾಯಿ, ಮುನ್ಸಿಪಲ್ ಜವಾಬ್ದಾರಿ ಹೊತ್ತಿರುವ ಅಸ್ತಿಕುಮಾರ್ ಪಾಂಡೆ ಮತ್ತು ಡಿಜಿಪಿಗೆ ಟ್ಯಾಗ್ ಮಾಡಿದ್ದಾರೆ.
ಪತ್ರಕರ್ತಇಬ್ರಾಜ್ ಅನ್ಸಾರಿ ಒಂದು ಪೊಲೀಸ್ ದೂರು ಸಹ ನೀಡಿದ್ದು ಪ್ರಾಣಿ ಹಿಂಸೆ ಮಾಡಿದ ಕಿರಾತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
A guy dragging his dog on the road... Very cruel ... Bike no MH20**9436 ... Near Shivaji high school Aurangabad Maharashtra...
Can anyone help us finding out this no. pic.twitter.com/8FtWivVqyC