10 ರು. ರಿಚಾರ್ಜ್‌ ನೆಪದಲ್ಲಿ 2.98 ಲಕ್ಷ ವಂಚನೆ: ದುಡ್ಡು ಕಳಕೊಂಡು ಕಂಗಾಲಾದ ವೃದ್ಧ

Kannadaprabha News   | Asianet News
Published : Jul 21, 2021, 08:16 AM IST
10 ರು. ರಿಚಾರ್ಜ್‌ ನೆಪದಲ್ಲಿ 2.98 ಲಕ್ಷ ವಂಚನೆ:  ದುಡ್ಡು ಕಳಕೊಂಡು ಕಂಗಾಲಾದ ವೃದ್ಧ

ಸಾರಾಂಶ

* ನಿವೃತ್ತ ಸರ್ಕಾರಿ ನೌಕರ ಅಮಿತ್‌ ಬಾಧೂರಿ ವಂಚನೆಗೆ ಒಳಗಾದ ವ್ಯಕ್ತಿ * ಯುಪಿಐ ಪಿನ್‌ ಪಡೆದು ಆನ್‌ಲೈನ್‌ನಲ್ಲಿ 2.98 ಲಕ್ಷ ರು. ವರ್ಗಾವಣೆ  * ಈ ಸಂಬಂಧ ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲು  

ಹುಬ್ಬಳ್ಳಿ(ಜು.21): ಧಾರವಾಡದ 80 ವರ್ಷದ ವೃದ್ಧರೊಬ್ಬರಿಗೆ 24 ಗಂಟೆಯೊಳಗೆ 10 ರು. ರಿಚಾರ್ಜ್‌ ಮಾಡದಿದ್ದರೆ ಸಿಮ್‌ ಬ್ಲಾಕ್‌ ಆಗುತ್ತದೆ ಎಂದು ಸಂದೇಶ ಕಳಿಸಿದ ವಂಚಕರು ಬಳಿಕ ಟ್ರಿಮ್‌ ವೀವರ್‌ ಕ್ವಿಕ್‌ ಸಪೋರ್ಟ್‌ ಆ್ಯಪ್‌ ಡೌನ್ಲೋಡ್‌ ಮಾಡಿಸಿ ಅವರ ಯುಪಿಐ ಪಿನ್‌ ಪಡೆದು ಆನ್‌ಲೈನ್‌ನಲ್ಲಿ 2.98 ಲಕ್ಷ ರು. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.

ಧಾರವಾಡದ ಸರಸ್ವತಪುತ ರೆಡ್ಡಿ ಕಾಲನಿ ನಿವಾಸಿ ನಿವೃತ್ತ ಸರ್ಕಾರಿ ನೌಕರ ಅಮಿತ್‌ ಬಾಧೂರಿ ವಂಚನೆಗೆ ಒಳಗಾದವರು. 

ಯುವಕರೇ ಹುಷಾರ್‌: ಯುವತಿಯರ ಬಣ್ಣದ ಮಾತಿಗೆ ಮರುಳಾದ್ರೆ ಪಂಗನಾಮ ಗ್ಯಾರಂಟಿ..!

10 ರು. ರಿಚಾರ್ಜ್‌ ಮಾಡಲು ಸಹಾಯಕ್ಕಾಗಿ ಸಂಪರ್ಕಿಸಲು ವಂಚಕರು ಮೊಬೈಲ್‌ ನಂಬರ್‌ ಕಳಿಸಿದ್ದಾರೆ. ಇದನ್ನು ನಂಬಿ ಕರೆ ಮಾಡಿದಾಗ ಟ್ರಿಮ್‌ ವೀವರ್‌ ಕ್ವಿಕ್‌ ಸಪೋರ್ಟ್‌ ಆ್ಯಪ್‌ ಇನ್ಸ್ಟಾಲ್‌ ಮಾಡಿಸಿದ್ದಾರೆ. ಬಳಿಕ ಏರ್ಟೆಲ್‌ ಥ್ಯಾಂಕ್ಸ್‌ ಆ್ಯಪ್ಲಿ ರಿಚಾರ್ಜ್‌ ಮಾಡಲು ತಿಳಿಸಿದ್ದಾರೆ. ಅದಾದ ನಂತರ ಯುಪಿಐ ಪಿನ್‌ ಪಡೆದು ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ