ಆರು ವರ್ಷಗಳ ಹಿಂದೆ, 2018 ರಲ್ಲಿ ಬೀದರ್‌ನಲ್ಲಿ ನಡೆದಿದ್ದ ಕಾಲೇಜು ವಿದ್ಯಾರ್ಥಿ ಪೂಜಾ ಹಡಪದ ರೇಪ್ ಆ್ಯಂಡ್ ಮರ್ಡರ್ ಇಡೀ ರಾಜ್ಯಾದ್ಯಂತ ಸದ್ದು ಮಾಡಿತ್ತು, ಆರೋಪಿಗೆ ಶಿಕ್ಷೆ ವಿಧಿಸುವಂತೆ ರಾಜ್ಯಾದ್ಯಂತ ಪ್ರತಿಭಟನೆ ಕೂಡಾ ನಡೆದಿತ್ತು.
ಬೀದರ್ (ಸೆ.28): ಆರು ವರ್ಷಗಳ ಹಿಂದೆ, 2018 ರಲ್ಲಿ ಬೀದರ್‌ನಲ್ಲಿ ನಡೆದಿದ್ದ ಕಾಲೇಜು ವಿದ್ಯಾರ್ಥಿ ಪೂಜಾ ಹಡಪದ ರೇಪ್ ಆ್ಯಂಡ್ ಮರ್ಡರ್ ಇಡೀ ರಾಜ್ಯಾದ್ಯಂತ ಸದ್ದು ಮಾಡಿತ್ತು, ಆರೋಪಿಗೆ ಶಿಕ್ಷೆ ವಿಧಿಸುವಂತೆ ರಾಜ್ಯಾದ್ಯಂತ ಪ್ರತಿಭಟನೆ ಕೂಡಾ ನಡೆದಿತ್ತು. ಸದ್ಯ ರೇಪ್ ಆ್ಯಂಡ್ ಮರ್ಡರ್ ಆರೋಪಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದು, ಆರೋಪಿ ಕಂಬಿ ಎಣಿಸುವಂತಾಗಿದೆ. 2018 ಜನವರಿ 27ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರ ಅರಣ್ಯ ಪ್ರದೇಶದಲ್ಲಿ ನಡೆದಿದ್ದ ಕಾಲೇಜು ವಿದ್ಯಾರ್ಥಿ ಪೂಜಾ ಹಡಪದ ರೇಪ್ & ಮರ್ಡರ್ ಕೇಸ್‌ಗೆ ಕೊನೆಗೂ ನ್ಯಾಯ ಸಿಕ್ಕಿದೆ.
ರಾಜ್ಯಾದ್ಯಂತ ಸದ್ದು ಮಾಡಿದ್ದ ಪೂಜಾ ಹಡಪದ ರೇಪ್ & ಮರ್ಡರ್ ಕೇಸ್ ಆರೋಪಿ ಶಾಬೋದ್ದಿನ್‌ಗೆ ಸೆಕ್ಷನ್ 302ರ ಅಡಿ ಜೀವಾವಧಿ ಶಿಕ್ಷೆ ವಿಧಿಸಿ ಭಾಲ್ಕಿ ಅಡಿಷನಲ್ ಡಿಸ್ಟ್ರಿಕ್ಟ್ ಸೆಕ್ಷನ್ ಕೋರ್ಟ್ ನ್ಯಾಯಾಧೀಶ ಸಚಿನ್ ಕೌಶಿಕ್ ಮಹತ್ವದ ತೀರ್ಪು ನೀಡಿದ್ದಾರೆ. ಸಾಕ್ಷ್ಯಾಧಾರಗಳನ್ನ ಕೂಲಂಕುಶವಾಗಿ ಪರಿಶೀಲಿಸಿ ಅಪರಾಧಿ ಶಾಬೋದ್ದಿನ್‌ಗೆ ಜೀವಾವಧಿ ಶಿಕ್ಷೆಯ ಜೊತೆಗೆ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ದಂಡದ ಮೊತ್ತದಲ್ಲಿ 35 ಸಾವಿರ ರೂ. ಮೃತ ವಿದ್ಯಾರ್ಥಿ ಪೂಜಾ ಹಡಪದ ತಾಯಿಗೆ, 15 ಸಾವಿರ ರೂ. ಸರ್ಕಾರಕ್ಕೆ ಪಾವತಿಸಲು ಕೋರ್ಟ್ ಆದೇಶಿಸಿದೆ. ಅಲ್ಲದೇ, ದಂಡದ ಮೊತ್ತ ಪಾವತಿಸದಿದ್ದಲ್ಲಿ ಹೆಚ್ಚಿನ ಶಿಕ್ಷೆ ಅನುಭವಿಸಬೇಕಾಗುತ್ತದೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೂಜಾ ಹಡಪದ ಪರ ವಾದ ಮಂಡಿಸಿದ್ದ ಸರ್ಕಾರಿ ಅಭಿಯೋಜಕ ಶರಣಗೌಡ ಪಾಟೀಲ್ ಹೇಳಿದ್ರು.
undefined
ಬೀದರ್‌ನ ಅಕ್ಕಮಹಾದೇವಿ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಾ ಇದ್ದ ಭಾಲ್ಕಿ ತಾಲೂಕಿನ ಕೋಸಮ್ ಗ್ರಾಮದ ಪೂಜಾ ಹಡಪದ ಎಂಬ ಯುವತಿಯನ್ನ ಅದೇ ಗ್ರಾಮದ ಯುವಕ ಶಾಬೋದ್ದಿನ್ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. 2018 ಜನೇವರಿ 27ರಂದು ಕಾಲೇಜಿನಲ್ಲಿದ್ದ ಪೂಜಾಳಿಗೆ ನಿಮ್ಮ ಅಣ್ಣನಿಗೆ ಎದೆ ನೋವು ಎಂದು ಹೇಳಿ ಕಾಲೇಜಿನಿಂದ ಭಾಲ್ಕಿ ತಾಲೂಕಿನ ಖಾನಾಪುರ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವಳನ್ನ ಅತ್ಯಾಚಾರ ಎಸಗಿ, ಭೀಕರವಾಗಿ ಹತ್ಯೆ ಮಾಡಿದ್ದ. ವಿದ್ಯಾರ್ಥಿಯ ರೇಪ್ & ಮರ್ಡರ್ ಸುದ್ದಿ ತಿಳಿಯುತ್ತಿದ್ದಂತೆ ಬೀದರ್ ಸೇರಿದಂತೆ ರಾಜ್ಯಾದ್ಯಂತ ಕಿಚ್ಚು ಹಚ್ಚಿತ್ತು. ಪೂಜಾ ಹಡಪದ ಸಾವಿಗೆ ನ್ಯಾಯ ಒದಗಿಸಿ ಕೊಡುವಂತೆ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ಬೀದಿಗಳಿದು ಉಗ್ರ ಹೋರಾಟ ನಡೆಸಿದ್ರು.
ರೈಲ್ವೆ ಇಲಾಖೆಯ ಉದ್ಯೋಗಾವಕಾಶ ಪಡೆಯಿರಿ: ಕೇಂದ್ರ ಸಚಿವ ವಿ.ಸೋಮಣ್ಣ
ಇದರ ಫಲವಾಗಿ ಆರು ವರ್ಷಗಳ ಬಳಿಕ ಆರೋಪಿ ಶಾಬೋದ್ದಿನ್‌ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ್ದು, ಕೊಲೆಯಾದ ವಿದ್ಯಾರ್ಥಿ ಪೂಜಾ ಹಡಪದ ಸಾವಿಗೆ ನ್ಯಾಯ ಸಿಕ್ಕಿದ್ದಕ್ಕೆ ಮೃತ ಪೂಜಾ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಆರೋಪಿಗೆ ಜೀವಾವಧಿ ಶಿಕ್ಷೆಯ ಬದಲು, ಗಲ್ಲು ಶಿಕ್ಷೆ ಆಗಬೇಕಿತ್ತು ಎಂದು ಮೃತ ಮಗಳನ್ನ ನೆನೆದು ಕಣ್ಣೀರಾಕಿ ಮಗಳ ನ್ಯಾಯಕ್ಕಾಗಿ ಹೋರಾಡಿದವರಿಗೆ ಧನ್ಯವಾದ ತಿಳಿಸಿದರು. ಒಟ್ನಲ್ಲಿ ರಾಜ್ಯಾದ್ಯಂತ ಸದ್ದು ಮಾಡಿದ್ದ ಪೂಜಾ ಹಡಪದ ರೇಪ್ ಆ್ಯಂಡ್ ಮರ್ಡರ್ ಕೇಸ್‌ಗೆ ಆರು ವರ್ಷಗಳ ಬಳಿಕ ನ್ಯಾಯ ಸಿಕ್ಕಂತಾಗಿದ್ದು, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕಿತ್ತು ಎಂದು ಮೃತಳ ತಾಯಿ ಒತ್ತಾಯಿಸಿದ್ದಾರೆ. ಮತ್ತೆ ಅತ್ಯಾಚಾರದಂತ ಪ್ರಕರಣಗಳು ಮರುಕಳಿಸಬಾರದು ಎಂದರೆ ಕಠಿಣ ಕಾನೂನು ತರಬೇಕೆಂಬುದು ಜನರ ಆಶಯವಾಗಿದೆ.