ಆರೋಪಿ ಹಿತೇಶ್ ವಿರುದ್ಧ ದೂರು ದಾಖಲಿಸದೇ ಸತಾಹಿಸಿದ ಕುದುರೆಮುಖ ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಪೋಷಕರು. ದೂರು ಸ್ವೀಕರಿಸದ ಕುದುರೆಮುಖ ಪೊಲೀಸರನ್ನ ತರಾಟೆಗೆ ತೆಗೆದುಕೊಂಡಿದ್ದ ಎಸ್ಪಿ.
ಚಿಕ್ಕಮಗಳೂರು(ಜ.15): ಬಿಜೆಪಿ ಕಾರ್ಯಕರ್ತನೊಬ್ಬನ ಕಿರುಕುಳಕ್ಕೆ ಅಪ್ರಾಪ್ತ ಬಾಲಕಿ ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ. ಕಳಸ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ದೀಪ್ತಿ(17) ಮೃತ ದುರ್ದೈವಿಯಾಗಿದ್ದಾಳೆ.
ಬಿಜೆಪಿ ಕಾರ್ಯಕರ್ತ ಹಿತೇಶ್ (25) ಅಪ್ರಾಪ್ತ ಬಾಲಕಿ ದೀಪ್ತಿಯನ್ನ ಪ್ರೀತಿಸಿ ವಂಚಿಸಿದ್ದಾನೆ ಅಂತ ಆರೋಪಿಸಲಾಗಿದೆ. ಇದರಿಂದ ನೊಂದ ದೀಪ್ತಿ ಜ.10ರಂದು ಮನೆಯಲ್ಲಿದ್ದ ಕಳೆ ನಾಶಕ ಸೇವಿಸಿ ಆಹ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣ ಅವಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ನಿನ್ನೆ(ಜ.14)ರಂದು ಚಿಕಿತ್ಸೆ ಫಲಿಸದೆ ಮಂಗಳೂರಿನ ಏ.ಜೆ.ಆಸ್ಪತ್ರೆಯಲ್ಲಿ ದೀಪ್ತಿ ಸಾವನ್ನಪ್ಪಿದ್ದಾಳೆ. ಸಾಯುವ ಮುನ್ನ ದೀಪ್ತಿ ಡೆತ್ ನೋಟ್ ಬರೆದಿಟ್ಟಿದ್ದಳು.
Koppala: ಪ್ರೀತಿ ನೀರಾಕರಿಸಿದ ಮನೆಯವರು, ಕತ್ತು ಕೊಯ್ದುಕೊಂಡು ಪ್ರೇಮಿಗಳ ಆತ್ಮಹತ್ಯೆ
ಆರೋಪಿ ಹಿತೇಶ್ ವಿರುದ್ಧ ದೂರು ದಾಖಲಿಸದೇ ಸತಾಹಿಸಿದ ಕುದುರೆಮುಖ ಪೊಲೀಸರ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಷಕರ ದೂರು ಸ್ವೀಕರಿಸದ ಕುದುರೆಮುಖ ಪೊಲೀಸರಿಗೆ ಎಸ್ಪಿ ತರಾಟೆಗೆ ತೆಗೆದುಕೊಂಡಿದ್ದರು. ಎಸ್‌ಪಿ ಸೂಚನೆ ಬಳಿಕ ಆರೋಪಿ ಹಿತೇಶ್ ವಿರುದ್ಧ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಆದರೆ, ಈವರೆಗೆ ಕುದುರೆಮುಖ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಆರೋಪಿ ಬಿಜೆಪಿ ಕಾರ್ಯಕರ್ತ ಹಿತೇಶ್ ವಿರುದ್ಧ ಕ್ರಮಕ್ಕೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.