ಚಿಕ್ಕಬಳ್ಳಾಪುರ: ನೆರೆ-ಹೊರೆ ನಿವಾಸಿಗಳ ಮಧ್ಯೆ ಜಗಳ, ಜೈಲಿಗೆ ಹಾಕುವ ಭೀತಿ, ಬಾಲಕ ಆತ್ಮಹತ್ಯೆ

By Kannadaprabha News  |  First Published Sep 9, 2024, 10:58 AM IST

ಗ್ರಾಮದ ರಾಮಯ್ಯ-ಲಕ್ಷ್ಮಮ್ಮ ದಂಪತಿ, ಲಕ್ಷಯ್ಯ-ಆಶಮ್ಮ ದಂಪತಿ, ವಿವಾದಿತ ರಸ್ತೆಯಲ್ಲಿ ನಡೆದು ಬರುತ್ತಿದ್ದ ಬಾಲಕ ಸುದೀಪ್ ಮತ್ತು ಆತನ ತಂಗಿಯೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿದರು ಎನ್ನಲಾಗಿದೆ. ಈ ವೇಳೆ ಕೋಪಗೊಂಡ ಬಾಲಕ ಇಟ್ಟಿಗೆ ಎಸೆದಿದ್ದು ರಾಮಯ್ಯನಿಗೆ ಗಾಯವಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಾಲಕ ಹಾಗೂ ಆತನ ತಂದೆ ವಿರುದ್ಧ ದೂರು ನೀಡಲಾಗಿತ್ತು.


ಚಿಕ್ಕಬಳ್ಳಾಪುರ(ಸೆ.09):  ವಿವಾದಿತ ರಸ್ತೆ ಜಾಗದ ವಿಚಾರವಾಗಿ ನೆರೆ-ಹೊರೆ ನಿವಾಸಿಗಳ ಜಗಳದಲ್ಲಿ ಇಟ್ಟಿಗೆ ತೂರಿದ್ದ ಬಾಲಕನೊಬ್ಬ ಪೊಲೀಸರು ತನ್ನನ್ನು ಜೈಲಿಗೆ ಹಾಕುತ್ತಾರೆಂಬ ಭೀತಿಯಿಂದ ಅತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕವರನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕವರನಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಪುಷ್ಪ ದಂಪತಿಯ ಮಗ ಸುದೀಪ್ (16) ಆತ್ಮಹತ್ಯೆಗೆ ಶರಣಾದ ಬಾಲಕ.

ಬಾಲಕನ ವಿರುದ್ಧ ದೂರು

Tap to resize

Latest Videos

ಶುಕ್ರವಾರ ಸಂಜೆ ಗ್ರಾಮದ ರಾಮಯ್ಯ-ಲಕ್ಷ್ಮಮ್ಮ ದಂಪತಿ, ಲಕ್ಷಯ್ಯ-ಆಶಮ್ಮ ದಂಪತಿ, ವಿವಾದಿತ ರಸ್ತೆಯಲ್ಲಿ ನಡೆದು ಬರುತ್ತಿದ್ದ ಬಾಲಕ ಸುದೀಪ್ ಮತ್ತು ಆತನ ತಂಗಿಯೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿದರು ಎನ್ನಲಾಗಿದೆ. ಈ ವೇಳೆ ಕೋಪಗೊಂಡ ಬಾಲಕ ಇಟ್ಟಿಗೆ ಎಸೆದಿದ್ದು ರಾಮಯ್ಯನಿಗೆ ಗಾಯವಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಾಲಕ ಹಾಗೂ ಆತನ ತಂದೆ ವಿರುದ್ಧ ದೂರು ನೀಡಲಾಗಿತ್ತು.

ಧಾರವಾಡ: ಪ್ರೇಮ ವೈಫಲ್ಯದಿಂದ ನೊಂದು ವಿಷ ಸೇವಿಸಿ ಯುವಕ ಆತ್ಮಹತ್ಯೆ!

ಬಾಲಕ ಆತ್ಮಹತ್ಯೆ:

ನಿಮ್ಮನ್ನ ಜೈಲಿಗೆ ಹಾಕಿಸುವವರೆಗೂ ಬಿಡುವುದಿಲ್ಲ ಎಂದು ಬಾಲಕನಿಗೆ ಬೆದರಿಕೆ ಹಾಕಿದ್ದಾರಂತೆ. ಇದರಿಂದ ಹೆದರಿದ ಬಾಲಕ ಶನಿವಾರ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸತ್ತಿದ್ದಾನೆ. ಘಟನೆ ನಂತರ ಆಶಮ್ಮ ಹಾಗೂ ಲಕ್ಷ್ಮಮ್ಮನವರ ಕುಟುಂಬಸ್ಥರು ಮನೆಗಳಿಗೆ ಬೀಗ ಹಾಕು ಪರಾರಿಯಾಗಿದ್ದಾರೆ.

ಈ ಸಂಬಧವೂ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

click me!