ಗುಂಡ್ಲುಪೇಟೆ: ಪ್ರೀತಿಸುವಂತೆ ಕಿರುಕುಳ, ಯುವಕನ ಕಾಟಕ್ಕೆ ಬೇಸತ್ತು ಅಪ್ರಾಪ್ತೆ ಆತ್ಮಹತ್ಯೆ

By Kannadaprabha News  |  First Published Oct 25, 2023, 6:30 AM IST

ಯುವಕ ಪೀಡಿಸುತ್ತಿರುವ ಬಗ್ಗೆ ಆತನ ಪೋಷಕರಿಗೆ ತಿಳಿಸಿದರೂ ಅವರು ತಡೆಯಲಿಲ್ಲ ಎಂದು ದೂರಿನಲ್ಲಿ ತಿಳಿಸಿದ ಮೃತ ಐಶ್ವರ್ಯಳ ತಾಯಿ ಪ್ರೇಮ 


ಗುಂಡ್ಲುಪೇಟೆ(ಅ.25):  ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಯುವಕನೊಬ್ಬ ಪ್ರೀತಿಸುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದ ಕಾರಣ ಆಕೆ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಹೊಣಕನಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಿ.ಐಶ್ವರ್ಯ(16) ಆತ್ಮಹತ್ಯೆಗೆ ಶರಣಾದ ಬಾಲಕಿ. ತಾಲೂಕಿನ ಯಡವನಹಳ್ಳಿಯ ಯುವಕ ಶ್ರೀನಿವಾಸ್‌, ಬಿಳಿಗಿರಿನಾಯಕ, ನಾಗಮ್ಮ (ಯವಕನ ತಂದೆ, ತಾಯಿ) ಸಾವಿಗೆ ಕಾರಣ ಎಂದು ಐಶ್ವರ್ಯಳ ತಾಯಿ ಪ್ರೇಮ ಬೇಗೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. 

Tap to resize

Latest Videos

undefined

ಮಗಳು ಲವ್‌ ಮಾಡಿ ಓಡಿಹೋಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ತಂದೆ

ಯುವಕ ಪೀಡಿಸುತ್ತಿರುವ ಬಗ್ಗೆ ಆತನ ಪೋಷಕರಿಗೆ ತಿಳಿಸಿದರೂ ಅವರು ತಡೆಯಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

click me!