ತಾಯಿಯ ಗೆಳೆಯನ ಉಸಿರು ನಿಲ್ಲುವವರೆಗೂ ಚುಚ್ಚುತ್ತಲೇ ಇದ್ದ!

Published : May 21, 2021, 10:26 PM IST
ತಾಯಿಯ ಗೆಳೆಯನ ಉಸಿರು ನಿಲ್ಲುವವರೆಗೂ ಚುಚ್ಚುತ್ತಲೇ ಇದ್ದ!

ಸಾರಾಂಶ

* ತಾಯಿಯ ಗೆಳೆಯನನನ್ನು ಬರ್ಬರವಾಗಿ ಹತ್ಯೆ ಮಾಡಿದ ಬಾಲಕ * ಪ್ರತಿ ದಿನ ಚಿತ್ರಹಿಂಸೆ ನೀಡುತ್ತಿದ್ದವನ ಕೊಂದು ಹಾಕಿದ * ತಾಯಿ ಆತನ ಜತೆ ಹತ್ತು ವರ್ಷದಿಂದ ವಾಸಿಸುತ್ತಿದ್ದರು * ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರು ನಿಲ್ಲುವವರೆಗೂ ಚುಚ್ಚುತ್ತಲೇ ಇದ್ದ

ಅಹಮದಾಬಾದ್‌ (ಮೇ 21)  ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ಸೋಮವಾರ 14 ವರ್ಷದ ಬಾಲಕ ತನ್ನ ತಾಯಿಯ ಗೆಳೆಯನನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾನೆ.  ತಾಯಿ ಮತ್ತು ತನಗೆ ನೀಡುತ್ತಿದ್ದ ದೈಹಿಕ ಹಿಂಸೆ ತಾಳಲಾರದೆ ಬಾಲಕ ಇಂಥ  ಕೆಲಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಡನ ತೊರೆದು ಹತ್ತು ವರ್ಷದಿಂದ ಆರೋಪಿ ಹುಡುಗನ ತಾಯಿ ಸಾವಿಗೀಡಾದ ವ್ಯಕ್ತಿಯೊಂದಿಗೆ ವಾಸ ಮಾಡುತ್ತಿದ್ದಳು.  ಇತ್ತೀಚೆಗೆ ತಾಯಿಯ ಗಂಡ ವಿಪರೀತ ಕಿರುಕುಳ ನೀಡಲು ಆರಂಭಿಸಿದ್ದ.  ತಾಯಿಗೆ ಕಿರುಕುಳ  ನೀಡಲು ಮುಂದಾದಾಗ ಅದನ್ನು ತಪ್ಪಿಸಲು ಹೋದರೆ ಬಾಲಕ ಮತ್ತು ಮಹಿಳೆ ಇಬ್ಬರ ಮೇಲೆಯೂ ಹಲ್ಲೆ ಮಾಡುತ್ತಿದ್ದ.

ಬೆಳಗಾವಿ; ನಡು ರಸ್ತೆಯಲ್ಲೇ ಲೈವ್ ಸುಸೈಡ್

ಪ್ರತಿ ದಿನ ದೈಹಿಕ ಹಿಂಸೆ ನೀಡುತ್ತಿರುವುದನ್ನು ತಾಳಲಾರದೆ ಬಾಲಕ ಅಂತಿಮವಾಗಿ ಆತನನ್ನೇ ಹತ್ಯೆ ಮಾಡಿದ್ದಾನೆ. ಮೇ 17 ರಂದು, ಬಾಲಕ ಕೊಲೆಯಾದ ವ್ಯಕ್ತಿಯನ್ನು  ಅಹಮದಾಬಾದ್‌ನ ಬೆಹ್ರಾಂಪುರಾ ಪ್ರದೇಶದ ಕ್ಯಾಲಿಕೊ ಮಿಲ್ ಕಾಂಪೌಂಡ್‌ನಲ್ಲಿ ದ್ವಿಚಕ್ರ ವಾಹನದಲ್ಲಿ  ಕರೆದುಕೊಂಡು ಹೋಗಿದ್ದಾನೆ.  ನಿರ್ಜನ ಪ್ರದೇಶದಲ್ಲಿ ಚಾಕುವಿನಿಂದ ಇರಿದಿದ್ದಾನೆ. ಆತ ಸಾಯುವವರೆಗೂ ಇರಿಯುತ್ತಲೆ ಇದ್ದ.

ಪೊಲೀಸರು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಲಕನನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?