Crime News Today: 10 ವರ್ಷದ ಬಾಲಕನ ಮೇಲೆ ಗ್ಯಾಂಗ್‌ ರೇಪ್‌ ಪ್ರಕರಣ: ಅಪ್ರಾಪ್ತ ಆರೋಪಿಗಳ ಬಂಧನ

Published : Sep 26, 2022, 12:47 PM ISTUpdated : Sep 26, 2022, 01:23 PM IST
Crime News Today: 10 ವರ್ಷದ ಬಾಲಕನ ಮೇಲೆ ಗ್ಯಾಂಗ್‌ ರೇಪ್‌ ಪ್ರಕರಣ: ಅಪ್ರಾಪ್ತ ಆರೋಪಿಗಳ ಬಂಧನ

ಸಾರಾಂಶ

10 year old boy gangraped: ನವ ದೆಹಲಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, 10 ವರ್ಷದ ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಪ್ರಕರಣದ ಆರೋಪಿಗಳು ಸಹ ಬಾಲಕನ ವಯಸ್ಸಿನವರೇ ಆಗಿದ್ದು, ಎಲ್ಲರೂ ಸ್ನೇಹಿತರು. ಲೈಂಗಿಕ ದೌರ್ಜನ್ಯಕ್ಕೆ ಕಬ್ಬಿಣದ ಸಲಾಕೆ ಬಳಸಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿದೆ.

ನವೆದಹಲಿ: 10 ವರ್ಷದ ಬಾಲಕನ ಮೇಲೆ ಸ್ನೇಹಿತರೇ  ಅತ್ಯಾಚಾರ ನಡೆಸಿದ ಘಟನೆ ನವದೆಹಲಿಯ ನ್ಯೂ ಸೀಲಾಂಪುರ್‌ ಏರಿಯಾದಲ್ಲಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ ಬಾಲಕನ ಮೂವರು ಸ್ನೇಹಿತರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇಬ್ಬರು ಮಕ್ಕಳನ್ನು ಈಗಾಗಲೇ ವಶಕ್ಕೆ ಪಡೆದು ಬಾಲಾಪರಾಧಿ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದ್ದು, ಮೂರನೇ ಆರೋಪಿಯನ್ನು ವಶಕ್ಕೆ ಪಡೆಯಲು ಯತ್ನ ಮುಂದುವರೆದಿದೆ. ದೆಹಲಿ ಮಹಿಳಾ ಆಯೋಗ ಕೂಡ ಪೊಲೀಸರಿಗೆ ನೊಟೀಸ್‌ ಜಾರಿಗೊಳಿಸಿದ್ದು, ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ಧೇಶಿಸಿದೆ. 

ದೆಹಲಿ ಮಹಿಳಾ ಆಯೋಗದ ಮಾಹಿತಿ ಪ್ರಕಾರ ಸಂತ್ರಸ್ಥ ಬಾಲಕನ ತಾಯಿ ಆಯೋಗಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ. ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅವನ ಸ್ನೇಹಿತರು ಕಬ್ಬಿಣದ ಸಲಾಕೆಯನ್ನು ಖಾಸಗಿ ಭಾಗದೊಳಕ್ಕೆ ತೂರಿಸಿದ್ದಾರೆ ಎಂದು ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಸಂತ್ರಸ್ಥ ಮತ್ತು ಆರೋಪಿಗಳೆಲ್ಲರೂ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದು, ಸ್ನೇಹಿತರಾಗಿದ್ದಾರೆ. ಎಲ್ಲರೂ 10ರಿಂದ 12 ವರ್ಷ ವಯಸ್ಸಿನೊಳಗಿನವರು. ಒಂದೇ ಕೋಮಿನವರಾಗಿದ್ದು ಸೆಪ್ಟೆಂಬರ್‌ 18ರಂದು ಘಟನೆ ನಡೆದಿದೆ ಎನ್ನಲಾಗಿದೆ. 

ಸೆಪ್ಟೆಂಬರ್‌ 22ನೇ ತಾರೀಕು ಪೊಲೀಸರಿಗೆ ಎಲ್‌ಎನ್‌ಜೆಪಿ ಆಸ್ಪತ್ರೆಯಿಂದ ಮಾಹಿತಿ ಬಂದಿದ್ದು, ಹತ್ತು ವರ್ಷದ ಹುಡುಗನ ಮೇಲೆ ದೈಹಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ಮೆಡಿಕೋ ಲೀಗಲ್‌ ಕೇಸನ್ನು ದಾಖಲಿಸಿದ್ದಾರೆ. ತಕ್ಷಣ ಪೊಲೀಸ್‌ ತಂಡ ಆಸ್ಪತ್ರೆಗೆ ಭೇಟಿ ನೀಡಿದ್ದು, ಹುಡುಗನ ಪೋಷಕರನ್ನು ಭೇಟಿ ಮಾಡಿದ್ದಾರೆ. ಆದರೆ ಅವರು ದೂರು ದಾಖಲಿಸಲು ನಿರಾಕರಿಸಿದ್ದಾರೆ. ಬಾಲಕ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಬಾಲಕನ ಮೇಲಿನ ಪೋಕ್ಸೋ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಪ್ರಕರಣ ಸಂಬಂಧ ಹೇಳಿಕೆ ನೀಡುವಂತೆ ಬಾಲಕ ಮತ್ತು ತಾಯಿಗೆ ಪೊಲೀಸರು ಹಲವು ಬಾರಿ ಮನವಿ ಮಾಡಿದರೂ ಒಪ್ಪಲಿಲ್ಲ. ಇವರ ಕೌನ್ಸೆಲಿಂಗ್‌ಗಾಗಿ ಪೊಲೀಸರು ಕೌನ್ಸಿಲರ್‌ ಒಬ್ಬರನ್ನು ಸಖಿ ಎಂಬ ಸಂಸ್ಥೆಯಿಂದ ಕಳುಹಿಸಿದ ನಂತರ ಹೇಳಿಕೆ ದಾಖಲಿಸಲು ಒಪ್ಪಿಕೊಂಡಿದ್ದಾರೆ. ಹಲವು ಬಾರಿಯ ಕೌನ್ಸೆಲಿಂಗ್‌ ನಂತರ ಮಾತನಾಡಿದ ಸಂತ್ರಸ್ಥೆಯ ತಾಯಿ ಸೆಪ್ಟೆಂಬರ್‌ 18ರಂದು ಮಗನ ಮೂವರು ಸ್ನೇಹಿತರು ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೇಳಿಕೆಯನ್ನಾಧರಿಸಿ ಪೋಕ್ಸೊ (Protection of Children from Sexual Offences Act), ಅಸ್ವಾಭಾವಿಕ ಅಪರಾಧ ಸೇರಿದಂತೆ ಇನ್ನೂ ಹಲವು ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. 

ಇಟ್ಟಿಗೆ ಮತ್ತು ರಾಡಿನಿಂದ ಮಗನ ಮೇಲೆ ದೈಹಿಕವಾಗಿ ಹಲ್ಲೆ ಮಾಡಲಾಗಿದೆ ಎಂದೂ ಬಾಲಕನ ತಾಯಿ ಆರೋಪಿಸಿದ್ದಾರೆ. ಸೆಪ್ಟೆಂಬರ್‌ 28ರೊಳಗೆ ಪ್ರಕರಣದ ಎಫ್‌ಐಆರ್‌, ತೆಗೆದುಕೊಂಡ ಕಾನೂನು ಕ್ರಮ ಮತ್ತು ಆರೋಪಿಗಳ ವೈಯಕ್ತಿಕ ಮಾಹಿತಿಯನ್ನು ಆಯೋಗಕ್ಕೆ ನೀಡಬೇಕೆಂದು ಮಹಿಳಾ ಆಯೋಗ ನೀಡಿರುವ ನೊಟೀಸ್‌ನಲ್ಲಿ ತಿಳಿಸಲಾಗಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್‌ ಮಾತನಾಡಿದ್ದು, "ಇದು ಅತ್ಯಂತ ಹೇಯ ಕೃತ್ಯ. ಹುಡುಗನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ನಾಲ್ವರು ಆತನ ಖಾಸಗಿ ಭಾಗಕ್ಕೆ ರಾಡ್‌ ಹಾಕಿದ್ದಾರೆ, ಆತನಿಗೆ ಮನ ಬಂದಂತೆ ಹೊಡೆಯಲಾಗಿದೆ," ಎಂದು ಘಟನೆಯ ಕುರಿತು ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ: Crime News: ಪ್ಲಂಬರ್‌ನಿಂದ ಅತ್ಯಾಚಾರ: ಮಗುವಿಗೆ ಜನ್ಮವಿತ್ತ ಅಪ್ರಾಪ್ತೆ

"ಹುಡುಗ ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಮ್ಮ ತಂಡ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದು ಎಲ್ಲ ರೀತಿಯ ಸಹಾಯವನ್ನೂ ಮಾಡುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸರಿಗೆ ನಿರ್ದೇಶಿಸಲಾಗಿದೆ," ಎಂದು ಸ್ವಾತಿ ಮಳಿವಾಲ್‌ ಮಾಹಿತಿ ನೀಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!