10 ದಿನದ ಹಿಂದೆ ಮದುವೆಯಾಗಿದ್ದ ನವಜೋಡಿ ಸಾವು: ಮನೆ ದೇವರಿಗೆ ಹೋದವರು ಮರಳಿ ಬರಲೇ ಇಲ್ಲ

By Sathish Kumar KH  |  First Published Apr 1, 2023, 10:59 PM IST

ಕಳೆದ 10 ದಿನಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಮನೆ ದೇವರಿಗೆಂದು ಬಂದು ವಾಪಸ್‌ ಹೋಗುವಾಗ ಅಪಘಾತವಾಗಿ ಮಸಣ ಸೇರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. 


ಬೆಳಗಾವಿ (ಏ.01): ಮಹಾರಾಷ್ಟ್ರದಲ್ಲಿ ಕಳೆದ 10 ದಿನಗಳ ಹಿಂದಷ್ಟೇ ಮದುವೆ ಮಾಡಿಕೊಂಡಿದ್ದ ನವದಂಪತಿ, ಹೊಸ ಕಾರಿನಲ್ಲಿ ದೇವರ ದರ್ಶನಕ್ಕೆಂದು ಬಾದಾಮಿಯ ಬನಶಂಕರಿ ದೇವಾಲಯಕ್ಕೆ ಹೋಗಿದ್ದರು. ದೇವರ ದರ್ಶನ ಪಡೆದು ಮರಳಿ ಹೋಗುವಾಗ ಟ್ಯಾಂಕರ್‌ಗೆ ಗುದ್ದಿ ಸಾವನ್ನಪ್ಪಿದ್ದಾರೆ. 

ಹೊಸದಾಗಿ ಮದುವೆ ಆಗುವ ನವದಂಪತಿಗೆ ಮನೆ ದೇವರ ಆಶೀರ್ವಾದ ಪಡೆಯಲಿ ಎಮದು ಇಬ್ಬರನ್ನೂ ದೇವರಿಗೆ ಕಳುಹಿಸುವುದು ಸಾಮಾನ್ಯವಾಗಿರುತ್ತದೆ. ಮದುವೆ ಸೇರಿ ಎಲ್ಲ ಶಾಸ್ತ್ರ ಸಂಪ್ರದಾಯಗಳನ್ನು ಮಾಡುವ ಅವರು ಕಣ್ಣಿಗೆ ನಿದ್ದೆ ಇರದೇ ಸುಸ್ತು ಆಗಿರುತ್ತಾರೆ. ಆದರೆ, ಇದ್ಯಾದುವುದನ್ನೂ ಲೆಕ್ಕಿಸದೇ ದೂರದ ಮಹಾರಾಷ್ಟ್ರದಿಂದ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿರುವ ಬನಶಂಕರಿ ದೇವಿ ದರ್ಶನಕ್ಕೆ ನವದಂಪತಿ ಇಬ್ಬರೇ ಆಗಮಿಸಿದ್ದಾರೆ. ಹೊಸ ಜೋಡಿಗೆ ಖಾಸಗಿತನ ಇರಲಿ ಎಂದು ಮನೆಯವರು ಕಳುಹಿಸಿರಬಹುದು, ಆದರೆ ಇಲ್ಲಿ ಪ್ರೈವೆಸಿಗಿಂತ ದುರಂತ ಸಂಭವಿಸಿ ಪ್ರಾಣವೇ ಹೋಗಿದೆ.

Tap to resize

Latest Videos

ಡ್ಯಾಂನಲ್ಲಿ ಈಜಲು ಹೋಗಿ ಕಾಲೇಜು ವಿದ್ಯಾರ್ಥಿನಿಯರು ಸಾವು: ಟ್ರಿಪ್‌ಗೆ ಹೋದವರು ಮಸಣ ಸೇರಿದರು

ಬೆಳಗಾವಿ ಮೂಡಲಗಿ ಬಳಿ ದುರ್ಘಟನೆ: ಇಂದ್ರಜೀತ್ ಮೋಹನ್ ಡಮ್ಮನಗಿ (27) ಹಾಗೂ ಕಲ್ಯಾಣಿ ಡಮ್ಮಣಗಿ (27) ಮೃತ ನವ ದಂಪತಿಯಾಗಿದ್ದಾರೆ. ಮೃತ ನವದಂಪತಿ ಮಹಾರಾಷ್ಟ್ರದ ಇಸ್ಲಾಂಪುರ ಮೂಲದವರು ಎಂದು ತಿಳಿದುಬಂದಿದೆ. ಸಪ್ತಪದಿ ತುಳಿದು ಹತ್ತೆ ದಿನಕ್ಕೆ ಮಸಣ ಸೇರಿದ್ದಾರೆ. ಬಾದಾಮಿಯ ಬನಶಂಕರಿ ದೇವಿ ದರ್ಶನ ಪಡೆದು ಮರಳುವಾಗ ಅಪಘಾತ ಬೆಳಗಾವಿ ‌ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದ ಬಳಿ ದುರ್ಘಟನೆ ನಡೆದಿದೆ. ದಂಪತಿಯಿದ್ದ ಕಾರು ಹಾಗೂ ಟ್ಯಾಂಕರ್ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. 

ಲವರ್‌ ಜೊತೆಗೆ ಮದುವೆ ಮಾಡಿಸಿ ಎಂದು ಪೊಲೀಸ್‌ ಠಾಣೆಗೆ ಬಂದ ನವವಧು: 
ಹಿಂದೆಲ್ಲಾ ಮದುವೆ ಅಂದ್ರೆ ನೂರಾರು ಜನ್ಮದ ಬಂಧ ಎಂಬಂತೆ ಇರುತ್ತಿತ್ತು. ಹಿರಿಯರು ನಿಂತು ಮಾಡಿದ ಮದುವೆಯಲ್ಲಿ ಗಂಡ-ಹೆಂಡತಿ ಸಾಯೋವರೆಗೂ ಪ್ರೀತಿ, ನಂಬಿಕೆಯಿಂದ ಜೊತೆಯಾಗಿ ಇರ್ತಾ ಇದ್ರು. ಮದುವೆಯನ್ನು ನಾಲ್ಕೈದು ದಿನಗಳ ಕಾಲ ಹಬ್ಬದಂತೆ ಆಚರಿಸಲಾಗ್ತಿತ್ತು. ಆದರೆ ಈಗಂತೂ ಬೇಕಾ ಬೇಡ್ವಾ ಎಂಬಂತೆ ಮದುವೆ ನಡೆಯುತ್ತೆ. ಈಗಾಗ್ಲೇ ಲವ್‌, ಬ್ರೇಕಪ್ ಅಂತ ಆಗಿರೋರು ಯಾರದ್ದೋ ಒತ್ತಾಯಕ್ಕೆ ಆಗುವಂತೆ ಮದುವೆ ಆಗ್ತಾರೆ. ಮನೆಯವರು ತೋರಿಸಿದ ಹುಡುಗ-ಹುಡುಗಿಗೆ ತಾಳಿ ಕಟ್ಟುತ್ತಾರೆ. ಮದುವೆಯ ಶಾಸ್ತ್ರಗಳನ್ನು ಪಾಲಿಸುವ ವ್ಯವಧಾನವೂ ಅವರಿಗಿರುವುದಿಲ್ಲ. ಅದರಲ್ಲೂ ಭಾರತೀಯ ಮದುವೆ ಯಾವಾಗಲೂ ಹಲವು ಹೈಡ್ರಾಮಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಅದಕ್ಕೆ ಸಂಬಂಧಿಸಿದ ವೀಡಿಯೋಗಳು ವೈರಲ್ ಆಗುತ್ತದೆ. ಸದ್ಯ ಅಂಥದ್ದೇ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

Viral Post : ಅಯ್ಯೋ, ಕ್ಯಾಮರಾಮನ್ ಮದ್ವೆಯಾದ್ರೆ ಕಥ ಇಷ್ಟೇ!

ಪೊಲೀಸ್‌ ಠಾಣೆಯಲ್ಲಿ ವಧುವಿನ ರಂಪಾಟ: ನವವಿವಾಹಿತೆಯೊಬ್ಬಳು ಮದುವೆ (Marriage)ಯಾದ ಕೆಲವೇ ಕ್ಷಣಗಳಲ್ಲಿ ತನ್ನ ಪ್ರಿಯಕರನೊಂದಿಗೆ ಮದುವೆ ಮಾಡುವಂತೆ ಒತ್ತಾಯಿಸಿ ಪೊಲೀಸ್ ಠಾಣೆಯಲ್ಲಿ ಹೈವೋಲ್ಟೇಜ್ ಡ್ರಾಮಾ ಸೃಷ್ಟಿಸಿದ್ದಾಳೆ. ಯುವತಿ ಮನೆಯವರ ಒತ್ತಾಯಕ್ಕೆ ಅವರು ತೋರಿಸಿದ ಹುಡುಗನನ್ನು ಮದುವೆಯಾಗಿದ್ದಳು. ಮದುವೆಯಾದ ತಕ್ಷಣವೇ ಪೊಲೀಸ್ ಸ್ಟೇಷನ್‌ಗೆ ಬಂದು ಲವರ್ ಜೊತೆ ಮದುವೆ ಮಾಡಿ ಕೊಡಿ ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾಳೆ. ಮಾತ್ರವಲ್ಲ ಠಾಣೆಯಲ್ಲಿ ರಂಪಾಟ ನಡೆಸಿದ್ದಾಳೆ. ಸದ್ಯ ಈ ವೀಡಿಯೋ ಎಲ್ಲೆಡೆ ಹರಿದಾಡ್ತಿದೆ.

"Do shaadi karenge Do Shaadi"

Woman demands marriage with lover soon after her wedding with a man

Police watches as mute spectators

Feeling so bad for her Husband

EQUALITY ! pic.twitter.com/S6zbiqE731

— Deepika Narayan Bhardwaj (@DeepikaBhardwaj)
click me!