Bengaluru crime: ಬ್ಯಾಂಕ್‌ ಲಾಕರಲ್ಲಿದ್ದ 1/2 ಕೇಜಿ ಚಿನ್ನ ಮಾಯ!

By Kannadaprabha NewsFirst Published Dec 15, 2022, 11:47 PM IST
Highlights
  • ಬ್ಯಾಂಕ್‌ ಲಾಕರಲ್ಲಿದ್ದ 1/2 ಕೇಜಿ ಚಿನ್ನ ಮಾಯ!
  • ಯಲಹಂಕ ಉಪನಗರದ ಮದರ್‌ ಡೈರಿ ರಸ್ತೆ ಬ್ಯಾಂಕ್‌ ಶಾಖೆಯಲ್ಲಿ ಚಿನ್ನಾಭರಣ ಇರಿಸಿದ್ದ ಗ್ರಾಹಕ
  • ಸೇಫ್‌ ಲಾಕರಲ್ಲೇ ಚಿನ್ನ ನಾಪತ್ತೆ
  • ಸೂಕ್ತವಾಗಿ ಸ್ಪಂದಿಸದ ಬ್ಯಾಂಕ್‌ ಸಿಬ್ಬಂದಿ ಠಾಣೆಗೆ ಗ್ರಾಹಕ ದೂರು

ಬೆಂಗಳೂರು (ಡಿ.15) : ಬ್ಯಾಂಕ್‌ ಲಾಕರ್‌ನಲ್ಲಿ ಇಡಲಾಗಿದ್ದ ಗ್ರಾಹಕರೊಬ್ಬರ ಅರ್ಧ ಕೆ.ಜಿ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಯಲಹಂಕ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯಲಹಂಕ ಉಪನಗರದ ಮದರ್‌ ಡೈರಿ ರಸ್ತೆಯ ಬ್ಯಾಂಕೊಂದರ ಶಾಖೆಯ ಲಾಕರ್‌ನಲ್ಲಿ ಚಿನ್ನ ನಾಪತ್ತೆಯಾಗಿದ್ದು, ಈ ಸಂಬಂಧ ಬ್ಯಾಂಕ್‌ ಗ್ರಾಹಕ ಬಿ.ಎನ್‌.ಕೃಷ್ಣಕುಮಾರ್‌ ನೀಡಿದ ದೂರಿನ ಮೇರೆಗೆ ಬ್ಯಾಂಕ್‌ ಅಧಿಕಾರಿಗಳಾದ ಪ್ರದೀಪ್‌, ಸೌಮ್ಯಾ ಮತ್ತು ನಲನ್‌ ವಿರುದ್ಧ ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್‌ನಲ್ಲಿ ಕೃಷ್ಣಕುಮಾರ್‌ ಮತ್ತು ಅವರ ಪುತ್ರ ಬಿ.ಕೆ.ಶ್ರೀಹರ್ಷ ಜಂಟಿ ಖಾತೆ ಹೊಂದಿದ್ದಾರೆ. ಮೂರೂವರೆ ವರ್ಷದಿಂದ ಜರ್ಮನಿಯಲ್ಲಿ ಶ್ರೀ ಹರ್ಷ ನೆಲೆಸಿದ್ದಾರೆ. ಹೀಗಾಗಿ 2020ರ ಜೂ.17ರಂದು ಬ್ಯಾಂಕ್‌ನಲ್ಲಿ ಸೇಫ್‌ ಲಾಕರ್‌ ತೆರೆದಿದ್ದರು. ಬ್ಯಾಂಕ್‌ ಖಾತೆಯನ್ನು ಅವರ ತಂದೆ ಕೃಷ್ಣಕುಮಾರ್‌ ನಿರ್ವಹಿಸುತ್ತಿದ್ದರು. ಸುರಕ್ಷತೆಗಾಗಿ ಸೇಫ್‌ ಲಾಕರ್‌ನಲ್ಲಿ 580 ಗ್ರಾಂ ಚಿನ್ನಾಭರಣವನ್ನು ಕೃಷ್ಣಕುಮಾರ್‌ ಇಟ್ಟಿದ್ದರು. ಆಗಾಗ ಈ ಆಭರಣಗಳನ್ನು ತೆಗೆದುಕೊಂಡು ಬಳಿಕ ಮತ್ತೆ ಲಾಕರ್‌ನಲ್ಲೇ ಇಡುತ್ತಿದ್ದರು.

Bengaluru| ಹಾಡಹಗಲೇ ಉದ್ಯಮಿ ಮನೆಯಲ್ಲಿ 47 ಲಕ್ಷ ನಗದು, 7 ಲಕ್ಷ ಚಿನ್ನ ಕಳವು..!

ಕಳೆದ ಮೇ ತಿಂಗಳ ಕೊನೆ ವಾರದಲ್ಲಿ ಆಭರಣವನ್ನು ಮನೆಗೆ ತಂದಿದ್ದ ಅವರು, ಮತ್ತೆ ಜೂನ್‌ 8ಕ್ಕೆ ಮತ್ತೆ ಕೋಡೆಡ್‌ ಬಾಕ್ಸ್‌ನಲ್ಲಿ ಚಿನ್ನಾಭರಣವಿಟ್ಟು ಬ್ಯಾಂಕ್‌ಗೆ ಹೋಗಿ ನೌಕರರ ಸಮ್ಮುಖದಲ್ಲಿ ಸೇಫ್‌ ಲಾಕರ್‌ನಲ್ಲಿಟ್ಟು ಮರಳಿದ್ದರು. ಇದಾದ ನಂತರ ಜರ್ಮನಿಯಲ್ಲಿರುವ ಪುತ್ರನ ಬಳಿ ಹೋಗಿದ್ದರು. ಕೆಲ ದಿನಗಳ ಬಳಿಕ ಬೆಂಗಳೂರಿಗೆ ಮರಳಿದ ಕೃಷ್ಣಕುಮಾರ, ನವೆಂಬರ್‌ 10 ರಂದು ಸೇಫ್‌ ಲಾಕರ್‌ನಲ್ಲಿದ್ದ ಆಭರಣವನ್ನು ತೆಗೆದುಕೊಂಡು ಬರಲು ಬ್ಯಾಂಕ್‌ಗೆ ತೆರಳಿದ್ದರು. ಆಗ ಬ್ಯಾಂಕ್‌ ಉದ್ಯೋಗಿ ಸೌಮ್ಯ ಸಮ್ಮುಖದಲ್ಲೇ ಅವರು ಲಾಕರ್‌ ತೆರೆದಾಗ ಆಭರಣವಿದ್ದ ಬಾಕ್ಸ್‌ ಕಾಣೆಯಾಗಿತ್ತು. ಕೂಡಲೇ ಬ್ಯಾಂಕ್‌ ವ್ಯವಸ್ಥಾಪಕರಿಗೆ ಗ್ರಾಹಕರು ದೂರು ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲಿಸಲು ಮೂರು ದಿನಗಳು ಸಮಯವನ್ನು ಅಧಿಕಾರಿಗಳು ಕೇಳಿದ್ದರು. ಈ ಮಾತಿಗೆ ಒಪ್ಪಿದ ಅವರು, ಮೂರು ದಿನಗಳ ಬಳಿಕ ತೆರಳಿದಾಗ ಚಿನ್ನದ ಬಗ್ಗೆ ಬ್ಯಾಂಕ್‌ ಸಿಬ್ಬಂದಿ ಸರಿಯಾದ ಉತ್ತರ ನೀಡಿಲ್ಲ. ಕೊನೆಗೆ ಯಲಹಂಕ ಉಪ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Robbery; ದೇವರ ಹುಂಡಿ ಕಳ್ಳತನಕ್ಕೂ ಮುನ್ನ  ನಮಸ್ಕಾರ ಮಾಡಿಕೊಂಡ! ವಿಡಿಯೋ

click me!