ದಾರಿ ಮಧ್ಯೆ ಬೈಕ್ ಅಡ್ಡಗಟ್ಟಿ ಅಡಿಕೆ ವ್ಯಾಪಾರಿಯಿಂದ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಎರಡು ವರ್ಷಗಳ ಬಳಿಕ ಹತ್ತು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿತ್ರದುರ್ಗ (ಜ.2): ದಾರಿ ಮಧ್ಯೆ ಬೈಕ್ ಅಡ್ಡಗಟ್ಟಿ ಅಡಿಕೆ ವ್ಯಾಪಾರಿಯಿಂದ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಎರಡು ವರ್ಷಗಳ ಬಳಿಕ ಹತ್ತು ಆರೋಪಿಗಳನ್ನು ಬಂಧಿಸಿದ್ದಾರೆ.
ದಾವಣಗೆರೆ ಮೂಲದ ಶಶಿಕಿರಣ್, ಬೆಂಗಳೂರಿನ ನವೀನ್, ದಾವಣಗೆರೆಯ ಮಂಜುನಾಥ್, ಪ್ರತಾಪ್ ಗೌಡ, ಕಿರಣ್, ಚಿತ್ರದುರ್ಗದ ಷಫಿವುಲ್ಲಾ, ಸಮೀರ ಭಾಷಾ, ದಾವಣಗೆರೆಯ ಲಿಂಗರಾಜ್, ಬೆಂಗಳೂರಿನ ಹುಸೇನ್, ಶ್ರೀನಿವಾಸ್ ಬಂಧಿತರು.
undefined
ಬೆಂಗಳೂರು: ತನ್ನ ತಪ್ಪಿಲ್ಲದಿದ್ದರೂ ಕಾಲೇಜಿಂದ ಸಸ್ಪೆಂಡ್, ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ
ಡಿಸೆಂಬರ್ 3 2022ರಂದು ನಡೆದಿದ್ದ ರಾಬರಿ ಪ್ರಕರಣ. ಅಡಿಕೆ ವ್ಯಾಪಾರಿ ಇರ್ಫಾನುಲ್ಲಾ & ಜಾಕೀರ್ ಬೈಕ್ ಅಡ್ಡಗಟ್ಟಿ ಹಣ ದರೋಡೆ ಮಾಡಿದ್ದ ಆರೋಪಿಗಳು. ದರೋಡೆ ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನುಹತ್ತಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ಬಳಿ 63ಲಕ್ಷ 2500ಸಾವಿರ ರೂ.ನಗದು, ದರೋಡೆ ಹಣದಲ್ಲಿ ಖರೀದಿಸಿದ್ದ ಸುಮಾರು 9 ಲಕ್ಷ ರೂ. ಮೌಲ್ಯದ ಕಾರು, 1.35 ಲಕ್ಷ ಮೌಲ್ಯದ ಬೈಕ್, ಕೃತ್ಯಕ್ಕೆ ಬಳಸಿದ್ದ 1ಕಾರು, 3ಬೈಕ್ ವಶಕ್ಕೆ ಪಡೆಯಲಾಗಿದೆ.
ತಡರಾತ್ರಿ ಅಡುಗೆ ಮಾಡದ್ದಕ್ಕೆ ಪತ್ನಿ ಕೊಂದವನಿಗೆ ಜೀವಾವಧಿ..!