ಸಚಿನ್ ತೆಂಡುಲ್ಕರ್ (200) ನಂತರ ಅತಿಹೆಚ್ಚು ಟೆಸ್ಟ್‌ಗಳನ್ನಾಡಿದ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿರುವ ಆ್ಯಂಡರ್‌ಸನ್, 700 ವಿಕೆಟ್ ಮೈಲಿಗಲ್ಲು ಸಾಧಿಸಿದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಕೇವಲ 3ನೇ ಬೌಲರ್ ಎನ್ನುವ ದಾಖಲೆಯನ್ನೂ ಹೊಂದಿದ್ದಾರೆ.
ಲಂಡನ್: ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆ್ಯಂಡರ್‌ಸನ್‌ರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕು ಮುಕ್ತಾಯಗೊಂಡಿದೆ. ವಿಂಡೀಸ್ ವಿರುದ್ಧ ಶುಕ್ರವಾರ ಅಂತ್ಯಗೊಂಡ ಮೊದಲ ಟೆಸ್ಟ್, ಆ್ಯಂಡರ್‌ಸನ್‌ರ ಕೊನೆಯ ಟೆಸ್ಟ್ ಆಗಿತ್ತು. 188 ಟೆಸ್ಟ್‌ಗಳಲ್ಲಿ 704 ವಿಕೆಟ್‌ಗಳೊಂದಿಗೆ ಆ್ಯಂಡರ್‌ಸನ್ ತಮ್ಮ ಟೆಸ್ಟ್ ವೃತ್ತಿಬದುಕನ್ನು ಮುಕ್ತಾಯಗೊಳಿಸಿದ್ದಾರೆ. 2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜಿಮ್ಮಿ, ಬರೋಬ್ಬರಿ 21 ವರ್ಷಗಳ ಕಾಲ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ.
ಸಚಿನ್ ತೆಂಡುಲ್ಕರ್ (200) ನಂತರ ಅತಿಹೆಚ್ಚು ಟೆಸ್ಟ್‌ಗಳನ್ನಾಡಿದ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿರುವ ಆ್ಯಂಡರ್‌ಸನ್, 700 ವಿಕೆಟ್ ಮೈಲಿಗಲ್ಲು ಸಾಧಿಸಿದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಕೇವಲ 3ನೇ ಬೌಲರ್ ಎನ್ನುವ ದಾಖಲೆಯನ್ನೂ ಹೊಂದಿದ್ದಾರೆ.
ಇದೇ ವೇಳೆ, ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಆ್ಯಂಡರ್‌ಸನ್ ಟೆಸ್ಟ್‌ನಲ್ಲಿ 40000 ಎಸೆತಗಳನ್ನೂ ಪೂರೈಸಿದರು. ಈ ಮೈಲಿಗಲ್ಲು ತಲುಪಿದ ಮೊದಲ ವೇಗಿ ಹಾಗೂ ಒಟ್ಟಾರೆ ಕೇವಲ 4ನೇ ಬೌಲರ್ ಎನ್ನುವ ಖ್ಯಾತಿಯನ್ನೂ ಗಳಿಸಿದರು.
ಸತತ 6ನೇ ಬಾರಿ ವಿಂಬಲ್ಡನ್ ಫೈನಲ್‌ಗೆ ನೋವಾಕ್ ಜೋಕೋವಿಚ್!
ಆ್ಯಂಡರ್‌ಸನ್ 194 ಏಕದಿನಗಳಲ್ಲಿ 269, 19 ಅಂ.ರಾ.ಟಿ20 ಪಂದ್ಯಗಳಲ್ಲಿ 18 ವಿಕೆಟ್ ಕಿತ್ತಿದ್ದಾರೆ. ಅಂ.ರಾ.ಕ್ರಿಕೆಟ್‌ನಲ್ಲಿ ಒಟ್ಟು 991 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. 42 ವರ್ಷದ ಜಿಮ್ಮಿ ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಇನ್ನಷ್ಟು ದಿನ ಮುಂದುವರಿಯುವ ನಿರೀಕ್ಷೆ ಇದೆ.
ಮೊದಲ ಟೆಸ್ಟ್: ಇಂಗ್ಲೆಂಡ್‌ಗೆ ಇನ್ನಿಂಗ್ಸ್ & 114 ರನ್ ಜಯ
ಲಂಡನ್: ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 114 ರನ್‌ಗಳ ಗೆಲುವು ಸಾಧಿಸಿ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸಲ್ಲಿ ವಿಂಡೀಸನ್ನು 121 ರನ್‌ಗೆ ಆಲೌಟ್ ಮಾಡಿದ್ದ ಇಂಗ್ಲೆಂಡ್, ಬಳಿಕ 371 ರನ್ ಕಲೆಹಾಕಿ 250 ರನ್ ಮುನ್ನಡೆ ಸಾಧಿಸಿತ್ತು. 2ನೇ ಇನ್ನಿಂಗ್ಸಲ್ಲಿ ವಿಂಡೀಸ್ 136 ರನ್‌ಗೆ ಆಲೌಟ್ ಆಯಿತು. 3ನೇ ದಿನದಾಟದ ಮೊದಲ ಅವಧಿಯಲ್ಲೇ ಪಂದ್ಯ ಮುಕ್ತಾಯಗೊಂಡಿತು. ಚೊಚ್ಚಲ ಪಂದ್ಯವನ್ನಾಡಿದ ವೇಗಿ ಗಸ್ ಆ್ಯಟ್ಕಿನ್ಸನ್ ಒಟ್ಟು 12 ವಿಕೆಟ್ ಕಿತ್ತರು.
ಭಾರತ ತೊರೆದು ಈ ದೇಶದಲ್ಲಿ ಶಾಶ್ವತವಾಗಿ ನೆಲೆಯೂರಲು ತೀರ್ಮಾನಿಸಿದ್ರಾ ವಿರಾಟ್ ಕೊಹ್ಲಿ..? ಇಲ್ಲಿದೆ ಹೊಸ ಅಪ್‌ಡೇಟ್
ಆಯ್ಕೆಗಾರ ಹುದ್ದೆಯಿಂದ ರಿಯಾಜ್, ರಜಾಕ್ ವಜಾ
ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ವಾಹಬ್ ರಿಯಾಜ್ ಹಾಗೂ ಅಬ್ದುಲ್ ರಜಾಕ್‌ರನ್ನು ತನ್ನ ರಾಷ್ಟ್ರೀಯ ತಂಡದ ಆಯ್ಕೆಗಾರರ ಹುದ್ದೆಯಿಂದ ವಜಾಗೊಳಿಸಿದೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ತೋರಿದ್ದಕ್ಕೆ ಈ ಇಬ್ಬರ ತಲೆದಂಡವಾಗಿದೆ. 4 ವರ್ಷಗಳಲ್ಲಿ 6 ಆಯ್ಕೆಗಾರರನ್ನು ಬದಲಿಸಿದರೂ, ತಂಡ ಸುಧಾರಿಸುತ್ತಿಲ್ಲ ಎಂದು ಪಿಸಿಬಿ ಆಕ್ರೋಶ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
