ಪಾಕಿಸ್ತಾನ ವಿರುದ್ಧ ಜಿಂಬಾಬ್ವೆಗೆ ಸೂಪರ್‌ ಗೆಲುವು

By Kannadaprabha NewsFirst Published Nov 4, 2020, 1:35 PM IST
Highlights

ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ಸೂಪರ್ ಓವರ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ರಾವಲ್ಪಿಂಡಿ(ನ.04): ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ 3ನೇ ಹಾಗೂ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ಸೂಪರ್‌ ಓವರ್‌ ಗೆಲುವು ಪಡೆದಿದೆ. 

ಸೂಪರ್‌ ಓವರಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡ ಜಿಂಬಾಬ್ವೆ ಬೌಲರ್ ಮುಜರಾಬಾನಿ 2 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ ಜಿಂಬಾಬ್ವೆ ವಿಕೆಟ್‌ ನಷ್ಟವಿಲ್ಲದೇ 5 ರನ್‌ಗಳಿಸಿ ಜಯದ ನಗೆ ಬೀರಿತು. ಆದರೂ ಪಾಕಿಸ್ತಾನ 2-1ರಲ್ಲಿ ಸರಣಿ ಜಯಿಸಿದೆ. 

ಅಚ್ಚರಿಯಾದ್ರೂ ಸತ್ಯ; ಬುಮ್ರಾಗಿಂತ ಡೇಂಜರ್ ಬೌಲರ್ ಸಂದೀಪ್ ಶರ್ಮಾ..!

Sean Williams smashes his fourth ODI century!

He's bettered his previous best against Pakistan, which was the 75 he hit in the second ODI 🌟 pic.twitter.com/4dTW3Saxdd

— ICC (@ICC)

CONGRATULATIONS ZIMBABWE! 🎉

They've seen off Pakistan in the Super Over to claim their first points of the Super League! pic.twitter.com/WQg16ktW4H

— ICC (@ICC)

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ ಶಾನ್‌ ವಿಲಿಯಮ್ಸ್‌ (118*) ಶತಕದಿಂದ 6 ವಿಕೆಟ್‌ಗೆ 278 ರನ್‌ಗಳಿಸಿತು. ಪಾಕ್‌ ಬಾಬರ್‌ ಅಜಾಂ (125) ಶತಕದ ಹೊರತಾಗಿಯೂ 9 ವಿಕೆಟ್‌ಗೆ 278 ರನ್‌ಗಳಿಸಿದ್ದರಿಂದ ಪಂದ್ಯ ಟೈ ಆಯಿತು.

ಸ್ಕೋರ್‌:

ಜಿಂಬಾಬ್ವೆ 278/6

ಪಾಕಿಸ್ತಾನ 278/9

click me!