
ನವದೆಹಲಿ(ನ.03): ಭಾರತ ಕ್ರಿಕೆಟ್ ತಂಡಗಳ ನೂತನ ಕಿಟ್ ಪ್ರಾಯೋಜಕರಾಗಿ ಬೆಂಗಳೂರು ಮೂಲದ ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ ಬಿಸಿಸಿಐನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
3 ವರ್ಷಗಳ ಕಾಲ ಪ್ರಾಯೋಜಕತ್ವ ನೀಡಲಿರುವ ಎಂಪಿಎಲ್ ಸ್ಪೋರ್ಟ್ಸ್ ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ 65 ಲಕ್ಷ ರುಪಾಯಿ ಪಾವತಿಸಲಿದೆ. ಅಂದರೆ 3 ವರ್ಷಗಳಿಗೆ ಬಿಸಿಸಿಐ 120 ಕೋಟಿ ರುಪಾಯಿ ಸಂಪಾದಿಸಲಿದೆ. ಜೊತೆಗೆ ತಾನು ಮಾರಾಟ ಮಾಡುವ ಪ್ರತಿ ಜೆರ್ಸಿ ಇಲ್ಲವೇ ಇನ್ನಿತರ ಮರ್ಚೆಂಡೈಸ್‌ನ ಶೇ.10ರಷ್ಟು ಮೊತ್ತವನ್ನು ಬಿಸಿಸಿಐಗೆ ನೀಡಲು ಸಂಸ್ಥೆ ಒಪ್ಪಿಗೆ ನೀಡಿದೆ.
ಎಂಪಿಎಲ್ ಸ್ಪೋರ್ಟ್ಸ್ ಫ್ಯಾಂಟಸಿ ಗೇಮ್‌ಗಳ ಸಂಸ್ಥೆಯಾಗಿದ್ದು, ಹೊಸದಾಗಿ ಉಡುಪುಗಳ ಉದ್ಯಮವನ್ನು ಆರಂಭಿಸುತ್ತಿದೆ. ಆಸ್ಪ್ರೇಲಿಯಾ ಪ್ರವಾಸದಲ್ಲಿ ಭಾರತ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.
ಕಪಿಲ್ ದೇವ್ ಆರೋಗ್ಯ ಕುರಿತು ಸುಳ್ಳು ಹಬ್ಬಿಸಬೇಡಿ; ಮಾಜಿ ಕ್ರಿಕೆಟಿಗನಿಂದ ಮನವಿ!
ಹಿಂದಿನ ಒಪ್ಪಂದಕ್ಕಿಂತ ಕಡಿಮೆ: ಈ ಹಿಂದೆ 5 ವರ್ಷಗಳ ಒಪ್ಪಂದ ಹೊಂದಿದ್ದ ಜಾಗತಿಕ ಮಟ್ಟದ ಸಂಸ್ಥೆ ನೈಕಿ, ಪ್ರತಿ ಪಂದ್ಯಕ್ಕೆ 88 ಲಕ್ಷ ರುಪಾಯಿ ಪಾವತಿಸುತ್ತಿತ್ತು. ಅಂದರೆ ಒಟ್ಟು 370 ಕೋಟಿ ರುಪಾಯಿ ಮೌಲ್ಯದ ಒಪ್ಪಂದ ಅದಾಗಿತ್ತು. ಜೊತೆಗೆ 30 ಕೋಟಿ ರುಪಾಯಿ ರಾಯಲ್ಟಿಯನ್ನೂ ಪಾವತಿಸಿತ್ತು. ಈ ವರ್ಷ ಸೆಪ್ಟೆಂಬರ್‌ಗೆ ಒಪ್ಪಂದ ಮುಕ್ತಾಯಗೊಂಡಿತ್ತು. ಆ ಬಳಿಕ ಬಿಸಿಸಿಐ ಹೊಸದಾಗಿ ಟೆಂಡರ್ ಆಹ್ವಾನಿಸಿತ್ತಾದರೂ, ಕೊರೋನಾ ಆರ್ಥಿಕ ಸಂಕಷ್ಟದಿಂದಾಗಿ ಯಾವ ಸಂಸ್ಥೆಯೂ ಬಿಡ್ ಸಲ್ಲಿಸಿರಲಿಲ್ಲ. ಹೀಗಾಗಿ, ಎಂಪಿಎಲ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಬಿಸಿಸಿಐ ಸಹಿ ಹಾಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.