'ನಿಮ್ಮ ಜೋಡಿ ಪರ್ಫೆಕ್ಟ್‌ ಅಲ್ಲ..' ಅನ್ನೋ ಟ್ರೋಲ್‌ಗೆ ಚಾಹಲ್‌ ಪತ್ನಿ ಧನಶ್ರೀ ವರ್ಮಾ ಉತ್ತರ ನೋಡಿದ್ರಾ?

By Santosh Naik  |  First Published Oct 2, 2023, 8:56 PM IST

ಟೀಮ್‌ ಇಂಡಿಯಾ ಆಟಗಾರ ಯಜುವೇಂದ್ರ ಚಾಹಲ್‌ ಹಾಗೂ ಧನಶ್ರೀ ವರ್ಮಾ ಜೋಡಿಯ ಬಗ್ಗೆ ಸಾಕಷ್ಟು ಒಪೀನಿಯನ್‌ಗಳಿವೆ. ಹೆಚ್ಚಿನವರು ಹೇಳೋದು ಇವರಿಬ್ಬರದು ಪರ್ಫೆಕ್ಟ್‌ ಜೋಡಿಯಲ್ಲ ಅನ್ನೋದು. ಈ ಮಾತಿಗೆ ಸ್ವತಃ ಧನಶ್ರೀ ವರ್ಮಾ ಉತ್ತರ ನೀಡಿದ್ದಾರೆ.
 


ಬೆಂಗಳೂರು (ಅ.2): ಟೀಂ ಇಂಡಿಯಾದ ಕೆಲವೇ ಕೆಲವು ಫನ್‌ & ಎನರ್ಜಿಟಿಕ್‌ ಜೋಡಿಗಳಲ್ಲಿ ಯಜುವೇಂದ್ರ ಚಾಹಲ್‌ ಹಾಗೂ ಧನಶ್ರೀ ವರ್ಮಾ ಜೋಡಿ ಕೂಡ ಒಂದು. ಡಾನ್ಸರ್‌ ಆಗಿದ್ದ ಧನಶ್ರೀ ವರ್ಮಾ ಹಾಗೂ ಯಜುವೇಂದ್ರ ಚಾಹಲ್‌ ನಡುವೆ ಪ್ರೀತಿಯಾಗಿದ್ದೇ ರೋಚಕ. ಈ ಬಗ್ಗೆ ಸಾಕಷ್ಟು ವೇದಿಕೆಯಲ್ಲಿ ಅವರು ಮಾತನಾಡಿದ್ದಾರೆ. ಸಾಮಾನ್ಯವಾಗಿ ಇವರಿಬ್ಬರ ಜೋಡಿಯನ್ನು ನೋಡಿದವರು ಇದು ಪರ್ಫೆಕ್ಟ್‌ ಜೋಡಿಯಲ್ಲ ಎನ್ನುವ ಒಪೀನಿಯನ್‌ ಕೂಡ ನೀಡುತ್ತಾರೆ. ಯಾಕೆಂದರೆ, ಯಜುವೇಂದ್ರ ಸಣ್ಣಗಿನ ವ್ಯಕ್ತಿ.  ಧನಶ್ರೀ ವರ್ಮಾ ಲುಕ್‌ ಚೆನ್ನಾಗಿದೆ. ಹೀರೋಯಿನ್‌ ರೀತಿ ಇದ್ದಾರೆ ಎನ್ನುವುದು ಹೆಚ್ಚಿನವರ ಅಭಿಪ್ರಾಯ. ಈ ಜೋಡಿ ಹಾಕುವ ಪ್ರತಿ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಇಂಥದ್ದೊಂದು ಕಾಮೆಂಟ್‌ ಇದ್ದೇ ಇರುತ್ತದೆ. ಆದರೆ,ಈ ಜೋಡಿ ಮಾತ್ರ ಇದಕ್ಕೆ ಎಂದಿಗೂ ಪ್ರತಿಕ್ರಿಯಿಸಿರಲಿಲ್ಲ. ಆದರೆ, ಕೆಲ ತಿಂಗಳ ಹಿಂದೆ ಪ್ರಖ್ಯಾತ ಯೂಟ್ಯೂಬರ್‌ ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಈ ಜೋಡಿಗೆ ಇದೇ ಪ್ರಶ್ನೆ ಕೇಳಲಾಯಿತು. ಇದಕ್ಕೆ ಸ್ವತಃ ಧನಶ್ರೀ ವರ್ಮಾ ನೇರವಾಗಿ ಉತ್ತರ ನೀಡಿದ್ದಾರೆ.

ನಿಮ್ಮಿಬ್ಬರ ಜೋಡಿಯ ಬಗ್ಗೆ ದೇಶದ ಸಾಕಷ್ಟು ಹುಡುಗರಿಗೆ ಹೊಟ್ಟೆಕಿಚ್ಚಿದೆ. ಇದು ಸತ್ಯ. ನಾನು ಫ್ಯಾನ್‌ ಒಪೀನಿಯನ್‌ಅನ್ನೇ ಇಲ್ಲಿ ನಿಮಗೆ ಕೇಳಿದ್ದೇನೆ ಎಂದು ರಣವೀರ್‌ ಹೇಳಿದಾಗ, ಯಾಕೆ ಎಂದು ಧನಶ್ರಿ ಪ್ರಶ್ನೆ ಮಾಡಿದ್ದಾರೆ. ಬಳಿಕ ಉತ್ತರ ನೀಡುವ ಧನಶ್ರೀ, 'ಜೀವನದಲ್ಲಿ ಯಾವುದೂ ಕೂಡ ಪರ್ಫೆಕ್ಟ್‌ ಆಗಿ ಇರೋದಿಲ್ಲ. ಆದರೆ, ಎಲ್ಲವನ್ನೂ ಜೊತೆಗೆ ತೆಗೆದುಕೊಂಡು, ಇಬ್ಬರನ್ನೂ ಒಂದಾಗಿಸುವ ಒಂದು ಅಂಶ ಖಂಡಿತಾ ಇರುತ್ತದೆ. ಅದು ಆರೈಕೆ, ಒಬ್ಬರಿಗಿಬ್ಬರು ತೋರುವ ಕೇರ್‌. ಅದು ನಮ್ಮಿಬ್ಬರ ನಡುವೆ ಖಂಡಿತಾ ಇದೆ' ಎಂದು ನೇರವಾಗಿ ಹೇಳುತ್ತಾರೆ.

ಇದೇ ವೇಳೆ ಯಜುವೇಂದ್ರ ಚಾಹಲ್‌, ಧನಶ್ರಿ ಅವರನ್ನು ಮೊದಲು ಭೇಟಿಯಾಗಿದ್ದು ಹೇಗೆ ಎನ್ನುವುದನ್ನು ತಿಳಿಸಿದ್ದಾರೆ. 'ಬಹುಶಃ ಅದು ಲಾಕ್‌ಡೌನ್‌ ಸಮಯ. ನನಗೆ ಮಾಡೋಕೆ ಕೆಲಸವೇ ಇದ್ದಿರಲಿಲ್ಲ. ನನಗೆ ಆರಂಭದಿಂದಲೂ ಇದ್ದ ಆಸೆ ಏನೆಂದರೆ, ಡಾನ್ಸ್‌ ಕಲಿಯಬೇಕು ಅನ್ನೋದು. ಒಂದೆರಡು ಸ್ಟೆಪ್‌ ಗೊತ್ತಿದ್ದರೆ ಒಳ್ಳೆಯದು ಎನ್ನುವುದು ನನ್ನ ಆಸೆಯಾಗಿತ್ತು. ಡಾನ್ಸ್‌ ಗೊತ್ತಿಲ್ಲದೆ ಡಾನ್ಸ್‌ ಮಾಡೋಕೆ ಹೋಗೋದಕ್ಕಿಂತ ಕಲಿತರೆ ಒಳ್ಳೆಯದು ಎನ್ನುವ ಆಸೆ ಇತ್ತು. ಅದಕ್ಕಾಗಿ ನಾನು ಇನ್ಸ್‌ಟಾಗ್ರಾಮ್‌ನಲ್ಲಿಯೇ ಧನಶ್ರಿಗೆ ಡಿಎಂ ಮಾಡಿದ್ದೆ. ಟಿಕ್‌ ಟಾಕ್‌ ಹಾಗೂ ರೀಲ್ಸ್‌ನಲ್ಲಿ ಧನಶ್ರೀ ಅವರ ಡಾನ್ಸ್‌ಅನ್ನು ಅದಾಗಲೇ ನೋಡಿದ್ದೆ. ಅದಲ್ಲದೆ, ನಾವಿಬ್ಬರೂ ಸಾಕಷ್ಟು ಕಾಮನ್‌ ಫ್ರೆಂಡ್‌ಗಳನ್ನು ಹೊಂದಿದ್ದೆವು. ಇದೇ ಕಾರಣಕ್ಕಾಗಿ ನಾನು ಧನಶ್ರೀಗೆ ಮೆಸೇಜ್‌ ಮಾಡಿದ್ದೆ' ಎಂದು ತಿಳಿಸಿದ್ದಾರೆ.

Tap to resize

Latest Videos

 

ಮಿಯಾಮಿಯಲ್ಲಿ ಚಾಹಲ್‌ ಪತ್ನಿಯ 'ಹಾಟ್‌' ಫೋಟೋ, ಫ್ಯಾನ್ಸ್‌ ಬಗ್ಗೆ ಸ್ಪೆಷಲ್‌ ಕಾಮೆಂಟ್‌!

'ನೀವು ಡಾನ್ಸ್‌ ಕ್ಲಾಸ್‌ಗಳನ್ನು ತೆಗೆದುಕೊಳ್ಳುತ್ತೀರಾ? ಎಂದು ನೇರವಾಗಿ ಮೆಸೇಜ್‌ ಕಳಿಸಿದ್ದೆ. ಲಾಕ್‌ಡೌನ್‌ನಲ್ಲಿ ನನಗೆ ಕೆಲಸ ಇದ್ದಿರಲಿಲ್ಲ. ಪಬ್‌ಜೀ ಆಡೋದು, ಕುಟುಂಬದವರ ಜೊತೆ ಟಿಕ್‌ಟಾಕ್‌ ಮಾಡುತ್ತಿದ್ದೆ. ಇದಾದ ಬಳಿಕ ಹೊಸದನ್ನು ಕಲಿಸಬೇಕು ಅನಿಸಿದಾಗ ಡಾನ್ಸ್‌ ತೀರ್ಮಾನ ಮಾಡಿದ್ದೆ. ಮೆಸೇಜ್‌ ಮಾಡಿದ ಬಳಿಕ ಅಲ್ಲಿಂದ, ಆನ್‌ಲೈನ್‌ ಕ್ಲಾಸ್‌ಗಳು ಸ್ಟಾರ್ಟ್‌ ಆಗಿದ್ದವು. ಮೊದಲ ಎರಡು ತಿಂಗಳು ನಾವಿಬ್ಬರೂ ಏನೂ ಮಾತನಾಡಿಯೇ ಇದ್ದಿರಲಿಲ್ಲ. ಈ ಸಮಯದಲ್ಲಿ ಮಾತನಾಡಿದರೂ ಅದು ಡಾನ್ಸ್‌ ಬಗ್ಗೆ ಮಾತ್ರವೇ ಆಗಿತ್ತು. ಫ್ಲರ್ಟ್‌ ಮಾಡೋಕೆ ಹೋಗಿರಲಿಲ್ಲ' ಎಂದು ತಮ್ಮ ಪ್ರೀತಿಯ ಆರಂಭಿಕ ದಿನಗಳನ್ನು ಹಂಚಿಕೊಂಡಿದ್ದಾರೆ.

ಸೂಪರ್‌ ಹಿಟ್‌ ಹಾಡಿಗೆ ಚಾಹಲ್ ಪತ್ನಿಯ ಭರ್ಜರಿ ಡಾನ್ಸ್, ವೈರಲ್‌ ಆದ ವಿಡಿಯೋ!

click me!