ಆಸ್ಟ್ರೇಲಿಯಾ ಕಾಡ್ಗಿಚ್ಚು ಪರಿಹಾರ ಪಂದ್ಯ; ಕಣಕ್ಕಿಳಿಯುತ್ತಿದ್ದಾರೆ ಯುವರಾಜ್, ವಾಸಿಂ ಅಕ್ರಂ!

By Suvarna News  |  First Published Jan 26, 2020, 7:39 PM IST

ಆಸ್ಟ್ರೇಲಿಯಾ ಇದುವರೆಗೆ ಕಂಡು  ಕೇಳರಿಯದ ಕಾಡ್ಗಿಚ್ಚಿಗೆ ನಲುಗಿ ಹೋಗಿದೆ. ಅಪಾರ ಪ್ರಾಣಿಗಳು, ಸಸ್ಯ ಸಂಕುಲ, ಮಾನವರು ಈ ಕಾಡ್ಗಿಚ್ಚಿಗೆ ಬಲಿಯಾಗಿದ್ದಾರೆ. ಇದೀಗ ಕಾಡ್ಗಿಚ್ಚು ಪರಿಹಾರಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿದೆ. ಈ ಟೂರ್ನಿಯಲ್ಲಿ ಭಾರತದ ಯುವರಾಜ್ ಸಿಂಹ್ ಹಾಗೂ ಪಾಕಿಸ್ತಾನದ ವಾಸಿಂ ಅಕ್ರಂ ಕಣಕ್ಕಿಳಿಯುತ್ತಿದ್ದಾರೆ.
 


ಸಿಡ್ನಿ(ಜ.26): ಆಸ್ಟ್ರೇಲಿಯಾದ ಕಾಡ್ಗಿಚ್ಚು ದೃಶ್ಯ ಎಂತವರನ್ನೂ ಬೆಚ್ಚಿ ಬೀಳಿಸುತ್ತದೆ. ಈ ಕಾಡ್ಗಿಚ್ಚಿನಲ್ಲಿ ನಲುಗಿದ ಪ್ರಾಣಿಗಳ ದೃಶ್ಯವಂತೂ ಕಣ್ಣೀರು ತರಿಸುತ್ತದೆ. ಇದೀಗ ಆಸ್ಟ್ರೇಲಿಯಾ ಕಾಡ್ಗಿಚ್ಚಿನಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕಾಡ್ಗಿಚ್ಚಿನಿಂದ ನಷ್ಟ ತುಂಬಿಸಲು ಪರಿಹಾರ ಪಂದ್ಯ ಆಯೋಜಿಸಲಾಗಿದೆ. ಬುಶ್‌ಫೈರ್ ಕ್ರಿಕೆಟ್ ಬ್ಯಾಶ್ ಎಂದು ನಾಮಕರಣ ಮಾಡಲಾಗಿದೆ. 

ಇದನ್ನೂ ಓದಿ: ಶೇನ್ ವಾರ್ನ್‌ ‘ಬ್ಯಾಗಿ ಗ್ರೀನ್‌’ ಕ್ಯಾಪ್‌ಗೆ ಸಿಕ್ಕಾಪಟ್ಟೆ ಬೇಡಿಕೆ!.

Latest Videos

undefined

ಬುಶ್‌ಫೈರ್ ಕ್ರಿಕೆಟ್ ಬ್ಯಾಶ್ ಚಾರಿಟಿ ಪಂದ್ಯದಲ್ಲಿ ಆಡಲು ತಾನು ಲಭ್ಯವಿರುವುದಾಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕ್ರಿಕೆಟ್ ಆಸ್ಟ್ರೇಲಿಯಾಗೆ ಸ್ಪಷ್ಟಪಡಿಸಿದ್ದಾರೆ. ಯುವಿಯನ್ನು ಚಾರಿಟಿ ಪಂದ್ಯಕ್ಕೆ ಸೇರಿಸಿಕೊಳ್ಳಲಾಗಿದೆ. ಇತ್ತ ಪಾಕಿಸ್ತಾನ ಮಾಜಿ ವೇಗಿ ವಾಸಿಂ ಅಕ್ರಂ ಕೂಡ ಈ ಚಾರಿಟಿ ಪಂದ್ಯಕ್ಕೆ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಹೀಗಿದ್ದ ಆಸಿಸ್ ಹೀಗಾಯ್ತು: ಕಾಡ್ಗಿಚ್ಚಿಗೆ ಬದುಕೇ ಸರ್ವನಾಶವಾಯ್ತು!...

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ವಿಂಡೀಸ್ ದಿಗ್ಗಜ ಕರ್ಟ್ನಿ ವಾಲ್ಶ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ರಿಕಿ ಪಾಂಟಿಂಗ್, ಶೇನ್ ವಾರ್ನ್ ಕೂಡ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.. ಇನ್ನು  ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಜಸ್ಟಿನ್ ಲ್ಯಾಂಗರ್, ಮ್ಯಾಥ್ಯೂ ಹೇಡನ್ ಮತ್ತೆ ಜೊತೆಯಾಗಿ ಕಣಕ್ಕಿಳಿಯಲಿದ್ದಾರೆ.

ಆ್ಯಂಡ್ರೂ ಸೈಮಂಡ್ಸ್, ಬ್ರ್ಯಾಡ್ ಹ್ಯಾಡಿನ್, ಮೈಕ್ ಹಸ್ಸಿ,ಆ್ಯಡಂ ಗಿಲ್‌ಕ್ರಿಸ್ಟ್, ಬ್ರೆಟ್ ಲಿ, ಮೈಕಲ್ ಕ್ಲಾರ್ಕ ಕೂಡ ತಂಡ ಸೇರಿಕೊಂಡಿದ್ದಾರೆ.  ಸ್ಟೀವ್ ವ್ಹಾ ಹಾಗೂ ಮೆಲ್ ಜೊನ್ಸ್ ಈ ಟೂರ್ನಿಯಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದಾರೆ.  ಆಸೀಸ್ ಕ್ರಿಕೆಟಿಗರಾದ ಗ್ಲೆನ್ ಮ್ಯಾಕ್ಸ್‌ವವೆಲ್, ಕ್ರಿಸ್ ಲಿನ್ ಹಾಗೂ ಡಾರ್ಕಿ ಶಾರ್ಟ್ ಈ ಪಂದ್ಯದಲ್ಲಿ ಸಿಡಿಸುವ ಪ್ರತಿ ಸಿಕ್ಸರ್‌ಗೆ 250 ಆಸ್ಟ್ರೇಲಿಯನ್ ಡಾಲರ್ ನೀಡಲಿದ್ದಾರೆ. ಈ ಹಣ ಕಾಡ್ಗಿಚ್ಚು ಪರಿಹಾರಕ್ಕೆ ನೀಡಲಾಗುತ್ತದೆ. ಫೆಬ್ರವರಿ 8 ರಂದು  ಪಂದ್ಯ ನಡೆಯಲಿದೆ. 
 

click me!