
ಬೆಂಗಳೂರು (ಜೂ.12) ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಜೊತೆಯಾಗಿ ಕಾಣಿಸಿಕೊಂಡ ಹಲವು ವಿಡಿಯೋಗಳು ವೈರಲ್ ಆಗಿದೆ. ಇಷ್ಟೇ ಅಲ್ಲ ಕೊಹ್ಲಿ ಹಾಗೂ ಅನುಷ್ಕಾ (Virat Kohli Anushka Sharma) ಪ್ರತಿಕ್ರಿಯೆಗಳು ಕೂಡ ಭಾರಿ ಸದ್ದು ಮಾಡಿದೆ. ಇದೀಗ ಕೊಹ್ಲಿ ಹಾಗೂ ಅನುಷ್ಕಾ ಜೊತೆಯಾಗಿ ಪಾಪಾರಾಜಿಗಳಿಗೆ ಫೋಟೋ ಫೋಸ್ ನೀಡುತ್ತಿದ್ದಂತೆ ಹೇಳಿದ ಮಾತೊಂದು ಮತ್ತೆ ವೈರಲ್(Viral Video) ಆಗಿದೆ. ಕೊಹ್ಲಿಯ ಒನ್8 ರೆಸ್ಟೋರೆಂಟ್ ಮುಂಭಾಗ ದಂಪತಿಗಳು ಫೋಟೋಗೆ ಫೋಸ್ ನೀಡಿದ್ದರು. ಈ ವೇಳೆ ಪಾಪಾರಾಜಿಗಳ ಮಾತು ಕೇಳಿಸಿಕೊಂಡು ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ. ನೀವು ವಿರಾಟ್ ಮೇಡಂ (Virat Madam) ಅಂತಾನೂ ಹೇಳಿಬಿಡಿ ಎಂದು ಕೊಹ್ಲಿ ಹೇಳಿದ್ದಾರೆ.
ಒನ್8 ರೆಸ್ಟೋರೆಂಟ್ ಮುಂಭಾಗದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಬರುತ್ತಿದ್ದಂತೆ ಫೋಟೋ, ವಿಡಿಯೋ ಕ್ಲಿಕ್ಕಿಸಲು ಪಾಪರಾಜಿಗಳು ಮುತ್ತಿಕೊಂಡಿದ್ದರು. ಪಾಪಾರಾಜಿಗಳಿಗೆ ದಂಪತಿಗಳು ಫೋಸ್ ನೀಡಿದ್ದಾರೆ. ಇತ್ತ ನೋಡಿ, ಕೊಹ್ಲಿ, ಅನುಷ್ಕಾ ಇತ್ತ ನೋಡಿ ಎಂದು ಒಬ್ಬೊಬ್ಬ ಪಾಪರಾಜಿಗಳು ಕೂಗುತ್ತಿದ್ದರು. ಇದರಂತೆ ಕೊಹ್ಲಿ ಹಾಗೂ ಅನುಷ್ಕಾ ಒಂದೊಂದೆ ಕ್ಯಾಮೆರಾ ನೋಡುತ್ತಾ ಫೋಸ್ ನೀಡುತ್ತಿದ್ದರು.
ಇದೇ ವೇಳೆ ಒರ್ವ ಕೊಹ್ಲಿ ಸರ್ ಇಲ್ಲಿ ನೋಡಿ ಎಂದರೆ, ಮತ್ತೊಬ್ಬರು ಅನುಷ್ಕಾ ಮೇಡಂ ಈ ಕ್ಯಾಮೆರಾ ನೋಡಿ ಎಂದು ಕೂಗುತ್ತಿದ್ದರು. ಇದರ ನಡುವೆ ಮತ್ತೊಬ್ಬ ಹೇಳೋ ಭರದಲ್ಲಿ ಅನುಷ್ಕಾ ಸರ್ ಈ ಕ್ಯಾಮೆರಾ ನೋಡಿ ಎಂದಿದ್ದಾರೆ. ತಕ್ಷಣವೇ ಸರಿ ಮಾಡಿಕೊಂಡು ಅನುಷ್ಕಾ ಮೇಡಂ ಇಲ್ಲಿ ನೋಡಿ ಎಂದು ಹೇಳಿದ್ದಾನೆ. ಪಾಪರಾಜಿ ತಪ್ಪು ಸರಿ ಮಾಡಿಕೊಂಡು ಮತ್ತೊಮ್ಮೆ ಕೂಗುವಷ್ಟರಲ್ಲೇ ವಿರಾಟ್ ಕೊಹ್ಲಿ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ.
A fan accidentally said "Anushka sir look here" while taking pictures of Kohli & Anushka.
And then Kohli instantly replied; "Virat maam bhi bolte." 🤣😭 pic.twitter.com/4skO9C2eTb— 𝚅𝚊𝚛𝚞𝚗¹⁸ (@varunx18) June 12, 2026
ಅನುಷ್ಕಾ ಸರ್ ಎಂದ ಪಾಪರಾಜಿಗೆ ವಿರಾಟ್ ಕೊಹ್ಲಿ, ನೀವು, ವಿರಾಟ್ ಮೇಡಂ ಅಂತಾನೂ ಕೂಗಿ ಬಿಡಿ ಎಂದು ಪ್ರತಿಕ್ರಿಯಿಸಿದ್ದಾರೆ.ತಮಾಷೆಯಾಗಿ ವಿರಾಟ್ ಕೊಹ್ಲಿ ಈ ಮಾತು ಹೇಳಿದ್ದಾರೆ. ಬಳಿಕ ಇಬ್ಬರು ರೆಸ್ಟೋರೆಂಟ್ ಒಳಗೆ ಹೊರಟಿದ್ದಾರೆ. ಇತ್ತ ಫೋಟೋ ತೆಗೆಯುತ್ತಿದ್ದ ಪಾಪಾರಾಜಿಗಳಿಗೆ ಅಚ್ಚರಿ ಜೊತೆ ನಗು ಬಂದಿತ್ತು. ಈ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಎಲ್ಲೆಡೆ ಈ ವಿಡಿಯೋ ಹರಿದಾಡುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.