Wonder Kid ವೈಭವ್ ಸೂರ್ಯವಂಶಿ ಬಗ್ಗೆ ಕನ್ನಡದಲ್ಲೇ ಗುಣಗಾನ ಮಾಡಿದ ರಾಹುಲ್ ದ್ರಾವಿಡ್! ವಿಡಿಯೋ ಇಲ್ಲಿದೆ ನೋಡಿ

Published : Jun 12, 2026, 05:22 PM IST
Rahul Dravid

ಸಾರಾಂಶ

ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, 15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು 'ಜನರೇಷನಲ್ ಟ್ಯಾಲೆಂಟ್' ಎಂದು ಬಣ್ಣಿಸಿದ್ದಾರೆ. ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದು ಅದ್ಭುತ ಪ್ರದರ್ಶನ ನೀಡಿದ ವೈಭವ್, ಇದೀಗ ಭಾರತದ ಹಿರಿಯರ ಕ್ರಿಕೆಟ್ ತಂಡಕ್ಕೂ ಆಯ್ಕೆಯಾಗಿದ್ದಾರೆ.

Rahul Dravid on Vaibhav Suryavanshi: ತನ್ನ ಅದ್ಭುತ ಬ್ಯಾಟಿಂಗ್ ಮೂಲಕವೇ ಟೀಂ ಇಂಡಿಯಾ ಬಾಗಿಲು ಬಡಿಯುತ್ತಿರುವ ವೈಭವ್ ಸೂರ್ಯವಂಶಿ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಭವ್ ಸೂರ್ಯವಂಶಿಯಂತಹ ಆಟಗಾರರ ಜನರೇಷನಲ್ ಟ್ಯಾಲೆಂಟ್ ಎಂದು ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಬಣ್ಣಿಸಿದ್ದಾರೆ.

ಇಲ್ಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ ಮಹಾರಾಜ ಟ್ರೋಫಿ ಟಿ20 ಲೀಗ್‌ನ ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ದ್ರಾವಿಡ್, 15 ವರ್ಷದ ಯುವ ಪ್ರತಿಭೆಯ ಗುಣಗಾನ ಮಾಡಿದ್ದಾರೆ. ವೈಭವ್ ಸೂರ್ಯವಂಶಿಯಂತವರು ತಲೆಮಾರಿಗೊಬ್ಬರು ಸಿಗುತ್ತಾರೆ. ಇಂತಹ ಕ್ರಿಕೆಟಿಗರು ಹುಟ್ಟಿಬರುವುದು ಅಪರೂಪದಲ್ಲೇ ಅಪರೂಪ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ವೈಭವ್ ಸೂರ್ಯವಂಶಿ ಓರ್ವ ಅಪರೂಪದಲ್ಲೇ ಅಪರೂಪದ ಆಟಗಾರ. ಸಚಿನ್ ತೆಂಡೂಲ್ಕರ್ ಬಳಿಕ 15 ವರ್ಷಕ್ಕೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಎರಡನೇ ಆಟಗಾರ ವೈಭವ್. ಸಚಿನ್ ಪಾದಾರ್ಪಣೆ 40 ವರ್ಷಗಳ ಬಳಿಕ ವೈಭವ್ ಸೂರ್ಯವಂಶಿ ಸಿಕ್ಕಿದ್ದಾರೆ. ಇನ್ನೊಂದು 40 ವರ್ಷದ ಬಳಿಕ ಮತ್ತೊಬ್ಬ ವೈಭವ್ ಸೂರ್ಯವಂಶಿ ಸಿಗಬಹುದು. ಒಬ್ಬರನ್ನು ಮತ್ತೊಬ್ಬರಿಗೆ ಹೋಲಿಸಬಾರದು. ನಮ್ಮ ರಾಜ್ಯದ ಹುಡುಗರು ಚೆನ್ನಾಗಿ ಆಡುತ್ತಾರೆ. ವೈಭವ್ ಸೂರ್ಯವಂಶಿ ಸ್ಪೆಷಲ್ ಟ್ಯಾಲೆಂಟ್. ಮುಂಬರುವ ದಿನಗಳಲ್ಲಿ ಆತ ಭಾರತ ಪರವೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಅಬ್ಬರಿಸಿ ಆರೆಂಜ್ ಕ್ಯಾಪ್ ಗೆದ್ದ ವೈಭವ್ ಸೂರ್ಯವಂಶಿ!

15 ವರ್ಷದ ವೈಭವ್ ಸೂರ್ಯವಂಶಿ 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಅದ್ಭುತ ಪ್ರದರ್ಶನದ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು. ರಾಜಸ್ಥಾನ ರಾಯಲ್ಸ್ ಪರ ವೈಭವ್ ಸೂರ್ಯವಂಶಿ 16 ಪಂದ್ಯಗಳನ್ನಾಡಿ 237.30 ಸ್ಟ್ರೈಕ್‌ರೇಟ್‌ನಲ್ಲಿ 776 ರನ್ ಬಾರಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದಷ್ಟೇ ಅಲ್ಲದೇ 19ನೇ ಸೀಸನ್ ಐಪಿಎಲ್‌ನ ಉದಯೋನ್ಮುಖ ಕ್ರಿಕೆಟಿಗ, ಸೂಪರ್ ಸ್ಟ್ರೈಕರ್ ಆಫ್‌ ದಿ ಸೀಸನ್ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತ ತಂಡಕ್ಕೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ!

ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನದಿಂದಾಗಿ ಇದೀಗ ವೈಭವ್ ಸೂರ್ಯವಂಶಿ, ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತ ಸೀನಿಯರ್ಸ್ ತಂಡದಲ್ಲಿ ಸ್ಥಾನ ಪಡೆದ ಅತ್ಯಂತ ಕಿರಿಯ ಬ್ಯಾಟರ್ ಎನ್ನುವ ಹಿರಿಮೆಗೆ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Sachin Tendulkar: 'ನನ್ನ ಔಟ್‌ ಮಾಡೋಕೆ ನಿಮಗೆ ಸಾಧ್ಯ ಆಗೋದಿಲ್ಲ..' ಮಗಳು, ಸೊಸೆ ಜೊತೆ ಫ್ಲೈಟ್‌ನಲ್ಲೇ ಮಾಸ್ಟರ್‌ ಬ್ಲಾಸ್ಟರ್‌ ಕ್ರಿಕೆಟ್‌
ಸಚಿನ್‌, ವಿರಾಟ್‌ಗಿಂತಲೂ ದೊಡ್ಡ ಪ್ಲೇಯರ್‌ ಆಗುವ ಸಾಮರ್ಥ್ಯ ವೈಭವ್‌ ಸೂರ್ಯವಂಶಿಗಿದೆ: ದಿಗ್ಗಜ ಬೌಲರ್‌ ಭವಿಷ್ಯ