ಯಶಸ್ವಿ ಜೈಸ್ವಾಲ್ ಮುಂಬೈ ಕ್ರಿಕೆಟ್ ಸಂಸ್ಥೆಗೆ ಇ-ಮೇಲ್ ರವಾನಿಸಿದ್ದು, ಗೋವಾ ಪರ ಕಣಕ್ಕಿಳಿಯಲು ನಿರಪೇಕ್ಷಣ ಪತ್ರ(ಎನ್‌ಒಸಿ) ನೀಡುವಂತೆ ಮನವಿ ಮಾಡಿದ್ದಾರೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ಗೋವಾ ಪರ ಕಣಕ್ಕಿಳಿಯಲು ಬಯಸಿದ್ದಾರೆ. ನಾಯಕತ್ವಕ್ಕಾಗಿ ತಂಡ ತೊರೆಯುತ್ತಿದ್ದಾರಾ ಜೈಸ್ವಾಲ್?
ಮುಂಬೈ: ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಸದ್ಯ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಎಡಗೈ ಬ್ಯಾಟರ್ ಜೈಸ್ವಾಲ್ ಕುರಿತಂತೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದಾರೆ.
ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ಯಶಸ್ವಿ ಜೈಸ್ವಾಲ್, ಇದೀಗ ಮುಂಬರುವ ದೇಶಿ ಋತುವನ್ನು ಗೋವಾ ಪರ ಆಡಲು ಮುಂದಾಗಿದ್ದಾರೆ. ಹೀಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆಗೆ ಯಶಸ್ವಿ ಜೈಸ್ವಾಲ್ ಇ-ಮೇಲ್ ರವಾನಿಸಿದ್ದು, ಗೋವಾ ಪರ ಕಣಕ್ಕಿಳಿಯಲು ನಿರಪೇಕ್ಷಣ ಪತ್ರ(ಎನ್‌ಒಸಿ) ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದು ಮುಂಬೈ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿಯನ್ನುಂಟು ಮಾಡಿದೆ.
ತವರಿನಲ್ಲಿ ನಡೆಯೋ ಗುಜರಾತ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ತಂಡದಲ್ಲಿ ಒಂದು ಮೇಜರ್ ಚೇಂಜ್?
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, 'ಎಡಗೈ ಸ್ಪೋಟಕ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮುಂಬೈ ತಂಡವನ್ನು ತೊರೆದು ಗೋವಾ ಪರ ಕಣಕ್ಕಿಳಿಯಲು ಒಲವು ತೋರಿದ್ದಾರೆ. ಅವರು ಮುಂದಿನ ಸೀಸನ್ ರಣಜಿ ಟ್ರೋಫಿ ಟೂರ್ನಿಯಲ್ಲಿ ಗೋವಾ ಪರ ಕಣಕ್ಕಿಳಿಯಲು ಬಯಸಿದ್ದಾರೆ. ಈ ಮೊದಲು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಕೂಡಾ ಮುಂಬೈ ತಂಡವನ್ನು ತೊರೆದು ಗೋವಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಯಶಸ್ವಿ ಜೈಸ್ವಾಲ್ ಕಳೆದ ಫೆಬ್ರವರಿ 17 ಫೆಬ್ರವರಿಯಂದು ವಿದರ್ಭ ಎದುರಿನ ಪಂದ್ಯಕ್ಕೆ ಮುಂಬೈ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಗಾಯದ ಸಮಸ್ಯೆಯಿಂದ ಜೈಸ್ವಾಲ್‌ಗೆ ರಣಜಿ ಪಂದ್ಯವನ್ನಾಡಲು ಸಾಧ್ಯವಾಗಿರಲಿಲ್ಲ. ಅಂಡರ್-19 ಕಾಲದಿಂದಲೂ ಜೈಸ್ವಾಲ್ ಮುಂಬೈ ಪರ ಕಣಕ್ಕಿಳಿಯುತ್ತಾ ಬಂದಿದ್ದಾರೆ.
ಮೈದಾನದಲ್ಲೇ ಮತ್ತೆ ಕಿರಿಕ್ ಮಾಡಿದ ಗೋಯೆಂಕಾ; ರಾಹುಲ್ ಬಳಿಕ ಪಂತ್ ಮೇಲೂ ಸಿಡಿಮಿಡಿ!
ನಾಯಕತ್ವಕ್ಕಾಗಿ ತಂಡ ತೊರೆಯುತ್ತಿದ್ದಾರಾ ಜೈಸ್ವಾಲ್?
ಕೆಲ ಮಾಧ್ಯಮ ವರದಿಗಳ ಪ್ರಕಾರ ಯಶಸ್ವಿ ಜೈಸ್ವಾಲ್, ಗೋವಾ ರಣಜಿ ಕ್ರಿಕೆಟ್ ತಂಡದ ನಾಯಕತ್ವದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿಯಿಲ್ಲ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಇದುವರೆಗೂ 36 ಪಂದ್ಯಗಳನ್ನಾಡಿದ್ದಾರೆ. ಮುಂಬೈ ಪರ 66 ಇನ್ನಿಂಗ್ಸ್‌ಗಳಿಂದ 60.85ರ ಬ್ಯಾಟಿಂಗ್ ಸರಾಸರಿಯಲ್ಲಿ 3,712 ರನ್ ಸಿಡಿಸಿದ್ದಾರೆ. ಇದರಲ್ಲಿ 13 ಶತಕ ಹಾಗೂ 12 ಅರ್ಧಶತಕಗಳು ಸೇರಿವೆ. ಇನ್ನು 33 ಲಿಸ್ಟ್ 'ಎ' ಪಂದ್ಯಗಳಿಂದ 5 ಶತಕ ಹಾಗೂ 7 ಅರ್ಧಶತಕ ಸಹಿತ 1526 ರನ್ ಬಾರಿಸಿದ್ದಾರೆ.