ರೋಹಿತ್ ಶರ್ಮಾಗೆ ಗೇಟ್‌ಪಾಸ್ ಕೊಡಲು ಪ್ಲಾಬ್ ಬಿ ಸಿದ್ಧಪಡಿಸಿದ ಜೈಸ್ವಾಲ್, ಭರ್ಜರಿ ಮಾಸ್ಟರ್ ಪ್ಲಾನ್

Published : Oct 08, 2026, 07:51 PM IST
Yashasvi Jaiswal started Wicketkeeping

ಸಾರಾಂಶ

ಟೀಂ ಇಂಡಿಯಾದ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಯಶಸ್ವಿ ಜೈಸ್ವಾಲ್, ಇದೀಗ ತಂಡಕ್ಕೆ ಕಂಬ್ಯಾಕ್ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅವರ ಈ ತಂತ್ರವು ಕೆಲವು ಹಿರಿಯ ಆಟಗಾರರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಜೈಸ್ವಾಲ್ ತಂತ್ರ ಏನು?

ಟೀಂ ಇಂಡಿಯಾದ ಪ್ರತಿಭಾನ್ವಿತ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ (Yashasvi Jaiswal) ತಂಡದಲ್ಲಿ ಸ್ಥಾನ ಸಿಗೋದೇ ಕಷ್ಟವಾಗಿದೆ. ಟಿ-20 ತಂಡದಿಂದ ಕೈಬಿಟ್ಟಿರೋದು ಆಗಿದೆ. ಏಕದಿನ (ODI Match) ಸರಣಿಗಳಿಗೆ ಆಗಾಗ ಆಯ್ಕೆ ಆಗಿದ್ದರೂ ಆಡುವ ಚಾನ್ಸ್ ಸಿಕ್ತಾನೇ ಇಲ್ಲ. ಹೀಗಾಗಿ ಜೈಸ್ವಾಲ್ ಕೇವಲ ಟೆಸ್ಟ್‌ಗೆ ಸೀಮಿತವಾಗಿ ಬಿಟ್ಟಿದ್ದಾರೆ.

ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ.. ಜೈಸ್ವಾಲ್ ಅವರು ತಮ್ಮ ಸ್ಥಾನವನ್ನು ಟೀಂ ಇಂಡಿಯಾದಲ್ಲಿ ಭದ್ರಪಡಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅವರ ಪ್ಲಾನ್‌ನಂತೆಯೇ ಕಾರ್ಯರೂಪಕ್ಕೆ ತರಲು ಮೈದಾನದಲ್ಲಿ ಬೆವರಸು ಸುರಿಸುತ್ತಿದ್ದಾರೆ. ಹೌದು, ತಂಡದ ಆರಂಭಿಕ ಬ್ಯಾಟರ್ ಆಗಿರುವ ಜೈಸ್ವಾಲ್‌ ಡಗೌಟ್‌ನಲ್ಲಿ ಕೂತು ಕೂತು ಬೇಜಾರಾಗಿದೆಯಂತೆ. ತಮಗೆ ಇರುವ ಯಾವೆಲ್ಲ ಸ್ಕಿಲ್‌ಗಳನ್ನ ಸುಧಾರಿಸಿಕೊಂಡರೆ ಸ್ಥಾನ ಗಿಟ್ಟಿಸಿಕೊಳ್ಳಬಹುದು ಅನ್ನೋದ್ರ ಬಗ್ಗೆ ಗಮನ ಹರಿಸಿದ್ದಾರಂತೆ.

ಈ ಮಾತುಗಳನ್ನ ನಾವು ಹೇಳುತ್ತಿಲ್ಲ. ಬದಲಾಗಿ, ಮುಂಬೈ ರಣಜಿ ತಂಡದ ನಾಯಕ ಸಿದ್ದೇಶ್ ಲಾಡ್ ಬಹಿರಂಗಪಡಿಸಿದ್ದಾರೆ. ನಮ್ಮ ಜೈಸ್ವಾಲ್ ಆರಂಭಿಕ ಬ್ಯಾಟರ್ ಆಗಿ ಯಶಸ್ವಿ ಕಂಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಲೆಗ್ ಸ್ಪಿನ್ನರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ವಿಕೆಟ್ ಕೀಪಿಂಗ್ ಶುರುಮಾಡಿಕೊಂಡಿದ್ದಾರೆ. 24 ವರ್ಷದ ಜೈಸ್ವಾಲ್, ನೆಟ್ಸ್‌ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ಮಾಡ್ತಿದ್ದಾರೆ. ಜೊತೆಗೆ ಗ್ಲೌಸ್ ತೊಟ್ಟು ಕೀಪಿಂಗ್ ಕೂಡ ಮಾಡಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಮುಂಬೈ ತಂಡ ಚಂಡಿಗಡದ ವಿರುದ್ಧ ಮೊದಲ ರಣಜಿ ಪಂದ್ಯವನ್ನ ಆಡಲಿದೆ. ಈ ಪಂದ್ಯಕ್ಕೆ ಜೈಸ್ವಾಲ್ ಲಭ್ಯರಿರುತ್ತಾರೆ ಎಂದು ಸಿದ್ದೇಶ್ ಲಾಡ್ ತಿಳಿಸಿದ್ದಾರೆ.

ಜೈಸ್ವಾಲ್ ತಂಡಕ್ಕೆ ಬೇರೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಕೀಪಿಂಗ್ ಶುರುಮಾಡಿದ್ದಾರೆ. ಅಭ್ಯಾಸದ ಪಂದ್ಯದ ವೇಳೆ 10 ಓವರ್‍‌ಗಳವರೆಗೆ ಕೀಪಿಂಗ್ ಮಾಡಿದ್ದಾರೆ. ಅವರ ಈ ನಿರ್ಧಾರದ ಬಗ್ಗೆ ನಮಗೆ ಗೊತ್ತಿಲ್ಲ. ಅವರು ಯಾವು ಉದ್ದೇಶವನ್ನು ಇಟ್ಟುಕೊಂಡಿದ್ದಾರೆ ಎಂದು ತಿಳಿದಿಲ್ಲ. ಅವರು ಇದೇ ರೀತಿ ಅಭ್ಯಾಸವನ್ನು ಮುಂದುವರಿಸಿದ್ರೆ ಕಠಿಣ ಪರಿಸ್ಥಿತಿಗಳಿಗೂ ಒಗ್ಗಿಕೊಳ್ತಾರೆ ಎಂದು ಕ್ಯಾಪ್ಟನ್ ತಿಳಿಸಿದ್ದಾರೆ.

ಚರ್ಚೆ ಆಗ್ತಿರೋದು ಏನು?

ಜೈಸ್ವಾಲ್ ಮುಂಬರುವ ಏಕದಿನ ವಿಶ್ವಕಪ್ ಆಡುವ ಕನಸು ಕಂಡಿದ್ದಾರೆ. ತಂಡಕ್ಕೆ ಆಯ್ಕೆ ಆಗಿದ್ದರೂ ಪ್ಲೇಯಿಂಗ್-11ನಲ್ಲಿ ಅವಕಾಶ ಸಿಗೋದು ಗ್ಯಾರಂಟಿ ಇಲ್ಲ. ಈಗಾಗಲೇ ಗಿಲ್ ಮತ್ತು ರೋಹಿತ್ ಶರ್ಮಾ ಭದ್ರವಾಗಿದ್ದಾರೆ. ಈ ಕಾಂಬಿನೇಷನ್ ಬದಲಾಯಿಸುವ ಯಾವುದೇ ನಿರ್ಧಾರವನ್ನು ಮ್ಯಾನೇಜ್ಮೆಂಟ್ ಮಾಡೋದಿಲ್ಲ. ಇದರ ಮಧ್ಯೆ ಹಿರಿಯ ಆಟಗಾರ ರೋಹಿತ್ ಶರ್ಮಾ ವಿಶ್ವಕಪ್ ಆಡಿಯೇ ಆಡುತ್ತೇನೆ ಎಂಬ ಸಂದೇಶವನ್ನು ಬ್ಯಾಟ್ ಮೂಲಕವೇ ನೀಡುತ್ತಿದ್ದಾರೆ. ಜೈಸ್ವಾಲ್‌ಗೆ ರೋಹಿತ್ ಶರ್ಮಾ ಪ್ರಬಲ ಸ್ಪರ್ಧಿ ಆಗಿರೋದ್ರಿಂದ, ತಂಡಕ್ಕೆ ಅಗತ್ಯ ಬಿದ್ದಾಗ ತಮ್ಮ ಕೀಪಿಂಗ್ ಸ್ಕಿಲ್ ಹೆಸರಲ್ಲಿ ಪ್ಲೇಯಿಂಗ್-11ನೊಳಗೆ ನುಸುಳಬಹುದು ಎಂಬ ಲೆಕ್ಕಾಚಾರ ಅವರದ್ದು ಎಂಬ ಚರ್ಚೆ ಶುರುವಾಗಿದೆ. ಇನ್ನೂ ಕೆಲವರು ಮುಂದುವರಿದು ಯೋಚಿಸಿ ಈಗಾಗಲೇ ಬಿಸಿಸಿಐ ರೋಹಿತ್ ಶರ್ಮಾ ಅವರ ನಿವೃತ್ತಿ ಬಯಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಜೈಸ್ವಾಲ್ ಮೂಲಕ ಪ್ಲಾನ್ ಬಿ ರೆಡಿ ಮಾಡುತ್ತಿದೆಯಾ ಎಂಬ ಅನುಮಾನ ಮೂಡಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Harmanpreet Kaur: ನಾಯಕತ್ವಕ್ಕೆ ಕಳೆದುಕೊಂಡ ಮೇಲೆ ಕೌರ್ ಹೀಗೆ ಮಾಡಿದ್ದೇಕೆ? ಇನ್‌ಸ್ಟಾದಲ್ಲಿ ಯಾರಿಗೆ ಕೊಟ್ರು ಟಾಂಗ್
India vs West Indies: ವಿಂಡೀಸ್ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಆಯ್ಕೆ ಮಾಡಿದ ಚೇತೇಶ್ವರ್ ಪೂಜಾರ! ಒಂದು ಅಚ್ಚರಿ ಬದಲಾವಣೆ