ಯಂಗ್‌ಗನ್ ಯಶಸ್ವಿ ಜೈಸ್ವಾಲ್‌ಗೆ ಏನಾಯ್ತು..? ಖದರ್ ಕಳೆದುಕೊಂಡ್ರಾ ಲೆಫ್ಟಿ..?

By Suvarna News  |  First Published Apr 14, 2024, 4:51 PM IST

ಈ ಬಾರಿಯ IPLನಲ್ಲಿ ಭಾರತದ ಹಲವು ಆಟಗಾರರು ಅಬ್ಬರಿಸ್ತಿದ್ದಾರೆ. ಅದರಲ್ಲೂ ಯಂಗಸ್ಟರ್ಸ್ ಆರ್ಭಟ ಜೋರಾಗಿದೆ. ಕಳೆದ ಸೀಸನ್ನಲ್ಲಿ ಫ್ಲಾಪ್ ಶೋ ನೀಡಿದವ್ರು, ಈ ಸಲ ತಮ್ಮ ಸಾಮರ್ಥ್ಯ ಪ್ರೂವ್ ಮಾಡಿದ್ದಾರೆ. ಆದ್ರೆ, ಕಳೆದ  ಬಾರಿ ಆರ್ಭಟಿಸಿದ್ದ ಕೆಲ ಆಟಗಾರರು, ಈ ಬಾರಿ ವೈಫಲ್ಯದ ಹಾದಿ ಹಿಡಿದಿದ್ದಾರೆ. ಆ ಲೀಸ್ಟಲ್ಲಿ ಯಶಸ್ವಿ ಜೈಸ್ವಾಲ್ ಎಲ್ಲರಿಗಿಂತ ಮುಂದಿದ್ದಾರೆ. 


ಬೆಂಗಳೂರು(ಏ.14): ಈ ಆಟಗಾರ ಕಳೆದ ಬಾರಿ IPLನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ. ಅದೇ ಕಾರಣಕ್ಕೆ ಟೀಂ ಇಂಡಿಯಾದಲ್ಲೂ ಸ್ಥಾನ ಸಿಕ್ಕಿತ್ತು. ಆದ್ರೆ, ಈ ಬಾರಿಯ ಐಪಿಎಲ್‌ನಲ್ಲಿ ಸತತ ಫ್ಲಾಪ್ ಶೋ ನೀಡ್ತಿದ್ದಾನೆ. ಟಿ20 ವಿಶ್ವಕಪ್ ತಂಡದ ಆಯ್ಕೆಯ ರೇಸ್‌ನಿಂದ ಹೊರಬೀಳೋ ಆತಂಕದಲ್ಲಿದ್ದಾನೆ. ಯಾರು ಆ ಆಟಗಾರ ಅಂತೀರಾ..? ಇಲ್ಲಿದೆ ನೋಡಿ ಡಿಟೇಲ್ಸ್.

ಕಳೆದ ಬಾರಿ IPLನಲ್ಲಿ ಜಬರ್ದಸ್ತ್ ಪ್ರದರ್ಶನ..!

Latest Videos

undefined

ಈ ಬಾರಿಯ IPLನಲ್ಲಿ ಭಾರತದ ಹಲವು ಆಟಗಾರರು ಅಬ್ಬರಿಸ್ತಿದ್ದಾರೆ. ಅದರಲ್ಲೂ ಯಂಗಸ್ಟರ್ಸ್ ಆರ್ಭಟ ಜೋರಾಗಿದೆ. ಕಳೆದ ಸೀಸನ್ನಲ್ಲಿ ಫ್ಲಾಪ್ ಶೋ ನೀಡಿದವ್ರು, ಈ ಸಲ ತಮ್ಮ ಸಾಮರ್ಥ್ಯ ಪ್ರೂವ್ ಮಾಡಿದ್ದಾರೆ. ಆದ್ರೆ, ಕಳೆದ  ಬಾರಿ ಆರ್ಭಟಿಸಿದ್ದ ಕೆಲ ಆಟಗಾರರು, ಈ ಬಾರಿ ವೈಫಲ್ಯದ ಹಾದಿ ಹಿಡಿದಿದ್ದಾರೆ. ಆ ಲೀಸ್ಟಲ್ಲಿ ಯಶಸ್ವಿ ಜೈಸ್ವಾಲ್ ಎಲ್ಲರಿಗಿಂತ ಮುಂದಿದ್ದಾರೆ. 

IPL 2024: ಲಖನೌ ಎದುರು ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ, ಉಭಯ ತಂಡದಲ್ಲಿ ಮೇಜರ್ ಚೇಂಜ್

ಯೆಸ್, ರಾಜಸ್ಥಾನ ರಾಯಲ್ಸ್ ಪರ ಆಡ್ತಿರೋ ಯಶಸ್ವಿ, 2023ರ IPLನಲ್ಲಿ ಜಬರ್ದಸ್ತ್ ಪರ್ಫಾಮೆನ್ಸ್ ನೀಡಿದ್ರು. 14 ಪಂದ್ಯಗಳಲ್ಲಿ ಬ್ಯಾಟ್ ಬೀಸಿ, 48.08ರ ಸರಾಸರಿ ಮತ್ತು 163.61ರ ಸ್ಟ್ರೈಕ್ರೇಟ್ನಲ್ಲಿ 625 ರನ್ ಬಾರಿಸಿದ್ರು. ಟೂರ್ನಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದವ್ರ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದ್ರು. ಇದೇ ಕಾರಣಕ್ಕೆ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಸಿಕ್ಕಿತ್ತು. ಅದರಂತೆ ಸಿಕ್ಕ ಅವಕಾಶವನ್ನ ಅದ್ಭುತವಾಗಿ ಬಳಸಿಕೊಂಡು, ತಂಡದಲ್ಲಿ ಸ್ಥಾನ ಫಿಕ್ಸ್ ಮಾಡಿಕೊಂಡಿದ್ದಾರೆ. ಆದ್ರೆ, ಅದ್ಯಾಕೋ ಈ ಬಾರಿಯ IPLನಲ್ಲಿ  ಈ ಬಾರಿ ಈ ಯುವ ಎಡಗೈ ಬ್ಯಾಟರ್, ಮಕಾಡೆ ಮಲಗಿದ್ದಾರೆ. 

ಟೂರ್ನಿಯಲ್ಲಿ ಯಶಸ್ವಿಗೆ ಈವರೆಗೆ 50 ಎಸೆತಗಳನ್ನು ಎದುರಿಸಲು ಸಾಧ್ಯವಾಗಿಲ್ಲ. ಪವರ್‌ಪ್ಲೇನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರು. ಅದ್ರೀಗ, ಸುಲಭವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ದಾರಿ ಹಿಡಿಯುತ್ತಿದ್ದಾರೆ. ಈವರೆಗೂ ಆಡಿರೋ 5 ಪಂದ್ಯಗಳಿಂದ ಕೇವಲ 12.60ರ ಸರಾಸರಿಯಲ್ಲಿ 63 ರನ್ಗಳಿಸಿದ್ದಾರೆ. ಆ ಮೂಲಕ  ಟೀಮ್‌ಗೆ ಹೊರೆಯಾಗಿ ಪರಿಣಮಿಸಿದ್ದಾರೆ. 

ಟಿ20 ವಿಶ್ವಕಪ್ ತಂಡದ ಆಯ್ಕೆ ರೇಸ್ನಿಂದ ಔಟ್..?

IPL ಮುಗಿದ ಒಂದೇ ವಾರದಲ್ಲಿ, ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಐಪಿಎಲ್ ಪರ್ಫಾಮೆನ್ಸ್ ಆಧಾರದ ಮೇಲೆ ತಂಡವನ್ನ ಆಯ್ಕೆ ಮಾಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಇದ್ರಿಂದ ಯಶಸ್ವಿಗೆ ವಿಶ್ವಕಪ್ ಟಿಕೆಟ್ ಸಿಗುತ್ತೋ..ಇಲ್ವೋ ಅನ್ನೋ ಅನುಮಾನ ಮೂಡಿದೆ. ಮತ್ತೊಂದೆಡೆ ಆರಂಭಿಕ ಬ್ಯಾಟರ್‌ ರೇಸ್ನಲ್ಲಿರೋ ಯಶಸ್ವಿಗೆ ಬೇರೆ ಬ್ಯಾಟರ್ಸ್ ಟಫ್ ಕಾಂಪಿಟೇಷನ್ ಕೊಡ್ತಿದ್ದಾರೆ. 

ಮುಂಬೈ ವಿರುದ್ಧ ಸೋತ್ರೂ, ಫ್ಯಾನ್ಸ್ ಮನಗೆದ್ದ ಕೊಹ್ಲಿ..! ಕೊಹ್ಲಿಯ ಒಂದೇ ಮಾತಿನಿಂದ ಮುಂಬೈ ಫ್ಯಾನ್ಸ್ ಸೈಲೆಂಟ್..!

ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸೋದ್ಯಾರು..? 

ಯೆಸ್, T20 ವಿಶ್ವಕಪ್ನಲ್ಲಿ ಯಶಸ್ವಿ ಮತ್ತು ರೋಹಿತ್ ಶರ್ಮಾ ಆರಂಭಿಕರಾಗಿ ಬ್ಯಾಟ್ ಬೀಸ್ತಾರೆ ಎನ್ನಲಾಗಿತ್ತು. ಆದ್ರೀಗ, ಯಶಸ್ವಿ  ರನ್ಗಳಿಸಲು ಪರದಾಡ್ತಿರೋದ್ರಿಂದ ಹಿಟ್‌ಮ್ಯಾನ್ ಜೊತೆಗೆ, ಶುಭ್‌ಮನ್ ಗಿಲ್ ಹೆಸರು ಕೇಳಿಬರ್ತಿದೆ. ಯಾಕಂದ್ರೆ, ಈ ಬಾರಿಯೂ ಗಿಲ್ IPLನಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಗುಜರಾತ್ ನಾಯಕನಾಗಿ ಬ್ಯಾಟಿಂಗ್ನಲ್ಲಿ ಮಿಂಚುತ್ತಿದ್ದಾರೆ. 6 ಪಂದ್ಯಗಳಿಂದ 51ರ ಸರಾಸರಿ ಮತ್ತು 151.78ರ ಸ್ಟ್ರೈಕ್ರೇಟಲ್ಲಿ 255 ರನ್‌ಗಳಿಸಿದ್ದಾರೆ. 

ಗಿಲ್ ಮತ್ತು ರೋಹಿತ್ ಈಗಾಗ್ಲೇ ಏಕದಿನ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಈಗ T20 ಕ್ರಿಕೆಟ್ನಲ್ಲೂ ಜೊತೆಯಾಗಿ ಇನ್ನಿಂಗ್ಸ್ ಆರಂಭಿಸಿದ್ರು ಅಚ್ಚರಿ ಇಲ್ಲ. ಆದೇನೆ ಇರಲಿ, ಯಶಸ್ವಿ ಮುಂದಿನ ಪಂದ್ಯಗಳಲ್ಲಿ ಸ್ಟ್ರಾಂಗ್‌ ಕಮ್‌ಬ್ಯಾಕ್‌ ಮಾಡಲಿ. ಆ ಮೂಲಕ ವಿಶ್ವಕಪ್ ತಂಡದಲ್ಲಿ ಸ್ಥಾನ ಫಿಕ್ಸ್ ಮಾಡಿಕೊಳ್ಳಲಿ ಅನ್ನೋದೆ ಅಭಿಮಾನಿಗಳ ಆಶಯ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!