IPL 2024: ಹದಿನಾರು ವರ್ಷ ಫಾರಿನರ್ಸ್ ದರ್ಬಾರ್, ಈ ಸಲ ಇಂಡಿಯನ್ಸ್ ಕಾರುಬಾರು..!

By Suvarna News  |  First Published Apr 14, 2024, 2:19 PM IST

ಇಂಡಿಯನ್ ಪ್ರೀಮಿಯರ್ ಲೀಗ್. ಭಾರತೀಯ ಕ್ರಿಕೆಟರ್ಸ್‌ಗೆ ವೇದಿಕೆಯಾಗಬೇಕಿದ್ದ ಐಪಿಎಲ್‌ನಲ್ಲಿ ಕಳೆದ 16 ವರ್ಷಗಳಿಂದ ವಿದೇಶಿಯರಿಗೆ ವೇದಿಕೆಯಾಗಿತ್ತು. ಪ್ಲೇಯಿಂಗ್-11ನಲ್ಲಿ  ನಾಲ್ವರು ಫಾರಿನ್ ಪ್ಲೇಯರ್ಸ್ ಆಡಿದ್ರೂ ಅವರೆಲ್ಲರೂ ಮಿಂಚುತ್ತಿದ್ದರು. ಆದ್ರೆ ಫಾರ್ ದ ಫಸ್ಟ್ ಟೈಮ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂಡಿಯನ್ ಪ್ಲೇಯರ್ಸ್ ಮಿಂಚುತ್ತಿದ್ದಾರೆ.


ಬೆಂಗಳೂರು(ಏ.14): ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂಡಿಯನ್ ಪ್ಲೇಯರ್ಸ್ ಆರ್ಭಟ ಜೋರಾಗಿದೆ. ಇಷ್ಟು ವರ್ಷ ವಿದೇಶಿ ಆಟಗಾರರ ಅಬ್ಬರ ಜೋರಾಗಿತ್ತು. ಆದ್ರೆ ಈ ಸಲದ ಐಪಿಎಲ್‌ನಲ್ಲಿ ಮಾತ್ರ ಭಾರತೀಯ ಆಟಗಾರರು ಮಿಂಚುತ್ತಿದ್ದಾರೆ. ಎಲ್ಲಾ ವಿಭಾಗದಲ್ಲೂ ಅವರದ್ದೇ ದರ್ಬಾರ್.

ಈ ಸಲ ನಡೆಯುತ್ತಿದೆ ರಿಯಲ್ ಇಂಡಿಯನ್ ಪ್ರೀಮಿಯರ್ ಲೀಗ್

Tap to resize

Latest Videos

ಇಂಡಿಯನ್ ಪ್ರೀಮಿಯರ್ ಲೀಗ್. ಭಾರತೀಯ ಕ್ರಿಕೆಟರ್ಸ್‌ಗೆ ವೇದಿಕೆಯಾಗಬೇಕಿದ್ದ ಐಪಿಎಲ್‌ನಲ್ಲಿ ಕಳೆದ 16 ವರ್ಷಗಳಿಂದ ವಿದೇಶಿಯರಿಗೆ ವೇದಿಕೆಯಾಗಿತ್ತು. ಪ್ಲೇಯಿಂಗ್-11ನಲ್ಲಿ  ನಾಲ್ವರು ಫಾರಿನ್ ಪ್ಲೇಯರ್ಸ್ ಆಡಿದ್ರೂ ಅವರೆಲ್ಲರೂ ಮಿಂಚುತ್ತಿದ್ದರು. ಆದ್ರೆ ಫಾರ್ ದ ಫಸ್ಟ್ ಟೈಮ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂಡಿಯನ್ ಪ್ಲೇಯರ್ಸ್ ಮಿಂಚುತ್ತಿದ್ದಾರೆ. ರನ್ ಗಳಿಕೆ.. ವಿಕೆಟ್ ಬೇಟೆ.. ಸಿಕ್ಸರ್.. ಫೀಲ್ಡಿಂಗ್.. ಕ್ಯಾಪ್ಟನ್ಸಿ.. ಎಲ್ಲದರಲ್ಲೂ ಭಾರತೀಯ ಆಟಗಾರರೇ ಮುಂದಿದ್ದಾರೆ. ಅಲ್ಲೊಬ್ಬ ಇಲ್ಲೊಬ್ಬ ವಿದೇಶಿ ಆಟಗಾರ ಕಾಣಿಸಿಕೊಂಡಿರುವುದು ಬಿಟ್ರೆ ಉಳಿದೆಲ್ಲಾ ಕಡೆ ಇಂಡಿಯಾ ಪ್ಲೇಯರ್ಗಳು ದರ್ಬಾರ್ ನಡೆಸ್ತಿದ್ದಾರೆ.

IPL 2024 ಇಂದು ಬದ್ಧ ವೈರಿಗಳ ಕಾದಾಟ, ಮುಂಬೈಗೆ ಸಿಎಸ್‌ಕೆ ಚಾಲೆಂಜ್‌

ಗರಿಷ್ಠ ರನ್ ಸರದಾರರು ಇಂಡಿಯಾ ಪ್ಲೇಯರ್ಸ್

ಈ ಸಲದ ಮೊದಲ 26 ಪಂದ್ಯಗಳಲ್ಲಿ ಇಂಡಿಯನ್ ಬ್ಯಾಟರ್ಸ್‌ಗಳು ದರ್ಬಾರ್ ನಡೆಸಿದ್ದಾರೆ. ಗರಿಷ್ಠ ರನ್ ಹೊಡೆದಿರುವ ಟಾಪ್-5 ಆಟಗಾರರಲ್ಲಿ ಇರುವುದು ಭಾರತೀಯ ಆಟಗಾರರೇ. ಅದರಲ್ಲಿ ಕಿಂಗ್ ಕೊಹ್ಲಿ ಟಾಪ್‌ನಲ್ಲಿದ್ದಾರೆ. 6 ಪಂದ್ಯದಿಂದ 319 ರನ್ ಕೊಳ್ಳೆ ಹೊಡೆದಿದ್ದಾರೆ. ರಿಯಾನ್ ಪರಾಗ್ 261, ಶುಭ್‌ಮನ್ ಗಿಲ್ 255 ರನ್ ಬಾರಿಸಿದ್ದಾರೆ. ಸಂಜು ಸ್ಯಾಮ್ಸನ್ 246, ಸಾಯಿ ಸುದರ್ಶನ್ 226 ರನ್ ಗಳಿಸಿದ್ದಾರೆ. ಐವರು ಇಂಡಿಯನ್ಸ್ ಬಿಟ್ರೆ ಮತ್ಯಾರು 200 ರನ್ ಗಡಿ ಮುಟ್ಟಿಯೇ ಇಲ್ಲ.

ಬ್ಯಾನ್ ಆಗುವುದರಿಂದ ಕೊನೆ ಕ್ಷಣದಲ್ಲಿ ಬಚಾವಾದ ರಿಷಭ್ ಪಂತ್..! ಆದರೂ ಆತಂಕ ತಪ್ಪಿದ್ದಲ್ಲ

ರಿಯಾನ್ ಪರಾಗ್ ಸಿಕ್ಸರ್ ಕಿಂಗ್

ಮೊದಲ 16 ಪಂದ್ಯಗಳಲ್ಲಿ ಐದು ಮ್ಯಾಚ್ ಆಡಿರುವ ರಾಜಸ್ಥಾನ ರಾಯಲ್ಸ್‌ನ ರಿಯಾನ್ ಪರಾಗ್ ಬರೋಬ್ಬರಿ 17 ಸಿಕ್ಸರ್ ಸಿಡಿಸಿ, ಇಲ್ಲಿಯವರೆಗೂ ಗರಿಷ್ಠ ಸಿಕ್ಸರ್ ಹೊಡೆದ ದಾಖಲೆ ನಿರ್ಮಿಸಿದ್ದಾರೆ. ಹೈದ್ರಾಬಾದ್‌ನ ಅಭಿಷೇಕ್ ಶರ್ಮಾ 16 ಸಿಕ್ಸರ್ ಬಾರಿಸಿದ್ದಾರೆ.

ವಿಕೆಟ್ ಬೇಟೆಯಲ್ಲೂ ಇಂಡಿಯನ್ ಬೌಲರ್ಸ್ ಮುಂದು

ಕೇವಲ ರನ್ ಕೊಳ್ಳೆ ಹೊಡೆಯೋದ್ರಲ್ಲಿ ಮಾತ್ರವಲ್ಲ. ವಿಕೆಟ್ ಬೇಟೆಯಲ್ಲೂ ಇಂಡಿಯನ್ ಪ್ಲೇಯರ್ಸ್ ಮುಂದಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಯುಜವೇಂದ್ರ ಚಹಲ್ ತಲಾ 10 ವಿಕೆಟ್ ಪಡೆಯೋ ಮೂಲಕ ಗರಿಷ್ಠ ವಿಕೆಟ್ ಟೇಕರ್ ಎನಿಸಿದ್ದಾರೆ. ಖಲೀಲ್ ಅಹ್ಮದ್ 9 ಹಾಗೂ ಅರ್ಷದೀಪ್ ಸಿಂಗ್ 8 ವಿಕೆಟ್ ಪಡೆದಿದ್ದಾರೆ. ಟಾಪ್-3ನಲ್ಲಿ ಇಂಡಿಯನ್ ಬೌಲರ್ಗಳಿದ್ದಾರೆ.

ಕೀಪಿಂಗ್‌ನಲ್ಲೂ ರಾಕ್, ಫೀಲ್ಡಿಂಗ್ನಲ್ಲೂ ರಾಕ್..!

ಇಷ್ಟು ವರ್ಷ ವಿದೇಶಿ ವಿಕೆಟ್ ಕೀಪರ್ ದರ್ಬಾರ್ ನಡೆಸುತ್ತಿದ್ದರು. ಆದ್ರೆ ಈ ವರ್ಷ ಇಂಡಿಯನ್ ಕೀಪರ್ಸ್ ಕಾರ್ಬಾರ್ ಜೋರಾಗಿದೆ. ಪಂಜಾಬ್ ಕಿಂಗ್ಸ್ ತಂಡದ ಜಿತೇಶ್ ಶರ್ಮಾ 8 ಕ್ಯಾಚ್ ಹಿಡಿದಿದ್ದಾರೆ. ಪಂತ್ 7 ಕ್ಯಾಚ್ ಪಡೆದಿದ್ದಾರೆ. ಟಾಪ್-5ನಲ್ಲಿ ಭಾರತೀಯರಿದ್ದಾರೆ. ಇನ್ನು ರವೀಂದ್ರ ಜಡೇಜಾ 7 ಕ್ಯಾಚ್ ಹಿಡಿದು ಗರಿಷ್ಠ ಕ್ಯಾಚ್ ಲಿಸ್ಟ್ನಲ್ಲಿ ಟಾಪ್ನಲ್ಲಿದ್ದಾರೆ. ಒಟ್ನಲ್ಲಿ ಈ ಸಲದ ಐಪಿಎಲ್ನಲ್ಲಿ ಇಂಡಿಯಾ ಪ್ಲೇಯರ್ಸ್ ಆರ್ಭಟ ಜೋರಾಗಿದೆ. ಈಗ ನಿಜಕ್ಕೂ ಐಪಿಎಲ್ಗೆ ಕಳೆ ಬಂದಿದೆ. ಐಪಿಎಲ್ ನಡೆಸಿದಕ್ಕೂ ಸಾರ್ಥ ಅನಿಸ್ತಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!