WTC: ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸಿಗೆ ನ್ಯೂಜಿಲೆಂಡ್ ಸರಣಿಯೇ ನಿರ್ಣಾಯಕ; ಹೀಗಿದೆ ಲೆಕ್ಕಾಚಾರ!

Published : Nov 16, 2026, 02:44 PM IST
WTC Final

ಸಾರಾಂಶ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪ್ರವೇಶಿಸಲು ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಅತ್ಯಂತ ನಿರ್ಣಾಯಕವಾಗಿದೆ. ಭಾರತದ ಫೈನಲ್ ಹಾದಿ ಮತ್ತು ಪಾಯಿಂಟ್ಸ್‌ ಟೇಬಲ್‌ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ.

ಇಂಡಿಯಾ ಮತ್ತು ಕಿವೀಸ್‌ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ನವೆಂಬರ್ 19ರಿಂದ ಪ್ರಾರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸಮತೋಲನದಲ್ಲಿರುವುದರಿಂದ ಈ ಸರಣಿ ಟೀಮ್ ಇಂಡಿಯಾಕ್ಕೆ ಬಹಳ ಮುಖ್ಯ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಸ್‌ನ ಈ ಅವಧಿಯಲ್ಲಿ ಟೀಂ ಇಂಡಿಯಾಗೆ ಈಗ ಕೇವಲ 7 ಪಂದ್ಯಗಳು ಮಾತ್ರ ಉಳಿದಿವೆ. ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ನಂತರ, ಭಾರತ ತಂಡವು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಸರಣಿಯನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ ಟೇಬಲ್‌ ಅಲ್ಲಿ ಟೀಮ್ ಇಂಡಿಯಾ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ. ಪಾಯಿಂಟ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಸುಧಾರಿಸಿಕೊಳ್ಳಲು ಟೀಮ್ ಇಂಡಿಯಾ ಕಿವೀಸ್ ವಿರುದ್ಧದ ಸೆಣಸಾಟ ನಿರ್ಣಾಯಕವಾಗಿದೆ. ಈ ಕುರಿತು ಕಪ್ಲೀಟ್ ಸ್ಟೋರಿ ಇಲ್ಲಿದೆ.

ಫಸ್ಟ್‌ ಪ್ಲೇಸ್‌ ಅಲ್ಲಿ ಕಿವೀಸ್!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್‌ ಟೇಬಲ್‌ನಲ್ಲಿ, ನ್ಯೂಜಿಲೆಂಡ್ ಪ್ರಸ್ತುತ ಶೇ.72.22 ಪಾಯಿಂಟ್ಸ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ, ದಕ್ಷಿಣ ಆಫ್ರಿಕಾ ಶೇ. 71.43 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಶೇಕಡಾ 69.23 ಪಾಯಿಂಟ್ಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದರ ನಡುವೆ, ಭಾರತ ತಂಡ ಶೇಕಡಾ 51.52 ಪಾಯಿಂಟ್ಸ್‌ಗಳೊಂದಿಗೆ ಮತ್ತು ಟೀಂ ಇಂಡಿಯಾ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಕಿವೀಸ್ ವಿರುದ್ಧ ನಿರ್ಣಾಯಕ!

2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿನಲ್ಲಿ ಟೀಮ್ ಇಂಡಿಯಾ 11 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಭಾರತ 5 ಪಂದ್ಯ ಗೆದ್ದಿದೆ, 4 ಪಂದ್ಯಗಳನ್ನು ಸೋತಿದೆ. ಅಲ್ಲದೇ 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸುವ ಅವಕಾಶ ಜೀವಂತವಾಗಿಡಲು ಭಾರತ ನ್ಯೂಜಿಲೆಂಡ್‌ನಲ್ಲಿ ಗೆಲ್ಲಲೇಬೇಕು. ಒಂದು ವೇಳೆ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 2-0 ಅಂತರದಲ್ಲಿ ಗೆದ್ದರೆ, ಟೀಂ ಇಂಡಿಯಾದ ಗೆಲುವಿನ ಶೇಕಡಾವಾರು 58.97 ಆಗುವುದರಿಂದ, ಟೀಂ ಇಂಡಿಯಾ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರುತ್ತದೆ. ಅದೇ ರೀತಿ, ಎರಡೂ ಟೆಸ್ಟ್‌ಗಳಲ್ಲಿ ಸೋತರೆ, ನ್ಯೂಜಿಲೆಂಡ್‌ನ ಗೆಲುವಿನ ಶೇಕಡಾವಾರು ಕೂಡ 54.17 ಆಗಿರುತ್ತದೆ.

ಡ್ರಾ ಆದರೆ ಏನಾಗುತ್ತದೆ?

ಭಾರತ ಮತ್ತು ಕಿವೀಸ್‌ ನಡುವಿನ ಸರಣಿ 1-1 ಡ್ರಾದಲ್ಲಿ ಕೊನೆಗೊಂಡರೆ, ಟೀಂ ಇಂಡಿಯಾದ ಗೆಲುವಿನ ಶೇ. 51.28 ಆಗಿರುತ್ತದೆ. ಆದರೆ ಟೀಂ ಇಂಡಿಯಾ ಇನ್ನೂ ನಾಲ್ಕನೇ ಸ್ಥಾನದಲ್ಲಿ ಉಳಿಯುತ್ತದೆ. ಅದೇ ರೀತಿ, ಭಾರತ ಒಂದು ಟೆಸ್ಟ್ ಗೆದ್ದು ಎರಡನೇ ಟೆಸ್ಟ್ ಡ್ರಾವಾದರೆ, ಭಾರತದ ಗೆಲುವಿನ ಶೇ. 53.85 ಆಗಿರುತ್ತದೆ, ಆದರೆ ಟೀಂ ಇಂಡಿಯಾ ತನ್ನ ಶ್ರೇಯಾಂಕವನ್ನು ಬದಲಾಯಿಸುವ ಸಾಧ್ಯತೆ ಬಹಳ ಕಡಿಮೆ. ಭಾರತ ನ್ಯೂಜಿಲೆಂಡ್‌ನಲ್ಲಿ ಎರಡೂ ಟೆಸ್ಟ್‌ ಸೋತರೆ, ಅವರ ಗೆಲುವಿನ ಶೇಕಡಾವಾರು 43.59 ಆಗಿರುತ್ತದೆ. ಅಲ್ಲದೇ ಭಾರತ ತಂಡ ಐದನೇ ಸ್ಥಾನಕ್ಕೆ ಕುಸಿಯುತ್ತದೆ. ಅಲ್ಲಿ ಬಾಂಗ್ಲಾ ನಾಲ್ಕನೇ ಸ್ಥಾನದಲ್ಲಿ ಬರುತ್ತದೆ.

ಏನಿದು ಸಮೀಕರಣ!

ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸಮೀಕರಣ ಗಮನಿಸಿದರೆ, ಭಾರತವು ನ್ಯೂಜಿಲೆಂಡ್‌ನಲ್ಲಿ 2-0 ಅಂತರದಿಂದ ಸರಣಿಯನ್ನು ಗೆಲ್ಲಬೇಕಾಗುತ್ತದೆ, ಅದರ ನಂತರ ಟೀಮ್ ಇಂಡಿಯಾ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನ ತಲುಪಲು ಸಾಧ್ಯ. ಆದರೆ ಮೂರನೇ ಸ್ಥಾನವನ್ನು ತಲುಪಿದ ನಂತರವೂ, ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಆದರೆ ನ್ಯೂಜಿಲೆಂಡ್ ತಂಡವನ್ನು 2-0 ಅಂತರದಿಂದ ಸೋಲಿಸಿದ ನಂತರ, ಜೂನ್ 2027 ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ತಂಡ ಆಡುವ ಮೊದಲು ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಜಯ ಸಾಧಿಸಬೇಕಾಗುತ್ತದೆ. ಇದು ನಿಜವಾದ ಸಮೀಕರಣ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

13 ಸಿಕ್ಸರ್, 41 ಎಸೆತಗಳಲ್ಲೇ ಶತಕ ಚಚ್ಚಿದ ರಜತ್ ಪಾಟೀದಾರ್..! ಐಪಿಎಲ್‌ಗೂ ಮುನ್ನ RCB ಕ್ಯಾಪ್ಟನ್ ಖಡಕ್ ವಾರ್ನಿಂಗ್
ಪಾಕಿಸ್ತಾನಕ್ಕೆ ಸೋಲಿನ ರುಚಿ ತೋರಿಸಿ ಏಷ್ಯಾಕಪ್ ಗೆದ್ದ ಟೀಮ್ ಇಂಡಿಯಾ U19; ಈ ಗೆಲುವಿನ ಹಿಂದಿದ್ದಾರೆ ಕನ್ನಡದ ಹೆಮ್ಮೆಯ ಪುತ್ರ!