ಮೊದಲ ಟೆಸ್ಟ್‌ ಜಯಕ್ಕೆ 26 ವರ್ಷ ಕಾಯ್ದಿದ್ದ ನ್ಯೂಜಿಲೆಂಡ್‌..!

By Suvarna NewsFirst Published Jun 24, 2021, 9:09 AM IST
Highlights

* ಭಾರತ ಮಣಿಸಿ ಟೆಸ್ಟ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ ನ್ಯೂಜಿಲೆಂಡ್‌

* ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಿವೀಸ್

* ಮೊದಲ ಟೆಸ್ಟ್‌ ಗೆಲುವು ಸಾಧಿಸಲು 26 ವರ್ಷಗಳ ಕಾಲ ಕಾದಿದ್ದ ನ್ಯೂಜಿಲೆಂಡ್ ತಂಡ

ನವದೆಹಲಿ(ಜೂ.24): 144 ವರ್ಷಗಳ ಇತಿಹಾಸವಿರುವ ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೊಚ್ಚಲ ವಿಶ್ವ ಟೆಸ್ಟ್‌ ಚಾಂಪಿಯನ್‌ ಆಗಿ ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ತಂಡ ಹೊರಹೊಮ್ಮಿದೆ. ಸೌಥಾಂಪ್ಟನ್‌ನಲ್ಲಿ ನಡೆದ ಚೊಚ್ಚಲ ಟೆಸ್ಟ್‌ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡದ ವಿರುದ್ದ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದೆ.

ಆದರೆ ಕುತೂಹಲಕಾರಿ ವಿಚಾರವೆಂದರೆ, ನ್ಯೂಜಿಲೆಂಡ್‌ ಕ್ರಿಕೆಟ್ ತಂಡವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಗೆಲುವು ಕಾಣಲು 26 ವರ್ಷಗಳು ಆಗಿದ್ದವು. 1930ರಲ್ಲಿ ಮೊದಲ ಟೆಸ್ಟ್‌ ಆಡಿದ್ದ ಕಿವೀಸ್‌, ಮೊದಲ ಗೆಲುವು ಸಾಧಿಸಿದ್ದು ಬರೋಬ್ಬರಿ 1956ರಲ್ಲಿ. ಅಂದರೆ ತಾನಾಡಿದ 45ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಮೊದಲ ಟೆಸ್ಟ್ ಜಯ ದಾಖಲಿಸಿತ್ತು. ಮೊದಲ ಗೆಲುವಿಗೆ ಅತಿಹೆಚ್ಚು ಸಮಯ ತೆಗೆದುಕೊಂಡ ತಂಡ ನ್ಯೂಜಿಲೆಂಡ್‌. ಆದರೆ ಇದೀಗ ಎಲ್ಲರಿಗಿಂತ ಮೊದಲೇ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆದ್ದಿದೆ.

ಟೆಸ್ಟ್ ಚಾಂಪಿಯನ್ ಪಟ್ಟವೇರಿದ ನ್ಯೂಜಿಲೆಂಡ್, ಕಣ್ಣಲ್ಲಿ ಆನಂದಭಾಷ್ಪ

2003ರ ಬಳಿಕ ಕಿವೀಸ್‌ ವಿರುದ್ಧ ಭಾರತಕ್ಕೆ ಗೆಲುವಿಲ್ಲ!

2003ರ ಏಕದಿನ ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್‌ ವಿರುದ್ಧ ಐಸಿಸಿ ಟೂರ್ನಿಗಳಲ್ಲಿ ಇದುವರೆಗೂ ಗೆಲುವು ಸಾಧಿಸಿಲ್ಲ. 2003ರ ಬಳಿಕ ಟಿ20, ಏಕದಿನ ವಿಶ್ವಕಪ್‌ ಪಂದ್ಯಗಳಲ್ಲಿ ಭಾರತ, ನ್ಯೂಜಿಲೆಂಡ್‌ ವಿರುದ್ಧ ಆಡಿದ ಎಲ್ಲಾ ಐಸಿಸಿ ಟೂರ್ನಿಯ ಪಂದ್ಯಗಳಲ್ಲೂ ಸೋತಿದೆ.
 

click me!