Wriddhiman Saha ಬೆದರಿಕೆ ಹಾಕಿದ ಪತ್ರಕರ್ತನ ಹೆಸರು ಬಾಯ್ಬಿಟ್ಟ ವೃದ್ದಿಮಾನ್ ಸಾಹ..!

Suvarna News   | Asianet News
Published : Mar 07, 2022, 12:03 PM IST
Wriddhiman Saha ಬೆದರಿಕೆ ಹಾಕಿದ ಪತ್ರಕರ್ತನ ಹೆಸರು ಬಾಯ್ಬಿಟ್ಟ ವೃದ್ದಿಮಾನ್ ಸಾಹ..!

ಸಾರಾಂಶ

* ತಮಗೆ ಬೆದರಿಕೆ ಹಾಕಿದ ಪತ್ರಕರ್ತನ ಹೆಸರು ಬಾಯ್ಬಿಟ್ಟ ವೃದ್ದಿಮಾನ್ ಸಾಹ * ಬಿಸಿಸಿಐ ರಚಿಸಿದ್ದ ತನಿಖಾ ಸಮಿತಿಗೆ ಎಲ್ಲಾ ಮಾಹಿತಿ ನೀಡಿದ್ದೇನೆಂದ ವಿಕೆಟ್ ಕೀಪರ್ * ಸಾಹ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಲು ಮುಂದಾದ ಪತ್ರಕರ್ತ ಬೋರಿಯಾ ಮಜುಂದಾರ್

ನವದೆಹಲಿ(ಮಾ.07): ಪತ್ರಕರ್ತನಿಂದ ಬೆದರಿಕೆ ಬಂದಿರುವ ಬಗ್ಗೆ ಬಿಸಿಸಿಐ ರಚಿಸಿದ್ದ ತನಿಖಾ ಸಮಿತಿಗೆ ಎಲ್ಲಾ ಮಾಹಿತಿ ನೀಡಿದ್ದೇನೆ ಎಂದು ಭಾರತದ ವಿಕೆಟ್‌ ಕೀಪರ್‌ ಬ್ಯಾಟರ್‌ ವೃದ್ಧಿಮಾನ್‌ ಸಾಹ (Wriddhiman Saha) ತಿಳಿಸಿದ್ದಾರೆ. ‘ನನಗೆ ಗೊತ್ತಿರುವ ಎಲ್ಲಾ ಮಾಹಿತಿ ಸಮಿತಿಯೊಂದಿಗೆ ಹಂಚಿಕೊಂಡಿದ್ದೇನೆ. ಅದನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಭೆಯ ಬಗ್ಗೆ ಹೊರಗೆ ಮಾತನಾಡದಂತೆ ಬಿಸಿಸಿಐ ಸೂಚಿಸಿದೆ’ ಎಂದು ವೃದ್ದಿಮಾನ್ ಸಾಹ ಪ್ರತಿಕ್ರಿಯಿಸಿದ್ದಾರೆ. 

ಬಿಸಿಸಿಐ (BCCI) ರಚಿಸಿದ್ದ ಮೂರು ಮಂದಿ ತನಿಖಾ ಸಮಿತಿಯ ಮುಂದೆ ವೃದ್ದಿಮಾನ್ ಸಾಹ ಎಲ್ಲಾ ಅಗತ್ಯ ಮಾಹಿತಿಯನ್ನು ನೀಡಿದ್ದಾರೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajiv Shukla) ಹೇಳಿದ್ದಾರೆ. ಲಂಕಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ತಂಡವನ್ನು ಆಯ್ಕೆ ಮಾಡುವಾಗ ವೃದ್ದಿಮಾನ್ ಸಾಹ ಅವರನ್ನು ಬಿಸಿಸಿಐ ಆಯ್ಕೆ ಸಮಿತಿಯು ಕೈಬಿಟ್ಟಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಹಾಗೂ ಟೀಂ ಇಂಡಿಯಾ (Team India) ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಮೇಲೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು. ಇದರ ಬೆನ್ನಲ್ಲೇ ಪತ್ರಕರ್ತರೊಬ್ಬರು ತಮ್ಮ ಮೇಲೆ ವಾಟ್ಸ್‌ಆಫ್‌ನಲ್ಲಿ ಬೆದರಿಕೆ ಹಾಕಿದ್ದನ್ನು ಸ್ಕ್ರೀನ್‌ಶಾಟ್‌ನೊಂದಿಗೆ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದರು.

ವೃದ್ದಿಮಾನ್ ಸಾಹ ಆವರು ತಮಗಾದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ ಟೀಂ ಇಂಡಿಯಾ ವಿಕೆಟ್‌ ಕೀಪರ್‌ಗೆ ಹಲವು ಹಿರಿಯ ಕ್ರಿಕೆಟಿಗರು ಬೆಂಬಲ ಸೂಚಿಸಿದ್ದರು. ಇದರ ಜತೆಗೆ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ (Jay Shah) ಅವರು ಸಾಹ ಜತೆ ಚರ್ಚಿಸಲಿದ್ದಾರೆ ಎಂದು ಖಜಾಂಚಿ ಅರುಣ್‌ ಧುಮಾಲ್‌ ಕೂಡಾ ತಿಳಿಸಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ, ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಸೇರಿದಂತೆ ಸಾಹ ಬೆಂಬಲಿಸಲಕ್ಕೆ ನಿಂತಿದ್ದರು.

ಇದಾದ ಬಳಿಕ ಎಚ್ಚೆತ್ತುಕೊಂಡ ಬಿಸಿಸಿಐ, ರಾಜೀವ್ ಶುಕ್ಲಾ, ಬಿಸಿಸಿಐ ಅಫೆಕ್ಸ್‌ ಕೌನ್ಸಿಲ್ ಅರುಣ್ ಧುಮಾಲ್, ಪ್ರಭ್‌ತೇಜ್‌ ಸಿಂಗ್ ಭಾಟಿಯಾ ಅವರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಿತ್ತು. ಇದಾದ ಬಳಿಕ ಪ್ರತಿಕ್ರಿಯಿಸಿದ್ದ ಅನುಭವಿ ವಿಕೆಟ್ ಕೀಪರ್, ತಮಗೆ ಈ ರೀತಿ ಬೆದರಿಕೆ ಹಾಕಿದ ಆಟಗಾರ ಯಾರು ಎಂದು ಬಿಸಿಸಿಐಗೆ ತಿಳಿಸುವುದಿಲ್ಲ. ನನ್ನ ಉದ್ದೇಶ ಯಾವೊಬ್ಬ ಒಬ್ಬ ವ್ಯಕ್ತಿಯ ವೃತ್ತಿಜೀವನ ಹಾಳುಮಾಡುವುದಲ್ಲ ಎಂದಿದ್ದರು. ಈ ಕಾರಣಕ್ಕಾಗಿಯೇ ಟ್ವೀಟ್‌ನಲ್ಲಿಯೂ ಸಹಾ ನಾನು ಆ ಪತ್ರಕರ್ತನ ಹೆಸರನ್ನು ಬಹಿರಂಗ ಪಡಿಸಿಲ್ಲ. ಇನ್ನೊಬ್ಬರ ಜೀವನವನ್ನು ಹಾಳು ಮಾಡಬೇಕೆಂದು ನನ್ನ ಪೋಷಕರು ನನಗೆ ಹೇಳಿಕೊಟ್ಟಿಲ್ಲ. ಆ ನನ್ನ ಟ್ವೀಟ್‌ನ ಉದ್ದೇಶ ಮಾಧ್ಯಮದಲ್ಲಿ ಇಂತಹ ಕೆಲವು ಮಂದಿಯು ಇದ್ದಾರೆ ಎನ್ನುವುದನ್ನು ತಿಳಿಸುವುದಾಗಿತ್ತು ಎಂದಿದ್ದರು.

Wriddhiman Saha : ಧಮ್ಕಿ ಹಾಕಿದ ಪತ್ರಕರ್ತನ ಬಗ್ಗೆ ತುಟಿಬಿಚ್ಚಿದ ಟೀಂ ಇಂಡಿಯಾ ವಿಕೆಟ್ ಕೀಪರ್..!

ರಿಷಭ್ ಪಂತ್ (Rishabh Pant) ಟೀಂ ಇಂಡಿಯಾ ಮೊದಲ ಆಯ್ಕೆಯ ವಿಕೆಟ್ ಕೀಪರ್‌ ಆಗಿ ಗುರುತಿಸಿಕೊಂಡಿದ್ದು, ಭವಿಷ್ಯದ ವಿಕೆಟ್ ಕೀಪರ್ ದೃಷ್ಠಿಯಿಂದ ಶ್ರೀಕಾರ್ ಭರತ್ ಅವರಿಗೆ ಹೆಚ್ಚು ಅವಕಾಶ ಕಲ್ಪಿಸುವ ಲೆಕ್ಕಾಚಾರದಲ್ಲಿದೆ. ಹೀಗಾಗಿ ಇತ್ತೀಚೆಗಷ್ಟೇ ಬಿಡುಗಡೆಯಾದ ಬಿಸಿಸಿಐ ಕೇಂದ್ರೀಯ ಗುತ್ತಿಯಲ್ಲಿ ಸಾಹ ಅವರಿಗೆ 'ಬಿ' ಗ್ರೇಡ್‌ನಿಂದ 'ಸಿ' ಗ್ರೇಡ್‌ಗೆ ಹಿಂಬಡ್ತಿ ನೀಡಲಾಗಿದೆ. ಮತ್ತೊಂದೆಡೆ ಹಿರಿಯ ಪತ್ರಕರ್ತ ಬೋರಿಯಾ ಮಜುಂದಾರ್‌, ಟ್ವೀಟರ್‌ನಲ್ಲಿ ವಿಡಿಯೋ ಹಂಚುವ ಮೂಲಕ ಆರೋಪಿ ತಾನೆಂದು ಒಪ್ಪಿಕೊಂಡಿದ್ದಾರೆ. ಆದರೆ ‘ಸಾಹ ಸ್ಕ್ರೀನ್‌ಶಾಟ್‌ಗಳನ್ನು ತಿರುಚಿ ನನ್ನ ಮಾನಹಾನಿ ಮಾಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ನೀಡಲಿದ್ದೇನೆ. ಎಲ್ಲಾ ಸ್ಕ್ರೀನ್‌ಶಾಟ್‌ಗಳನ್ನು ಬಿಸಿಸಿಐಗೆ ಸಲ್ಲಿಸಿದ್ದೇನೆ. ತನಿಖೆಯಲ್ಲಿ ಸತ್ಯ ಹೊರಬರಲಿ’ ಎಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?