
ಮುಂಬೈ(ಮಾ.10): ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ವುಮೆನ್ಸ್ ಸೋಲನ್ನೇ ಹಾಸು ಹೊದ್ದು ಮಲಗಿದೆ. ಒಂದಲ್ಲ, ಎರಡಲ್ಲ, ಸತತ 4ನೇ ಸೋಲು ಆರ್‌ಸಿಬಿ ಹೆಗಲೇರಿದೆ. ಯುಪಿ ವಾರಿಯರ್ಸ್ ವಿರುದ್ಧ ಹೋರಾಟಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮತ್ತೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಎಡವಿತು. ಇದರ ಪರಿಣಾಮ ಯುಪಿ ವಿರುದ್ದ ಹೀನಾಯ 10 ವಿಕೆಟ್ ಸೋಲು ಅನುಭವಿಸಿದೆ. ನಾಲ್ಕು ಪಂದ್ಯ ಮುಗಿದರೂ ಆರ್‌ಸಿಬಿ ಗೆಲುವಿನ ಹಳಿಕೆ ಮರಳಿಲ್ಲ ಅನ್ನೋ ಕೊರಗು ಇದೀಗ ಅಭಿಮಾನಿಗಳನ್ನು ಕಾಡುತ್ತಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ವುಮೆನ್ಸ್ ತಂಡದ ಮೇಮ್ಸ್ ಹರಿದಾಡುತ್ತಿದೆ. ಪುರುಷರ ಆರ್‌ಸಿಬಿ ತಂಡವನ್ನೇ ಮೀರಿಸುತ್ತಿದೆ ಅನ್ನೋ ಮೇಮ್ಸ್ ಹರಿದಾಡುತ್ತಿದೆ.
ಆರ್‌ಸಿಬಿ ವುಮೆನ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು. ಇದರ ಪರಿಣಾಮ 138 ರನ್‌ಗೆ ಆಲೌಟ್ ಆಯಿತು. ಸುಲಭ ಟಾರ್ಗೆಟ್ ಪಡೆದ ಯುಪಿ ವಾರಿಯರ್ಸ್ ಯಾವುದೇ ಆತಂಕವಿಲ್ಲದೆ ಚೇಸಿಂಗ್ ಆರಂಭಿಸಿತು. ಒಂದೆಡೆ ಸುಲಭ ಟಾರ್ಗೆಟ್ ಮತ್ತೊಂದೆಡೆ ಆರ್‌ಸಿಬಿ ಸಡಿಲ ಬೌಲಿಂಗ್. ಹೀಗಾಗಿ ಯುಪಿ ವಾರಿಯರ್ಸ್ ಅಬ್ಬರ, ಆಡಂಬರವಿಲ್ಲದೆ ರನ್ ಚೇಸಿಂಗ್ ಮಾಡಿತು.
ದೇವಿಕಾ ವೈದ್ಯಾ ಹಾಗೂ ನಾಯಕಿ ಆಲಿಸಾ ಹೀಲೆ ಜೊತೆಯಾಟಕ್ಕೆ ಆರ್‌ಸಿಬಿ ತಲೆಬಾಗಿತು. ಆಲಿಸಾ ಹೊಡಿ ಬಡಿ ಆಟಕ್ಕೆ ಆರ್‌ಸಿಬಿ ವನಿತೆಯರು ತತ್ತರಿಸಿದರು. ಬರೋಬಬ್ಬರಿ 204ರ ಸ್ಟ್ರೈಕ್‌ರೇಟ್‌ನಲ್ಲಿ ಅಲಿಸಾ ಹೀಲೆ ಬ್ಯಾಟ್ ಬೀಸಿದರು. ಡೇವಿಕಾ ವೈದ್ಯ ಅಜೇಯ 36 ರನ್ ಸಿಡಿಸಿದರೆ, ಅಲಿಸಾ ಹೀಲೆ 47 ಎಸೆತದಲ್ಲಿ 18 ಬೌಂಡರಿ ಹಾಗೂ 1ಸಿಕ್ಸರ್ ನೆರವಿನಿಂದ ಅಜೇಯ 97 ರನ್ ಸಿಡಿಸಿದರು. ಈ ಮೂಲಕ ಯುಪಿ ವಾರಿಯರ್ಸ್ 13 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವು ದಾಖಲಿಸಿತು.
ಆರ್‌ಸಿಬಿ ಒಟ್ಟು ನಾಲ್ಕು ಪಂದ್ಯದಲ್ಲಿ ಅನುಭವಿಸಿದ ಅತ್ಯಂತ ಹೀನಾಯ ಸೋಲು ಇದಾಗಿದೆ. ಬರೋಬ್ಬರಿ 10 ವಿಕೆಟ್‌ಗಳಿಂದ ಆರ್‌ಸಿಬಿ ಮಣಿಸಿದ ಯುಪಿ ವಾರಿಯರ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಆದರೆ ಆರ್‌ಸಿಬಿ ಬಾಗಿಲು ಬಹುತೇಕ ಮುಚ್ಚಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.