WPL 2023 ಬ್ಯಾಟಿಂಗ್‌ನಲ್ಲಿ ಮತ್ತೆ ಎಡವಿದ ಆರ್‌ಸಿಬಿ ವುಮೆನ್ಸ್, 138 ರನ್‌ಗೆ ಆಲೌಟ್!

Published : Mar 10, 2023, 09:05 PM ISTUpdated : Mar 10, 2023, 09:48 PM IST
WPL 2023 ಬ್ಯಾಟಿಂಗ್‌ನಲ್ಲಿ ಮತ್ತೆ ಎಡವಿದ ಆರ್‌ಸಿಬಿ ವುಮೆನ್ಸ್, 138 ರನ್‌ಗೆ ಆಲೌಟ್!

ಸಾರಾಂಶ

ಸೋಲಿನಿಂದ ಕಂಗೆಟ್ಟಿರುವ ಆರ್‌ಸಿಬಿ ವುಮೆನ್ಸ್ ಇಂದು ಯುಪಿ ವಿರುದ್ಧ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದೆ. ಇದರ ಪರಿಣಾಮ ಯುಪಿ ತಂಡಕ್ಕೆ 139 ರನ್ ಟಾರ್ಗೆಟ್ ನೀಡಲಾಗಿದೆ.

ಮುಂಬೈ(ಮಾ.10): ಹ್ಯಾಟ್ರಿಕ್ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರು ಇದೀಗ ಮೊದಲ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಆದರೆ ಯುಪಿ ವಾರಿಯರ್ಸ್ ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಆರ್‌ಸಿಬಿ ಆತಂಕ ಎದುರಿಸುವಂತಾಗಿದೆ. ಎಲ್ಲಿಸ್ ಪೆರಿ ಹಾಗೂ ಸೋಫಿಯಾ ಡಿವೈನ್ ಹೋರಾಟದಿಂದ ಯುಪಿ ವಾರಿಯರ್ಸ್ ವಿರುದ್ಧ ಆರ್‌ಸಿಬಿ ವುವೆನ್ಸ್ ವಿಕೆಟ್ ನಷ್ಟಕ್ಕೆ ರನ್ ಸಿಡಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಂದೂ ಕೂಡ ನಾಯಕಿ ಸ್ಮೃತಿ ಮಂಧನಾ ನಿರೀಕ್ಷಿತ ಹೋರಾಟ ನೀಡಲಿಲ್ಲ. ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು. 29 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಆರ್‌ಸಿಬಿ ವುಮೆನ್ಸ್ ತಂಡಕ್ಕೆ ಸೋಫಿಯಾ ಡಿವೈನ್ ಹಾಗೂ ಎಲ್ಲಿಸ್ ಪೆರಿ ಜೊತೆಯಾಟ ನೆರವಾಯಿತು. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿದ ಆರ್‌ಸಿಬಿ ವುಮೆನ್ಸ್ ಬೃಹತ್ ಮೊತ್ತದ ಸೂಚನೆ ನೀಡಿತು.

WPL 2023 ಗೆಲುವು ಹುಡುಕುತ್ತಿರುವ ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು, ಕೊನೆಯ ಸ್ಥಾನಕ್ಕೆ ಜಾರಿದ ಬೆಂಗಳೂರು!

ಸೋಫಿಯಾ ಡಿವೈನ್ 24 ಎಸೆತದಲ್ಲಿ 36 ರನ್ ಸಿಡಿಸಿ ಔಟಾದರು. ಇತ್ತಎಲ್ಲಿಸ್ ಪೆರಿ ದಿಟ್ಟ ಹೋರಾಟ ನೀಡುವ ಮೂಲಕ ಆರ್‌ಸಿಬಿ ಕುಸಿತ ತಪ್ಪಿಸಿದರು. ಎಲ್ಲಿಸ್ ಪೆರಿ ಹೋರಾಟ ನೀಡಿದರೆ, ಇತರರಿಂದ ಯಾವ ಹೋರಾಟ ಮೂಡಿ ಬರಲಿಲ್ಲ. ಕಾನಿಕಾ ಅಹುಜಾ, ಹೀಥರ್ ನೈಟ್ ಬಹುಬೇಗನೆ ವಿಕೆಟ್ ಕೈಚೆಲ್ಲಿದರು. ಶ್ರೇಯಾಂಕ ಪಾಟೀಲ್ ಜೊತೆ ಸೇರಿದ ಎಲ್ಲಿಸ್ ಪೆರಿ ಯುಪಿ ವಿರುದ್ದ ದಿಟ್ಟ ಹೋರಾಟ ನೀಡಿದರು.

ಎಲ್ಲಿಸ್ ಪೇರಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಪೆರಿ 52 ರನ್ ಸಿಡಿಸಿ ಔಟಾದರು. ಇತ್ತ ಶ್ರೇಯಾಂಕ ಪಾಟೀಲ್ 15 ರನ್ ಸಿಡಿಸಿ ಔಟಾದರು. ಎರಿನ್ ಬರ್ನ್ 12 ರನ್ ಸಿಡಿಸಿದರು. ರಿಚಾ ಘೋಷ್ 1, ಕೋಮಲ್ ಜಂಜಾದ್ 5, ರೇಣುಕಾ ಠಾಕೂರ್ ಸಿಂಗ್ 3 ರನ್ ಸಿಡಿಸಿ ಔಟಾದರು. ಈ ಮೂಲಕ 19.3 ಓವರ್‌ನಲ್ಲಿ 138ರನ್‌ಗೆ ಆಲೌಟ್ ಆಯಿತು. ಎಲ್ಲಿಸ್ ಪೆರಿ ಹಾಗೂ ಸೋಫಿಯಾ ಡಿವೈನ್ ಹೋರಾಟದಿಂದ ಆರ್‌ಸಿಬಿ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಮತ್ತೆ ಸುಲಭ ಟಾರ್ಗೆಟ್ ನೀಡುವ ಮೂಲಕ ಆರ್‌ಸಿಬಿ ಮಹಿಳಾ ತಂಡದ ಆತಂಕ ಹೆಚ್ಚಾಗಿದೆ.

ಹ್ಯಾಟ್ರಿಕ್ ಸೋಲು ಕಂಡಿರುವ ಆರ್‌ಸಿಬಿ
ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ವುಮೆನ್ಸ್ ಸತತ 3 ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 223 ರನ್ ಬಿಟ್ಟುಕೊಟ್ಟ ಆರ್‌ಸಿಬಿ 60 ರನ್ ಸೋಲು ಕಂಡಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಆರ್‌ಸಿಬಿ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ದ ಹೋರಾಟ ನಡೆಸಿತ್ತು. ಮುಂಬೈ ತಂಡಕ್ಕೆ 156 ರನ್ ಟಾರ್ಗೆಟ್ ನೀಡಿದ ಆರ್‌ಸಿಬಿಗೆ ಮತ್ತೆ ಹಿನ್ನಡೆಯಾಗಿತ್ತು. ಮುಂಬೈ ಇಂಡಿಯನ್ಸ್ 9 ವಿಕೆಟ್ ಗೆಲುವು ಕಂಡಿತು. ಇನ್ನು ಮೂರನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಹೋರಾಡಿದ ಆರ್‌ಸಿಬಿ ವುಮೆನ್ಸ್ 11 ರನ್ ಸೋಲು ಕಂಡಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?