WPL 2023 Final ನೋ ಬಾಲ್ ವಿವಾದದ ನಡುವೆ ಡೆಲ್ಲಿ ಮಣಿಸಿ ಚೊಚ್ಚಲ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್!

By Suvarna NewsFirst Published Mar 26, 2023, 10:46 PM IST
Highlights

ಐಪಿಎಲ್ ಟೂರ್ನಿ, ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ  ಎರಡಲ್ಲೂ ಮುಂಬೈ ಇಂಡಿಯನ್ಸ್ ಬಲಿಷ್ಠ ತಂಡ ಅನ್ನೋದು ಸಾಬೀತಾಗಿದೆ. ಚೊಚ್ಚಲ ಆವೃತ್ತಿ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಟ್ರೋಫಿ ಗದ್ದುಕೊಂಡಿದೆ.

ಮುಂಬೈ(ಮಾ.26): ಡೆಲ್ಲಿ ಕ್ಯಾಪಿಟಲ್ಸ್ ವುಮೆನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಫೈನಲ್ ಹೋರಾಟ. ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಬಲಿಷ್ಠ ತಂಡವಾಗಿ ಗುರುತಿಸಿಕೊಂಡ ಉಭಯ ತಂಡದ ಹೋರಾಟ ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಡೆಲ್ಲಿ ತಂಡವನ್ನು 131 ರನ್‌ಗೆ ಕಟ್ಟಿಹಾಕಿದ ಮುಂಬೈ ಇಂಡಿಯನ್ಸ್ ದಿಟ್ಟ ಹೋರಾಟದ ಮೂಲಕ ಗುರಿ ಚೇಸ್ ಮಾಡಿತು. 19.3 ಓವರ್‌ಗಳಲ್ಲಿ  3 ವಿಕೆಟ್ ಕಳೆದುಕೊಂಡು ಮುಂಬೈ ಇಂಡಿಯನ್ಸ್ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಚೊಚ್ಚಲ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಟ್ರೋಫಿ ಗೆದ್ದುಕೊಂಡಿತು.ಇದರ ನಡುವೆ ವಿವಾದವೂ ಸೃಷ್ಟಿಯಾಗಿದೆ. ಡೆಲ್ಲಿ ಬ್ಯಾಟರ್ ಶೆಫಾಲಿ ವರ್ಮಾ ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿದೆ.ಫುಲ್ ಟಾಸ್ ಎಸೆತದ ಸೊಂಟಕ್ಕಿಂತ ಮೇಲಿದ್ದರೂ ವರ್ಮಾಗೆ ಔಟ್ ತೀರ್ಪು ನೀಡಲಾಗಿದೆ. ಇದರಿಂದ ಡೆಲ್ಲಿ ಬೃಹತ್ ಮೊತ್ತ ಸಿಡಿಸಲು ಸಾಧ್ಯವಾಗಲಿಲ್ಲ ಇದು ಅಂಬಾನಿ ಮನಿ ಪವರ್ ಅನ್ನೋ ಆರೋಪ ಕೇಳಿಬಂದಿದೆ.

ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ ಪ್ರದರ್ಶನದ ಮೂಲಕ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇತ್ತ ಮುಂಬೈ ಇಂಡಿಯನ್ಸ್ ಎಲಿಮಿನೇಟರ್ ಪಂದ್ಯದ ಮೂಲಕ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿತು. ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಇತ್ತ ಮುಂಬೈ ಇಂಡಿಯನ್ಸ್ ಕೂಡ ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡ ತಂಡವಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಡೆಲ್ಲಿ ತಂಡಕ್ಕೆ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 131 ರನ್  ಸಿಡಿಸಿ ಮುಂಬೈ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿತು.

ಪತ್ನಿ ಅನುಷ್ಕಾ ಮುಂದೆ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ಕೊಹ್ಲಿ,ವಿಡಿಯೋ ವೈರಲ್!

132 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಯಾಸ್ತಿಕಾ ಭಾಟಿಯಾ ಕೇವಲ 4 ರನ್ ಸಿಡಿಸಿ ಔಟಾದರು. ಇತ್ತ ಹೈಲಿ ಮ್ಯಾಥ್ಯೂಸ್ 13 ರನ್ ಸಿಡಿಸಿ ಔಟಾದರು. ಕುಸಿದ ತಂಡಕ್ಕೆ ನ್ಯಾಟ್ ಸ್ಕಿವಿಯರ್ ಬ್ರಂಟ್ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಜೊತೆಯಾಟದಿಂದ ಮತ್ತೆ ಗೆಲುವಿನ ಹಾದಿಯಲ್ಲಿ ಸಾಗತೊಡಗಿತು.

ಒಂದೆಡೆ ಮುಂಬೈ ಹೋರಾಟ ನೀಡಿದರೆ, ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಅಷ್ಟೇ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿತು. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ರನ್ ಗಳಿಸುವುದು ಸುಲಭವಾಗಲಿಲ್ಲ. ನಾಯಕಿ ಹರ್ಮನ್ 37 ರನ್ ಸಿಡಿಸಿ ಔಟಾದರು. ನ್ಯಾಟ್ ಸ್ಕೀವಿಯರ್ ಹಾಫ್ ಸೆಂಚುರಿ ಸಿಡಿಸಿದರೂ ಮುಂಬೈ ಇಂಡಿಯನ್ಸ್ ಆತಂಕ ಹೆಚ್ಚಾಗತೊಡಗಿತು.ಆದರೆ ಮೇಲಿ ಕೆರ್ ಸತತ ಬೌಂಡರಿ ಸಿಡಿಸುವ ಮೂಲಕ ಮುಂಬೈ ಸಂಕಷ್ಟ ದೂರ ಮಾಡಿದರು.  ಅಂತಿಮ 6 ಎಸೆತದಲ್ಲಿ ಮುಂಬೈ ಗೆಲುವಿಗೆ 5 ರನ್ ಅವಶ್ಯಕತೆ ಇತ್ತು.  ಇನ್ನೂ 3 ಎಸೆತ ಬಾಕಿ ಇರುವಂತೆ ಮುಂಬೈ ಇಂಡಿಯನ್ಸ್ 7 ವಿಕೆಟ್ ಗೆಲುವು ದಾಖಲಿಸಿತು. ಮುಂಬೈ ಇಂಡಿಯನ್ಸ್ ಟ್ರೋಫಿ ಗೆದ್ದು ಸಂಭ್ರಮ ಆಚರಿಸಿತು.

IPL 2023: 'ದೊಡ್ಡದಾಗಿ ಸಿಗ್ನಲ್‌' ಕೊಟ್ಟ ಮುಂಬೈ ಇಂಡಿಯನ್ಸ್‌ ದೈತ್ಯ ಪ್ರತಿಭೆ..!
 

click me!