ಪತ್ನಿ ಅನುಷ್ಕಾ ಮುಂದೆ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ಕೊಹ್ಲಿ,ವಿಡಿಯೋ ವೈರಲ್!

By Suvarna NewsFirst Published Mar 26, 2023, 8:51 PM IST
Highlights

ವಿರಾಟ್ ಕೊಹ್ಲಿ ಮೈದಾನದಲ್ಲಿ ಡ್ಯಾನ್ಸ್ ಸ್ಕಿಲ್ ಪ್ರದರ್ಶಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಲ್ಲಿ ಕೊಹ್ಲಿ ನಾಟು ನಾಟು, ಲುಂಗಿ ಡ್ಯಾನ್ಸ್ ಹಾಡಿಗೆ ಹೆಜ್ಜೆ ಹಾಕಿದ್ದರು. ಇದೀಗ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮುಂದೆ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಮುಂಬೈ(ಮಾ.26): ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೂಲಕ ಹಲವು ದಾಖಲೆ ನಿರ್ಮಿಸಿದ್ದಾರೆ. ಇದರ ಜೊತೆಗೆ ಡ್ಯಾನ್ಸ್‌ನಲ್ಲೂ ಮೋಡಿ ಮಾಡಿದ್ದಾರೆ. ಸಿಕ್ಕ ಅವಕಾಶದಲ್ಲಿ ಕೊಹ್ಲಿ ಅದ್ಭುತ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. ಮೈದಾನದಲ್ಲಿ ಹಲವು ಭಾರಿ ಡ್ಯಾನ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮುಂದೆ ಆಸ್ಕರ್ ಗೆದ್ದ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಾಟು ನಾಟು ಹಾಡಿನ ಸಿಗ್ನೇಚರ್ ಸ್ಟೆಪ್ಸ್ ಹಾಕಿ ಪತ್ನಿ ಅನುಷ್ಕಾ ಶರ್ಮಾರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಸ್ಪೋರ್ಟ್ಸ ಅವಾರ್ಡ್ ಪ್ರಶಸ್ತಿ ಸಮಾರಂಭದಲ್ಲಿ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿರುಷ್ಕಾ ದಂಪತಿಗೆ ಕೆಲ ಗೂಗ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಪತ್ನಿ ಅನುಷ್ಕಾ ಶರ್ಮಾ ಬಳಿಕ ವಿರಾಟ್ ಕೊಹ್ಲಿ ಸರದಿಯಲ್ಲಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಬೇಕಾಯಿತು. ತಕ್ಷಣವೇ ಕೊಹ್ಲಿ ನಾಟು ನಾಟು ಹಾಡಿನ ಸಿಗ್ನೇಚರ್ ಸ್ಟೆಪ್ಸ್ ಹಾಕಿ ರಂಜಿಸಿದ್ದಾರೆ.

ಮೊನ್ನೆ ನಾಟು ನಾಟು, ಇಂದು ಲುಂಗಿ ಡ್ಯಾನ್ಸ್, ಕೊಹ್ಲಿ ಸ್ಟೆಪ್ಸ್‌ಗೆ ಅಭಿಮಾನಿಗಳು ಫಿದಾ!

ಕೊಹ್ಲಿ ಡ್ಯಾನ್ಸ್ ನೋಡಿ ಅನುಷ್ಕಾ ಶರ್ಮಾ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ. ಇದೀಗ ಕೊಹ್ಲಿ ನಾಟು ನಾಟು ಡ್ಯಾನ್ಸ್ ವಿಡಿಯೋ ಭಾರಿ ವೈರಲ್ ಆಗಿದೆ. ಇತ್ತೀಚೆಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದಲ್ಲೂ ವಿರಾಟ್ ಕೊಹ್ಲಿ ನಾಟು ನಾಟು ಹೆಜ್ಜೆ ಹಾಕಿದ್ದರು. ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ,ನಾಟು ನಾಟು ಸ್ಪೆಪ್ಸ್ ಹಾಕಿ ಮೋಡಿ ಮಾಡಿದ್ದಾರೆ.

ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಲುಂಗಿ ಡ್ಯಾನ್ಸ್ ಮೂಲಕ ಮತ್ತೆ ಗಮನಸೆಳೆದಿದ್ದಾರೆ. ಎರಡು ಪಂದ್ಯದಲ್ಲಿ ಕೊಹ್ಲಿ ಡ್ಯಾನ್ಸ್ ಮೂಲಕ ಮೋಡಿ ಮಾಡಿದ್ದರು. ಇಷ್ಟೇ ಅಲ್ಲ ಹಲವು ಬಾರಿ ಕೊಹ್ಲಿ ಡ್ಯಾನ್ಸ್ ಮೂಲಕ ರಂಜಿಸಿದ್ದಾರೆ.

 

Virat Kohli doing Naatu Naatu steps. pic.twitter.com/iN2aMvSE5Q

— Johns. (@CricCrazyJohns)

 

ಸದ್ಯ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಐಪಿಎಲ್ 2023 ಟೂರ್ನಿ ಆರಂಭಗೊಳ್ಳುತ್ತಿದೆ. ಆರ್‌ಸಿಬಿ ಈಗಾಗಲೇ ತಯಾರಿ ಆರಂಭಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಭಾರತ ಆಸ್ಟ್ರೇಲಿಯಾ ಏಕದಿನ ನಡುವೆ ಆಸ್ಕರ್ ಗೆದ್ದ RRR ನಾಟು ನಾಟು ಹಾಡಿಗೆ ಕೊಹ್ಲಿ ಡ್ಯಾನ್ಸ್!

ಕೊಹ್ಲಿಗೆ 13ನೇ ಸ್ಥಾನ
ಆಸ್ಪ್ರೇ​ಲಿಯಾ ವಿರುದ್ಧ 4ನೇ ಟೆಸ್ಟ್‌​ನಲ್ಲಿ ಅತ್ಯು​ತ್ತಮ ಪ್ರದ​ರ್ಶನ ತೋರಿದ್ದ ಭಾರ​ತದ ಸ್ಪಿನ್ನರ್‌ ಆರ್‌.​ಅ​ಶ್ವಿನ್‌ ಐಸಿಸಿ ಟೆಸ್ಟ್‌ ಬೌಲ​ರ್‌​ಗಳ ಪಟ್ಟಿ​ಯಲ್ಲಿ ನಂ.1 ಸ್ಥಾನ ಭದ್ರ​ಪ​ಡಿ​ಸಿಕೊಂಡಿ​ದ್ದಾ​ರೆ. ಬುಧವಾರ ಪ್ರಕಟಗೊಂಡ ಪರಿಷ್ಕೃತ ಪಟ್ಟಿಯಲ್ಲಿ 869 ರೇಟಿಂಗ್‌ ಅಂಕ ಪಡೆದಿರುವ ಅಶ್ವಿನ್‌, ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್‌ಸನ್‌(859)ಗಿಂತ 10 ಅಂಕ ಮುಂದಿದ್ದಾರೆ. ಕಳೆದ ವಾರ ಆ್ಯಂಡರ್‌ಸನ್‌ ಜೊತೆ ಅಶ್ವಿನ್‌ ಅಗ್ರಸ್ಥಾನ ಹಂಚಿಕೊಂಡಿದ್ದರು.

ಇನ್ನು ಅಹಮದಾಬಾದ್‌ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ವಿರಾಟ್‌ ಕೊಹ್ಲಿ 8 ಸ್ಥಾನ ಜಿಗಿತ ಕಂಡಿದ್ದು, 13ನೇ ಸ್ಥಾನ ಪಡೆದಿದ್ದಾರೆ. ರೋಹಿತ್‌ ಶರ್ಮಾ ಒಂದು ಸ್ಥಾನ ಮೇಲೇರಿ 10ನೇ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಬೌಲರ್‌ಗಳ ಪಟ್ಟಿಯಲ್ಲಿ ಜಸ್‌​ಪ್ರೀತ್‌ ಬೂಮ್ರಾ, ರವೀಂದ್ರ ಜಡೇಜಾ ತಲಾ 1 ಸ್ಥಾನ ಕುಸಿದು ಕ್ರಮ​ವಾಗಿ 7 ಮತ್ತು 9ನೇ ಸ್ಥಾನ​ದ​ಲ್ಲಿದ್ದರೆ, ಆಲ್ರೌಂಡ​ರ್‌​ಗಳ ಪಟ್ಟಿ​ಯ ಅಗ್ರ 5ರಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಅಕ್ಷರ್‌ ಪಟೇಲ್‌ 4ನೇ ಸ್ಥಾನಕ್ಕೇರಿದ್ದು, ಜಡೇಜಾ ಹಾಗೂ ಅಶ್ವಿನ್‌ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿ ಮುಂದುವರಿದಿದ್ದಾರೆ.
 

click me!