WPL 2023 ಮುಂಬೈ ಇಂಡಿಯನ್ಸ್‌ಗೆ 132 ರನ್ ಟಾರ್ಗೆಟ್ ನೀಡಿದ ಡೆಲ್ಲಿ, ಟ್ರೋಫಿಗಾಗಿ ಹೋರಾಟ!

By Suvarna NewsFirst Published Mar 26, 2023, 9:14 PM IST
Highlights

ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 131 ರನ್ ಸಿಡಿಸಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ 132 ರನ್ ಟಾರ್ಗೆಟ್ ಸಿಕ್ಕಿದ್ದು, ಚೇಸ್ ಮಾಡುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ.

ಮುಂಬೈ(ಮಾ.26): ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಫೈನಲ್ ಪಂದ್ಯ ಇದೀಗ ರೋಚಕ ಘಟ್ಟದತ್ತ ಸಾಗಿದೆ. ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಬ್ಬರಿಸಲು ಸಾಧ್ಯವಾಗಿಲ್ಲ. ಮುಂಬೈ ಇಂಡಿಯನ್ಸ್ ತಂಡದ ಇಸ್ಸಿ ವಾಗ್ ಹಾಗೂ ಹೀಲೆ ಮ್ಯಾಥ್ಯೂಸ್ ದಾಳಿಗೆ ತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಸುಲಭ ಟಾರ್ಗೆಟ್ ನೀಡಿದೆ. 

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಉತ್ತಮ ಆರಂಭ ಸಿಗಲಿಲ್ಲ. ಶೆಫಾಲಿ ವರ್ಮಾ 11 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಅಲಿಸ್ ಕ್ಯಾಪ್ಸಿ ವಿಕೆಟ್ ಪತನಗೊಂಡಿತು. ಇಸ್ಸಿ ವಾಂಗ್ ದಾಳಿಗೆ ಆರಂಭದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತತ್ತರಿಸಿತು. ಜೇಮಿಯ ರೋಡ್ರಿಗೆಸ್  9 ರನ್ ಸಿಡಿಸಿ ನಿರ್ಗಮಿಸಿದರು.

IPL 2023: 'ದೊಡ್ಡದಾಗಿ ಸಿಗ್ನಲ್‌' ಕೊಟ್ಟ ಮುಂಬೈ ಇಂಡಿಯನ್ಸ್‌ ದೈತ್ಯ ಪ್ರತಿಭೆ..!

ಮರಿಜಾನ್ ಕ್ಯಾಪ್ 18 ರನ್ ಕಾಣಿಕೆ ನೀಡಿದರು. ಒಂದೆಡೆ ವಿಕೆಟ್ ಪತನವಾಗಿದ್ದರು, ನಾಯಕಿ ಮ್ಯಾಗ್ ಲ್ಯಾನಿಂಗ್ ದಿಟ್ಟ ಹೋರಾಟ ನೀಡಿದರು. 29 ಎಸೆತದಲ್ಲಿ 35 ರನ್ ಸಿಡಿಸಿ ಲ್ಯಾನಿಂಗ್ ವಿಕೆಟ್ ಕೈಚೆಲ್ಲಿದರು. ಅರುಂಧತಿ ರೆಡ್ಡಿ ಡಕೌಟ್ ಆದರು. ಇತ್ತ ಶಿಖಾ ಪಾಂಡೆ ಹೋರಾಟದ ಮೂಲಕ ದಿಲ್ಲಿ ಕ್ಯಾಪಿಟಲ್ಸ್ ಮತ್ತೆ ಹೋರಾಟದ ಮುನ್ಸೂಚನೆ ನೀಡಿತು.

ಮಿನ್ನು ಮಣಿ ಹಾಗೂ ತಾನ್ಯಾ ಭಾಟಿಯಾ ಅಬ್ಬರಿಸಲಿಲ್ಲ. ರಾಧಾ ಯಾದವ್ ಹಾಗೂ ಶಿಖಾ ಪಾಂಡೆ ಜೊತೆಯಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ 100ರ ಗಡಿ ದಾಟಿತು. ಶಿಖಾ ಪಾಂಡೆ 17 ಎಸೆತದಲ್ಲಿ ಅಜೇಯ 27 ರನ್ ಸಿಡಿಸಿದರು. ಇತ್ತ ರಾಧಾ ಯಾದವ್ 12 ಎಸೆತದಲ್ಲಿ ಅಜೇಯ 27 ರನ್ ಸಿಡಿಸಿದರು. ಈ ಮೂಲಕ 9 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿತು.

IPL 2023: ಗ್ಲೆನ್‌ ಮ್ಯಾಕ್ಸ್‌​ವೆ​ಲ್‌ ಆರ್‌​ಸಿ​ಬಿ​ಯ ಕೆಲ ಪಂದ್ಯಗಳಿಗೆ ಡೌಟ್‌? 

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಮೆಗ್ ಲ್ಯಾನಿಂಗ್(ನಾಯಕಿ), ಶೆಫಾಲಿ ವರ್ಮಾ, ಜೇಮಿಯಾ ರೋಡ್ರಿಗೆಸ್, ಮಾರಿಜಾನೆ ಕ್ಯಾಪ್, ಆಲಿಸ್ ಕ್ಯಾಪ್ಸಿ, ಜೆಸ್ ಜೋನಾಸನ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ, ಮಿನ್ನು ಮಣಿ, ರಾಧಾ ಯಾದವ್, ಶಿಖಾ ಪಾಂಡೆ 

ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ಯಾಸ್ತಿಕಾ ಭಾಟಿಯಾ, ಹೀಲೇ ಮ್ಯಾಥ್ಯೂಸ್, ನ್ಯೂಟ್ ಸ್ಕಿವಿಯರ್ ಬ್ರಂಟ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಮೀಲೆ ಕೆರ್, ಪೂಜಾ ವಸ್ತ್ರಾಕರ್, ಇಸಿ ವಾಂಗ್, ಅಮನಜೋತ್ ಕೌರ್, ಹುಮೈರಾ ಕಾಜಿ, ಜಿಂತಮಣಿ ಕಲಿತಾ, ಸೈಕಾ ಇಶಾಖ್ 

click me!