ಫುಟ್ಬಾಲ್ ಮೈದಾನದಲ್ಲೇ ಸಲಿಂಗಿಗೆ ಪ್ರಪೋಸ್ ಮಾಡಿದ ಆಸೀಸ್ ಫುಟ್ಬಾಲಿಗ..! ಪ್ರೀತಿ ಗೆದ್ದಿತು ಎಂದ ಫ್ಯಾನ್ಸ್

Published : Mar 14, 2024, 05:31 PM IST
ಫುಟ್ಬಾಲ್ ಮೈದಾನದಲ್ಲೇ ಸಲಿಂಗಿಗೆ ಪ್ರಪೋಸ್ ಮಾಡಿದ ಆಸೀಸ್ ಫುಟ್ಬಾಲಿಗ..! ಪ್ರೀತಿ ಗೆದ್ದಿತು ಎಂದ ಫ್ಯಾನ್ಸ್

ಸಾರಾಂಶ

ಇದೀಗ ಜೋಶ್ ಕ್ಯಾವಲ್ಲೋ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, "ನನ್ನ ಭಾವಿ ಪತಿಯೊಂದಿಗೆ ಈ ವರ್ಷವನ್ನು ಆರಂಭಿಸುತ್ತಿದ್ದೇನೆ. ಮಿಸ್ಟರ್ & ಮಿಸಸ್ ಸದ್ಯದಲ್ಲೇ ಬರಲಿದ್ದೇವೆ. ಈ ಸರ್ಪ್ರೈಸ್ ನೀಡಲು ಅನುವು ಮಾಡಿಕೊಟ್ಟ ಅಡಿಲೇಡ್ ಯುನೈಟೆಡ್‌ಗೆ ಧನ್ಯವಾದಗಳು ಎಂದು ಸೋಷಿಯಲ್ ಮೀಡಿಯಾವಾದ 'ಎಕ್ಸ್‌'ನಲ್ಲಿ ಬರೆದುಕೊಂಡಿದ್ದಾರೆ.

ಅಡಿಲೇಡ್(ಮಾ.14): ಆಸ್ಟ್ರೇಲಿಯಾದ ವೃತ್ತಿಪರ ಫುಟ್ಬಾಲಿಗ ಜೋಶ್ ಕ್ಯಾವಲ್ಲೋ ಬಹಿರಂಗವಾಗಿಯೇ ಫುಟ್ಬಾಲ್ ಮೈದಾನದಲ್ಲಿ ಸಲಿಂಗಿ ವ್ಯಕ್ತಿಗೆ ತಮ್ಮ ಪ್ರೇಮ ನಿವೇದನೆ ಮಾಡಿದ ಕುತೂಹಲಕಾರಿ ಘಟನೆಗೆ ಹಿಂಡ್‌ಮಾರ್ಷ್ ಸ್ಟೇಡಿಯಂ ಸಾಕ್ಷಿಯಾಯಿತು. ಅಡಿಲೇಡ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಆಟಗಾರನಾಗಿರುವ ಜೋಶ್ ಕ್ಯಾವಲ್ಲೋ, ಲೈಟನ್ ಮೊರೆಲ್‌ ಅವರ ಎದುರು ಮಂಡಿಯೂರಿ ಸಹಜೀವನ ನಡೆಸಲು ಪ್ರಪೋಸ್ ಮಾಡಿದ್ದಾರೆ. ಈ ಫೋಟೋಗಳಿಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. 

ಇದೀಗ ಜೋಶ್ ಕ್ಯಾವಲ್ಲೋ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, "ನನ್ನ ಭಾವಿ ಪತಿಯೊಂದಿಗೆ ಈ ವರ್ಷವನ್ನು ಆರಂಭಿಸುತ್ತಿದ್ದೇನೆ. ಮಿಸ್ಟರ್ & ಮಿಸಸ್ ಸದ್ಯದಲ್ಲೇ ಬರಲಿದ್ದೇವೆ. ಈ ಸರ್ಪ್ರೈಸ್ ನೀಡಲು ಅನುವು ಮಾಡಿಕೊಟ್ಟ ಅಡಿಲೇಡ್ ಯುನೈಟೆಡ್‌ಗೆ ಧನ್ಯವಾದಗಳು ಎಂದು ಸೋಷಿಯಲ್ ಮೀಡಿಯಾವಾದ 'ಎಕ್ಸ್‌'ನಲ್ಲಿ ಬರೆದುಕೊಂಡಿದ್ದಾರೆ.

ಟಿ20 ವಿಶ್ವಕಪ್ ಸಮರಕ್ಕೆ ವಿರಾಟ್ ಕೊಹ್ಲಿ ಬೇಡ್ವಾ..? ರನ್‌ ಮಷಿನ್ ಪಾಲಿಗೆ ವಿಲನ್ ಆಗಿರೋದ್ಯಾರು..?

"ನೀವು ಫುಟ್ಬಾಲ್‌ನಲ್ಲಿ ಸುರಕ್ಷಿತ ಭಾವನೆಯನ್ನು ಒದಗಿಸಿಕೊಟ್ಟಿದ್ದೀರ. ಇದು ನನ್ನ ಜೀವನದಲ್ಲಿ ಸಾಧ್ಯವಾಗಲಿದೆ ಎಂದು ಕನಸೂ ಕೂಡಾ ಕಂಡಿರಲಿಲ್ಲ. ಇಲ್ಲಿಂದಲೇ ಆರಂಭವಾದ ನಮ್ಮ ಪಯಣ, ಈ ವಿಶೇಷವನ್ನು ಇದೇ ಪಿಚ್‌ನಲ್ಲಿ ಹಂಚಿಕೊಳ್ಳಲು ಸಾಧ್ಯವಾಗಿದ್ದು ವಿಶೇಷ ಕ್ಷಣ" ಎಂದು ಜೋಶ್ ಕ್ಯಾವಲ್ಲೋ ಬಣ್ಣಿಸಿದ್ದಾರೆ.

ಜೋಶ್ ಕ್ಯಾವಲ್ಲೋ ಅವರ ಭಾವಿ ಪತಿ ಮೊರೆಲ್ ಓರ್ವ ಎಲೆಕ್ಟ್ರಿಷಿಯನ್ ಆಗಿದ್ದಾರೆ. 2021ರಲ್ಲಿ ಟಾಫ್ ಫೈಟ್ ಲೀಗ್ ಆಡುತ್ತಿರುವ ಏಕೈಕ ಗೇ ಫುಟ್ಬಾಲಿಗ ಎನ್ನುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಜೋಶ್ ಕ್ಯಾವಲ್ಲೋ ಅವರಿಗೆ ಜಗತ್ತಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. 

ನಮಗೆ 3 ಸ್ಟೇಡಿಯಂ ನಿರ್ವಹಿಸಲು ಆಗಲ್ಲ, ಧರ್ಮಶಾಲಾದಂತ ಸ್ಟೇಡಿಯಂ ನಿರ್ಮಾಣ ಕನಸಷ್ಟೇ: ವಾಸೀಂ ಅಕ್ರಂ

ಸಲಿಂಗಕಾಮಿಯಾಗಿರುವುದನ್ನು ಬಹಿರಂಗ ಪಡಿಸಲು ನಿರ್ಧರಿಸಿದ ಮೇಲೆ, 21 ವರ್ಷ ವಯಸ್ಸಿನವನು ತನ್ನ ಲೈಂಗಿಕತೆಯನ್ನು ಇನ್ನು ಮುಂದೆ ರಹಸ್ಯವಾಗಿಡಲು ಬಯಸುವುದಿಲ್ಲ ಎಂದು ಹೇಳಿದ್ದರು. "ನಾನು ಫುಟ್ಬಾಲ್ ಆಡಲು ಬಯಸುತ್ತೇನೆ ಮತ್ತು ಸಮಾನವಾಗಿ ಪರಿಗಣಿಸಬೇಕು" ಎಂದು ಅವರು ಹೇಳಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!
ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?