
ಬೆಂಗಳೂರು(ಮಾ.14): ಐಪಿಎಲ್ ಮುಗಿದ ನಂತರ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಆದ್ರೆ, ಈ ವಿಶ್ವಕಪ್ ಸಮರಕ್ಕಾಗಿ ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಬೇಡಾ ಅನ್ನೋ ಮಾತಗಳು ಕೇಳಿ ಬರ್ತಿವೆ. ಕೊಹ್ಲಿ ಬದಲಿಗೆ ಯಂಗ್‌ಸ್ಟರ್ಸ್‌ಗೆ ಅವಕಾಶ ನೀಡಲು ಸೆಲೆಕ್ಟರ್ಸ್ ನಿರ್ಧರಿಸಿದ್ದಾರೆ. ಅಷ್ಟಕ್ಕೂ ಟಿ20 ವಿಶ್ವಕಪ್‌ಗೆ ವಿರಾಟ್ ಬೇಡ ಅನ್ನಲು ಕಾರಣವೇನು..? ಅಂತೀರಾ..? ಈ ಸ್ಟೋರಿ ನೋಡಿ...!
ಹೊಡಿಬಡಿ ಆಟಕ್ಕೆ ವಿರಾಟ್ ಲಾಯಕ್ಕಿಲ್ವಾ..?
ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಅಂತೂ ಗೆಲ್ಲೋದಕ್ಕೆ ಆಗಲಿಲ್ಲ. ಈಗ ಟೀಂ ಇಂಡಿಯಾದ ನೆಕ್ಸ್ಟ್ ಟಾರ್ಗೆಟ್ ಟಿ20 ವರ್ಲ್‌ಕಪ್. ಹೊಡಿಬಡಿ ಆಟದ ವಿಶ್ವಕಪ್ ಸಮರಕ್ಕೆ ಇನ್ನು ಮೂರೇ ಮೂರು ತಿಂಗಳು ಮಾತ್ರ ಬಾಕಿಯಿದೆ. ಆದ್ರೆ, ಈ ಮೆಗಾ ಟೂರ್ನಿಯಿಂದ ರನ್ ಮಷಿನ್ ವಿರಾಟ್ ಕೊಹ್ಲಿ ಹೊರಗಿಡೋ ಪ್ಲಾನ್ ಮಾಡಲಾಗಿದೆ. ಟಿ20 ವಿಶ್ವಕಪ್ ತಂಡಕ್ಕೆ ಕೊಹ್ಲಿಯನ್ನ ಆಯ್ಕೆ ಮಾಡದಿರಲು ಸೆಲೆಕ್ಟರ್ಸ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
42ನೇ ಬಾರಿಗೆ ರಣಜಿ ಟ್ರೋಫಿ ಗೆದ್ದ ಮುಂಬೈ..! ವಿದರ್ಭ ತಂಡಕ್ಕೆ ನಿರಾಸೆ
ಯೆಸ್, ಟಿ20 ವಿಶ್ವಕಪ್ ಕೊಹ್ಲಿ ಬೇಡ ಅಂತ ಸೆಲೆಕ್ಟರ್ಸ್ ಯೋಚಿಸ್ತಿದ್ದಾರೆ. ಅದಕ್ಕೆ ಕಾರಣ, ಟಿ20ಯಲ್ಲಿ ಕೊಹ್ಲಿಯ ಬ್ಯಾಟಿಂಗ್ ಅಪ್ರೋಚ್. ಕೊಹ್ಲಿ ಆರಂಭದಿಂದಲೇ ಅಟ್ಯಾಕಿಂಗ್ ಗೇಮ್ ಆಡಲ್ಲ. 120-130 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸ್ತಾರೆ. ಇದ್ರಿಂದ ತಂಡಕ್ಕೆ ಬಿಗ್ ಸ್ಕೋರ್ ಗಳಿಸೋದಕ್ಕೆ ಸಾಧ್ಯ ವಾಗಲ್ಲ. ಇತರೆ ಆಟಗಾರರ ಮೇಲೆ ಪ್ರೆಶರ್ ಬಿಲ್ಡ್ ಅಗುತ್ತೆ ಅನ್ನೋದು ಸೆಲೆಕ್ಟರ್ಸ್ ವಾದವಾಗಿದೆ.
ಕೊಹ್ಲಿಗೆ ಸಾಧ್ಯವಾಗದ್ದು, ಯಂಗ್‌ಸ್ಟರ್‌ಗಳಿಂದ ಸಾಧ್ಯನಾ..?
ಟಿ20 ವಿಶ್ವಕಪ್ ಸಮರ ನಡೆಯೋದು ಅಮೇರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ. ಲೀಗ್ ಮ್ಯಾಚ್‌ಗಳು ಅಮೇರಿಕಾದಲ್ಲಿ ನಡೆದ್ರೆ, ಸೂಪರ್ 8 ಮ್ಯಾಚ್ಗಳು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿವೆ. ವೆಸ್ಟ್ ಇಂಡೀಸ್ ಪಿಚ್‌ಗಳು ಸ್ಲೋ ಪಿಚ್‌ಗಳಾಗಿವೆ. ಇಂತಹ ಪಿಚ್ ಕಂಡೀಷನ್ನಲ್ಲಿ ಕೊಹ್ಲಿ ಇಂಪ್ಯಾಕ್ಟ್ಫುಲ್ ಅಲ್ಲ ಅನ್ನೋ ಮಾತುಗಳು ಕೇಳಿಬರ್ತಿವೆ.
ವಿಂಡೀಸ್ ನೆಲದಲ್ಲಿ ಈವರೆಗೂ ಮೂರು T20 ಪಂದ್ಯಗಳನ್ನಾಡಿರುವ ವಿರಾಟ್, 37ರ ಸರಾಸರಿ, 141.77ರ ಸ್ಟ್ರೈಕ್ರೇಟ್ನಲ್ಲಿ 111 ರನ್ ಗಳಿಸಿದ್ದಾರೆ. 59 ಹೈಯೆಸ್ಟ್ ಸ್ಕೋರ್ ಆಗಿದೆ. ಜೊತೆಗೆ ಸ್ಪಿನ್ನರ್ಗಳಿಗೆ ಹೆಚ್ಚು ಬಲಿಯಾಗಿದ್ದಾರೆ. ಹೀಗಾಗಿ ಸೆಲೆಕ್ಷನ್ ಕಮಿಟಿ ವಿಶ್ವಕಪ್ ತಂಡದಿಂದ ಕೊಹ್ಲಿಗೆ ಕೊಕ್ ನೀಡೋ ಲೆಕ್ಕಾಚಾರದಲ್ಲಿದೆ.
ನಮಗೆ 3 ಸ್ಟೇಡಿಯಂ ನಿರ್ವಹಿಸಲು ಆಗಲ್ಲ, ಧರ್ಮಶಾಲಾದಂತ ಸ್ಟೇಡಿಯಂ ನಿರ್ಮಾಣ ಕನಸಷ್ಟೇ: ವಾಸೀಂ ಅಕ್ರಂ
ಯೆಸ್, ಸ್ಲೋ ಪಿಚ್ಗಳಲ್ಲಿ ಕೊಹ್ಲಿಯಂತ ಕೊಹ್ಲಿಗೆ ಆಡೋಕೆ ಬರಲ್ಲ ಅನ್ನೊದಾದ್ರೆ...? ಬೇರೆ ಆಟಗಾರರಿಗೆ ಬರುತ್ತಾ...? ಬರೀ ಫಾಸ್ಟ್ ಟ್ರ್ಯಾಕ್ಗಳಲ್ಲೇ ಆಡಿ ಅಭ್ಯಾಸ ಇರೋ ಯಂಗ್‌ಸ್ಟರ್ಸ್‌ಗಳು ವಿಂಡೀಸ್ ನೆಲದಲ್ಲಿ ಅಬ್ಬರಿಸ್ತಾರೆ ಅಂತ ಏನ್ ಗ್ಯಾರಂಟಿ..? ಎಕ್ಸ್ಪಿರಿಯನ್ಸ್ ಇಲ್ಲದ ಯಂಗ್‌ಸ್ಟರ್ ಕೈ ಕೊಟ್ರೆ ತಂಡವನ್ನ ಸೋಲಿನಿಂದ ಕಾಪಾಡೋದ್ಯಾರು..? ಅನ್ನೋ ಪ್ರಶ್ನೆ ಮೂಡಲಿದೆ.
ವಿರಾಟ್ ಕೊಹ್ಲಿ ಆರಂಭದಿಂದಲೇ ಅಟ್ಯಾಕಿಂಗ್ ಗೇಮ್ ಆಡಲ್ಲ ಅನ್ನೋ ನಿಜ. ಆದ್ರೆ, ಸಂದರ್ಭಕ್ಕೆ ತಕ್ಕಂತೆ ಕೊಹ್ಲಿ ಆಡೋದ್ರಲ್ಲಿ ಪಂಟರ್. ಅದರಲ್ಲೂ ಚೇಸಿಂಗ್ ವೇಳೆ, ತಂಡವನ್ನ ಗೆಲುವಿನ ದಡ ಸೇರಿಸಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವೇ ಇದಕ್ಕೆ ಸಾಕ್ಷಿ.
160 ರನ್ ಟಾಗೆರ್ಟ್ ಚೇಸ್ ಮಾಡ್ತಿದ್ದ ಟೀಂ ಇಂಡಿಯಾ, 31 ರನ್‌ಗೆ 4 ವಿಕೆಟ್ ಕಳ್ಕೊಂಡಿತ್ತು. ಭಾರತೀಯರು ಗೆಲುವಿನ ಆಸೆಯನ್ನ ಬಿಟ್ಟಿದ್ದರು. ಆದ್ರೆ, ಕೊಹ್ಲಿ ಕೊನೆಯವರೆಗೂ ಹೋರಾಡಿ, ಭಾರತದ ಬಾವುಟ ಗರ್ವದಿಂದ ಹಾರಾಡುವಂತೆ ಮಾಡಿದ್ರು.
ಅದೇನೆ ಇರಲಿ, ಟಿ20 ವಿಶ್ವಕಪ್‌ಗಿನ್ನು ಮೂರು ತಿಂಗಳಿದೆ. ಅದಕ್ಕೂ ಮೊದಲು ಐಪಿಎಲ್ ನಡೆಯಲಿದೆ. ಐಪಿಎಲ್ನಲ್ಲಿ ಕೊಹ್ಲಿ ಅಬ್ಬರಿಸಲಿ, ತಮ್ಮ ವಿರುದ್ಧದ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿಲಿ ಅನ್ನೋದೆ ಅಭಿಮಾನಿಗಳ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.