ಡಿಸೆಂಬರ್ 09ರಂದು ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು; ಇಲ್ಲಿದೆ RCB ರೀಟೈನ್ ಮಾಡಿಕೊಂಡ ಡೀಟೈಲ್ಸ್

Published : Nov 25, 2023, 12:45 PM IST
ಡಿಸೆಂಬರ್ 09ರಂದು ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು; ಇಲ್ಲಿದೆ RCB ರೀಟೈನ್ ಮಾಡಿಕೊಂಡ ಡೀಟೈಲ್ಸ್

ಸಾರಾಂಶ

ಹರಾಜಿನಲ್ಲಿ ಪ್ರತಿ ಫ್ರಾಂಚೈಸಿ ಬಳಸುವ ಗರಿಷ್ಠ ಮೊತ್ತ ₹13.5 ಕೋಟಿಗೆ ಹೆಚ್ಚಿಸಲಾಗಿದೆ. ಗುಜರಾತ್‌ ಜೈಂಟ್ಸ್‌ ತಂಡ ಹಲವು ಆಟಗಾರ್ತಿಯರನ್ನು ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟಿರುವ ಕಾರಣ ಇತರ ತಂಡಗಳಿಗಿಂದ ಹೆಚ್ಚಿನ ಮೊತ್ತ ಅಂದರೆ ₹5.95 ಕೋಟಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದೆ. ಆರ್‌ಸಿಬಿಗೆ ಈ ಬಾರಿ ಹರಾಜಿನಲ್ಲಿ 3.35 ಕೋಟಿ ರು. ಬಳಸಲು ಅವಕಾಶವಿದೆ.

ನವದೆಹಲಿ(ನ.25): 2ನೇ ಆವೃತ್ತಿಯ ಬಹುನಿರೀಕ್ಷಿತ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌) ಆಟಗಾರ್ತಿಯರ ಹರಾಜು ಪ್ರಕ್ರಿಯೆ ಡಿಸೆಂಬರ್ 9ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಈಗಾಗಲೇ ಎಲ್ಲಾ 6 ತಂಡಗಳು 2ನೇ ಆವೃತ್ತಿಗೂ ಮುನ್ನ ತಮ್ಮಲ್ಲಿ ಉಳಿಸಿಕೊಂಡ ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಿದೆ. 21 ವಿದೇಶಿಯರು ಸೇರಿ ಒಟ್ಟು 60 ಆಟಗಾರ್ತಿಯರನ್ನು 6 ತಂಡಗಳು ರಿಟೈನ್‌ ಮಾಡಿಕೊಂಡಿದ್ದು, ಉಳಿದ ಆಟಗಾರ್ತಿಯರನ್ನು ಹರಾಜಿನಲ್ಲಿ ಖರೀದಿಸಲಿವೆ. 

ಹರಾಜಿನಲ್ಲಿ ಪ್ರತಿ ಫ್ರಾಂಚೈಸಿ ಬಳಸುವ ಗರಿಷ್ಠ ಮೊತ್ತ ₹13.5 ಕೋಟಿಗೆ ಹೆಚ್ಚಿಸಲಾಗಿದೆ. ಗುಜರಾತ್‌ ಜೈಂಟ್ಸ್‌ ತಂಡ ಹಲವು ಆಟಗಾರ್ತಿಯರನ್ನು ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟಿರುವ ಕಾರಣ ಇತರ ತಂಡಗಳಿಗಿಂದ ಹೆಚ್ಚಿನ ಮೊತ್ತ ಅಂದರೆ ₹5.95 ಕೋಟಿಯೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದೆ. ಆರ್‌ಸಿಬಿಗೆ ಈ ಬಾರಿ ಹರಾಜಿನಲ್ಲಿ 3.35 ಕೋಟಿ ರು. ಬಳಸಲು ಅವಕಾಶವಿದೆ.

IPL 2024 ಫಿಟ್ನೆಸ್ ಸಮಸ್ಯೆಯಿಂದ ಧೋನಿ ಬದಲು ರುತುರಾಜ್‌ಗೆ ಸಿಎಸ್‌ಕೆ ನಾಯಕತ್ವ ಸಾಧ್ಯತೆ!

ಬಹುನಿರೀಕ್ಷಿತ ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಮುಂಬರುವ ಫೆಬ್ರವರಿಯಿಂದ ಮಾರ್ಚ್ ತಿಂಗಳಿನೊಳಗಾಗಿ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು, ಡೆಲ್ಲಿ ಕ್ಯಾಪಿಟಲ್ಸ್ ಎದುರು 7 ವಿಕೆಟ್ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಆರ್‌ಸಿಬಿ ಮಹಿಳಾ ತಂಡವು ರೀಟೈನ್ ಮಾಡಿಕೊಂಡ ಪಟ್ಟಿ ಇಲ್ಲಿದೆ: 

ಆಶಾ ಶೊಬಾನ್, ದಿಶಾ ಕಸತ್, ಎಲೈಸಾ ಪೆರ್ರಿ, ಹೀಥರ್ ನೈಟ್, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧನಾ, ಸೋಫಿ ಡಿವೈನ್.

ಭಾರತ ವಿಶ್ವಕಪ್ ಸೋತಿದ್ದು ಒಳ್ಳೆಯದ್ದೇ ಆಯ್ತು:ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟ ಪಾಕಿ ಅಬ್ದುಲ್ ರಜಾಕ್..!

ಇಂಗ್ಲೆಂಡ್‌ ವಿರುದ್ಧ ಟಿ20: ಭಾರತ ಮಹಿಳಾ ತಂಡಕ್ಕೆ ರಾಜ್ಯದ ನಾಲ್ವರು ಆಯ್ಕೆ

ನವದೆಹಲಿ: ನ.29ರಿಂದ ಇಂಗ್ಲೆಂಡ್‌ ವಿರುದ್ಧ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಗೆ ಭಾರತ ‘ಎ’ ತಂಡ ಪ್ರಕಟಗೊಂಡಿದ್ದು, ಶ್ರೇಯಾಂಕ ಪಾಟೀಲ್‌ ಸೇರಿದಂತೆ ಕರ್ನಾಟಕದ 4 ಮಂದಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವೃಂದಾ ದಿನೇಶ್‌, ಜ್ಞಾನನಂದಾ ದಿವ್ಯಾ ಹಾಗೂ ಮೋನಿಕಾ ಪಟೇಲ್‌ ಕೂಡಾ ತಂಡದಲ್ಲಿದ್ದಾರೆ. ತಂಡವನ್ನು ಕೇರಳ ಮಿನ್ನು ಮಾಣಿ ಮುನ್ನಡೆಸಲಿದ್ದಾರೆ. 3 ಪಂದ್ಯಗಳು ನ.29, ಡಿ.1 ಮತ್ತು ಡಿ.3ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿವೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್