Women's Asia Cup 2022: ಭಾರತಕ್ಕಿಂದು ಥಾಯ್ಲೆಂಡ್‌ ಸವಾಲು

Published : Oct 10, 2022, 10:23 AM IST
Women's Asia Cup 2022: ಭಾರತಕ್ಕಿಂದು ಥಾಯ್ಲೆಂಡ್‌ ಸವಾಲು

ಸಾರಾಂಶ

ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತಕ್ಕೆ ಥಾಯ್ಲೆಂಡ್ ಈಗಾಗಲೇ ಬಹುತೇಕ ಸೆಮೀಸ್‌ ಹಾದಿ ಸುಗಮಗೊಳಿಸಿಕೊಂಡಿರುವ ಭಾರತ ರೌಂಡ್ ರಾಬಿನ್ ಹಂತದ ಕೊನೆಯ ಪಂದ್ಯದಲ್ಲಿ ಥಾಯ್ಲೆಂಡ್ ಮಣಿಸುವ ವಿಶ್ವಾಸದಲ್ಲಿ ಹರ್ಮನ್‌ ಪಡೆ

ಸೈಲೆಟ್‌(ಅ.10): ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿರುವ ಭಾರತ, ಏಷ್ಯಾಕಪ್‌ ಮಹಿಳಾ ಟಿ20 ಟೂರ್ನಿಯ ರೌಂಡ್‌ ರಾಬಿನ್‌ ಹಂತದ ಅಂತಿಮ ಪಂದ್ಯದಲ್ಲಿ ಸೋಮವಾರ ಥಾಯ್ಲೆಂಡ್‌ ವಿರುದ್ಧ ಆಡಲಿದೆ. ಭಾರತ ಈವರೆಗೂ ಆಡಿರುವ ಎಲ್ಲಾ ಪಂದ್ಯಗಳಲ್ಲೂ ತಂಡದಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಪಂದ್ಯದಲ್ಲೂ ಕೆಲ ಪ್ರಯೋಗಗಳಿಗೆ ತಂಡ ಮುಂದಾಗಬಹುದು. 2018ರ ಏಷ್ಯಾಕಪ್‌ನಲ್ಲಿ ಥಾಯ್ಲೆಂಡ್‌ ವಿರುದ್ಧ ಭಾರತ ಸುಲಭ ಗೆಲುವು ದಾಖಲಿಸಿತ್ತು.

ಪಂದ್ಯ ಆರಂಭ: ಮಧ್ಯಾಹ್ನ 1ಕ್ಕೆ

ಟಿ20 ವಿಶ್ವಕಪ್‌: ಇಂದು ಭಾರತಕ್ಕೆ ಅಭ್ಯಾಸ ಪಂದ್ಯ

ಪರ್ತ್‌: ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳು ಬಾಕಿ ಇದ್ದು, ಈಗಾಗಲೇ ಆಸ್ಪ್ರೇಲಿಯಾಗೆ ತೆರಳಿರುವ ಭಾರತ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ. ಪರ್ತ್‌ನಲ್ಲಿ ಸೋಮವಾರ ಪಶ್ಚಿಮ ಆಸ್ಪ್ರೇಲಿಯಾ ತಂಡದ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದೆ. ಅ.13ಕ್ಕೆ 2ನೇ ಪಂದ್ಯ ನಡೆಯಲಿದೆ. ಆ ಬಳಿಕ ತಂಡ ಬ್ರಿಸ್ಬೇನ್‌ಗೆ ತೆರಳಿ ಐಸಿಸಿ ಆಯೋಜಿಸಿರುವ 2 ಅಭ್ಯಾಸ ಪಂದ್ಯಗಳಲ್ಲಿ ಆಡಲಿದೆ. 

ಜಸ್‌ಪ್ರೀತ್‌ ಬುಮ್ರಾ, ರವೀಂದ್ರ ಜಡೇಜಾ ಗಾಯಗೊಂಡು ಹೊರಬಿದ್ದಿರುವ ಕಾರಣ ಅವರ ಬದಲು ಆಡುವ ಹನ್ನೊಂದಕ್ಕೆ ಸೂಕ್ತವೆನಿಸುವ ಆಟಗಾರರನ್ನು ಭಾರತ ಇನ್ನಷ್ಟೇ ಹೊಂದಿಸಿಕೊಳ್ಳಬೇಕಿದೆ. ಬೌಲಿಂಗ್‌ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳುವುದು ಭಾರತದ ಪ್ರಮುಖ ಗುರಿ ಎನಿಸಿದೆ.

ಟಿ20: ಆಸೀಸ್‌ ವಿರುದ್ಧ ಇಂಗ್ಲೆಂಡ್‌ಗೆ 8 ರನ್‌ ಜಯ

ಪರ್ತ್‌: ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸುವ ಉದ್ದೇಶದಿಂದ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ 3 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಿದ್ದು, ಭಾನುವಾರ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ 8 ರನ್‌ ಗೆಲುವು ಸಾಧಿಸಿತು. 

IND vs SA ಅಯ್ಯರ್ ಸೆಂಚುರಿ, ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಗೆಲುವಿನ ನಗಾರಿ!

ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಅಲೆಕ್ಸ್‌ ಹೇಲ್ಸ್‌(84) ಹಾಗೂ ಜೋಸ್‌ ಬಟ್ಲರ್‌(68) ಮೊದಲ ವಿಕೆಟ್‌ಗೆ ನೀಡಿದ 132 ರನ್‌ ಜೊತೆಯಾಟದ ನೆರವಿನಿಂದ 20 ಓವರಲ್ಲಿ 6 ವಿಕೆಟ್‌ಗೆ 206 ರನ್‌ ಗಳಿಸಿತು. ಆಸ್ಪ್ರೇಲಿಯಾ 20 ಓವರಲ್ಲಿ 9 ವಿಕೆಟ್‌ಗೆ 200 ರನ್‌ ಗಳಿಸಿತು. ವಾರ್ನರ್‌ರ 73 ರನ್‌ ಹೋರಾಟ ವ್ಯರ್ಥವಾಯಿತು.

ಟಿ20: ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು

ಕ್ರೈಸ್ಟ್‌ಚರ್ಚ್‌ ತ್ರಿಕೋನ ಟಿ20 ಸರಣಿಯಲ್ಲಿ ಭಾನುವಾರ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ 8 ವಿಕೆಟ್‌ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ, 20 ಓವರಲ್ಲಿ 8 ವಿಕೆಟ್‌ಗೆ 137 ರನ್‌ ಗಳಿಸಿತು. ನಜ್ಮುಲ್‌ 33 ರನ್‌ ಗಳಿಸಿದರು. ಬ್ರೇಸ್‌ವೆಲ್‌ 14 ರನ್‌ಗೆ 2 ವಿಕೆಟ್‌ ಕಿತ್ತರು. ನ್ಯೂಜಿಲೆಂಡ್‌ 17.5 ಓವರಲ್ಲಿ 2 ವಿಕೆಟ್‌ಗೆ 142 ರನ್‌ ಗಳಿಸಿತು. ಡೆವೊನ್‌ ಕಾನ್‌ವೇ ಔಟಾಗದೆ 70, ವಿಲಿಯಮ್ಸನ್‌ 30 ರನ್‌ ಗಳಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!